ಬ್ರೇಕಿಂಗ್ ನ್ಯೂಸ್
21-03-25 01:54 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.21 : ವಿಧಾನಸಭೆ ಅಧಿವೇಶನದ ಅಂತಿಮ ದಿನವಾದ ಶುಕ್ರವಾರ ಬೆಳಗ್ಗೆಯೇ ಬಿಜೆಪಿ ಸದಸ್ಯರು ಹನಿಟ್ರ್ಯಾಪ್ ಪ್ರಕರಣ ಮತ್ತು ಮುಸ್ಲಿಂ ಗುತ್ತಿಗೆ ಮೀಸಲು ವಿಚಾರ ಮುಂದಿಟ್ಟು ಸದನದಲ್ಲಿ ಗದ್ದಲ ಎಬ್ಬಿಸಿ ಹೈಡ್ರಾಮಾ ನಡೆಸಿದ್ದಾರೆ. ರಾಜ್ಯ ಬಜೆಟ್‌ಲ್ಲಿ ಮುಸ್ಲಿಂ ಮೀಸಲಾತಿ ನೀಡಿರುವ ವಿರೋಧಿಸಿದ ಬಿಜೆಪಿ ಶಾಸಕರು ಸ್ಪೀಕರ್ ಪೀಠವನ್ನೇರಿ ಅವರ ಮೇಲೆ ಬಜೆಟ್ ಪ್ರತಿ ಹರಿದು ಕಾಗದವನ್ನು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರೀ ಗದ್ದಲ, ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಬಗ್ಗೆ ಸದನದ ಅನುಮೋದನೆ ಪಡೆದಿದ್ದಾರೆ. ಸ್ಪೀಕರ್ ಯುಟಿ ಖಾದರ್ ಬಜೆಟ್ ಪ್ರಸ್ತಾಪ ಓದಿ ಹೇಳಿ ಅಂಗೀಕಾರ ಮಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರು ಪರಸ್ಪರ ಪೇಪರ್ ತೂರಿ ಇಡೀ ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡುತ್ತಿದ್ದಾಗಲೇ ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದೇವೆ ಎಂದು ಸಿಎಂ ಹೇಳುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎದ್ದು ನಿಂತು ಆಕ್ಷೇಪಿಸಿದರು. ಮುಸ್ಲಿಮರಿಗೆ 4% ಮೀಸಲಾತಿ ನೀಡಿದ್ದು ಸರಿಯಲ್ಲ. ಇದು ಕರ್ನಾಟಕ ಜನತೆಗೆ ಮಾಡಿದ ಮೋಸ ಎಂದು ಅಶೋಕ್ ಹೇಳಿದರು. ಇದರ ಬೆನ್ನಲ್ಲೇ ಸ್ಪೀಕರ್ ಪೀಠದ ಮೇಲೆ ವಿಪಕ್ಷ ನಾಯಕರು ಪೇಪರ್, ಬಜೆಟ್ ಪ್ರತಿಗಳನ್ನು ತೂರಿದ್ದಾರೆ.
ಜಯನಗರ ಶಾಸಕ ರಾಮಮೂರ್ತಿ, ದೊಡ್ಡನಗೌಡ ಪಾಟೀಲ್ ಸ್ಪೀಕರ್ ಪೀಠದ ಮೇಲೇರಿದ್ದನ್ನು ನೋಡಿ ಸಿಟ್ಟಗೊಂಡ ಸಿಎಂ ಸಿದ್ದರಾಮಯ್ಯ, ಯಾರ್ರೀ ಅವರು, ಪೀಠದಿಂದ ಕೆಳಿಗಿಳಿಸಿ. ಏಯ್ ಮಾರ್ಷಲ್ಸ್ ಅವರನ್ನು ಎಳೆದು ಹಾಕ್ರೀ.. ಎಂದು ಅಬ್ಬರಿಸಿದ್ದಾರೆ. ಈ ವೇಳೆ ಪೀಠದತ್ತ ಧಾವಿಸಿ ಬಂದ ಮಾರ್ಶಲ್ ಸಿಬಂದಿ, ಅಲ್ಲಿದ್ದವರನ್ನ ಎಳೆದು ಹಾಕಿ ಸ್ಪೀಕರ್ ಸುತ್ತ ನಿಂತು ರಕ್ಷಣೆ ನೀಡಿದರು. ತೂರಿ ಬರುತ್ತಿದ್ದ ಬಜೆಟ್, ಇನ್ನಿತರ ಕಾಗದ ಚೂರುಗಳನ್ನು ಅಡ್ಡ ಹಾಕಿ ಸ್ಪೀಕರ್ ಮುಖಕ್ಕೆ ಬೀಳದಂತೆ ನೋಡಿಕೊಂಡರು.
ಘೋಷಣೆ ನಡುವೆಯೂ ಈ ಸಾಲಿನ ಬಜೆಟ್ ಅಂಗೀಕರಿಸಲಾಗಿದೆ. ಇದಲ್ಲದೆ, ವಿಧಾನಸಭೆಯಲ್ಲಿ ಗದ್ದಲದ ನಡುವೆ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ವಿಧೇಯಕ ಅಂಗೀಕಾರ ಮಾಡಲಾಗಿದೆ. ಅದರೊಂದಿಗೆ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025ಯನ್ನೂ ಅಂಗೀಕರಿಸಲಾಗಿದೆ.
ಸಿಎಂ, ಸಚಿವರು, ಶಾಸಕರ ವೇತನ, ಭತ್ಯೆ ವನ್ ಟು ಡಬಲ್ !
ವೇತನ, ಭತ್ಯೆ ಹೊಸ ತಿದ್ದುಪಡಿ ಪ್ರಕಾರ, ಶಾಸಕರು, ಸ್ಪೀಕರ್, ಸಚಿವರು, ಮುಖ್ಯಮಂತ್ರಿಗಳ ಸಂಬಳ, ಭತ್ಯೆಯನ್ನು ಏರಿಸಲಾಗಿದೆ. ಗ್ಯಾರಂಟಿ ಯೋಜನೆಯಿಂದ ಬೊಕ್ಕಸ ಬರಿದಾಗಿದ್ದೂ ಶಾಸಕರು ತಮ್ಮ ಹೊಟ್ಟೆ ಸೇರುವುದನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಸಿಎಂ ವೇತನ (75 ಸಾವಿರದಿಂದ 1.50 ಲಕ್ಷ ರೂ) ವನ್ ಟು ಡಬಲ್ ಆಗಿದ್ದರೆ, ಸ್ಪೀಕರ್ ವೇತನ 75 ಸಾವಿರ ಇದ್ದುದನ್ನು 1.25 ಲಕ್ಷ ರೂ. ಮಾಡಿದ್ದಾರೆ. ಸ್ಪೀಕರ್ ಮತ್ತು ಸಿಎಂ ಭತ್ಯೆ 4ರಿಂದ 5 ಲಕ್ಷಕ್ಕೆ ಏರಿಸಲಾಗಿದೆ. ಸಚಿವರ ವೇತನವೂ 60 ಸಾವಿರ ಇದ್ದುದು 1.25 ಲಕ್ಷ ರೂ. ಆಗಿದೆ. ಉಳಿದಂತೆ, ಶಾಸಕರ ವೇತನ, ಭತ್ಯೆ, ಪಿಂಚಣಿಯನ್ನೂ ಏರಿಸಲಾಗಿದೆ.
#WATCH | Ruckus erupts in Karnataka Assembly as BJP MLAs enter the Well of the House and also tear and throw papers before the Speaker's chair
— ANI (@ANI) March 21, 2025
(Video source: Karnataka Assembly) pic.twitter.com/giejoDxCXF
The ongoing controversy over an alleged honey trap scandal involving political leaders in Karnataka disrupted Assembly proceedings on Friday with BJP legislators staging protests and demanding a thorough investigation.The ruckus escalated when BJP MLAs stormed the Well of the House, waving CDs as symbolic evidence of blackmail and coercion. Some lawmakers tore and flung papers near the Speaker’s chair, leading to an adjournment of the session.
21-03-25 10:41 pm
HK News Desk
Sameer MD Video Delete Sowjanya, YouTube: ಸೌಜ...
21-03-25 10:35 pm
DK Shivakumar, BJP Muniratna, Honeytrap Case:...
21-03-25 09:21 pm
Karnataka Bandh News Live: ಕರ್ನಾಟಕ ಬಂದ್ ಕರೆ...
21-03-25 08:06 pm
18 BJP MLAs suspended, assembly: ಸ್ಪೀಕರ್ ಪೀಠಕ...
21-03-25 05:46 pm
21-03-25 04:46 pm
HK News Desk
Rana Daggubati, Vijay Deverakonda, Prakash Ra...
20-03-25 10:40 pm
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
21-03-25 12:44 pm
Bangalore Correspondent
Mangalore, Bangalore Airport Drugs; ಮಂಗಳೂರು ಪ...
20-03-25 05:29 pm
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm