ಬ್ರೇಕಿಂಗ್ ನ್ಯೂಸ್
22-03-25 12:28 pm Bangalore Correspondent ಕರ್ನಾಟಕ
ಬೆಂಗಳೂರು, ಮಾ 22: ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳಿಗೆ ಎಚ್ಚರಿಕೆ ನೀಡಲು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಬೆಂಗಳೂರಿನಲ್ಲಿ ಆರಂಭದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗ್ಗೆಯಿಂದಲೇ ಸಾರ್ವಜನಿಕರ ಸಂಚಾರ ಎಂದಿನಂತಿದ್ದು, ಆಟೋ, ಬಸ್ಗಳು ರಸ್ತೆಗಿಳಿದಿವೆ. ಬಂದ್ ಯಶಸ್ಸಿಗಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಬಳಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲವಷ್ಟೇ ದೊರೆತಿರುವುದರಿಂದ ಎಂದಿನಂತೆಯೇ ಸಾರ್ವಜನಿಕರು, ಸಾರಿಗೆ ವಾಹನಗಳ ಸಂಚಾರ ಆರಂಭವಾಗಿದೆ.
ಬಂದ್ಗೆ ಬೆಂಬಲ ನೀಡದವರಿಗೆ ಗುಲಾಬಿ ಹೂ ವಿತರಣೆ :
ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದಿರುವ ಕರ್ನಾಟಕ ಸಂಘಟನೆಗಳ ಸಮಿತಿ ಮತ್ತು ಕರುನಾಡ ಕಾರ್ಮಿಕರ ಸೇನೆ ಸದಸ್ಯರು, ಎಂದಿನಂತೆ ಸಂಚರಿಸುವ ವಾಹನ ಸವಾರರಿಗೆ ಗುಲಾಬಿ ಹೂವು ನೀಡುವ ಮೂಲಕ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಎಂದಿನಂತೆ ದೈನಂದಿನ ಕೆಲಸ ಕಾರ್ಯಗಳತ್ತ ಮುಖಮಾಡಿರುವ ಸಾರ್ವಜನಿಕರಿಗೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಗುಲಾಬಿ ಹೂವು ವಿತರಿಸಲಾಗಿದೆ
ಇನ್ನು ಬಂದ್ಗೆ ಕೆಲವು ಜಿಲ್ಲೆಗಳು ನೀರಸ ಪ್ರತಿಕ್ರಿಯೆ ತೋರಿದೆ. ಗಣಿ ನಾಡು ಬಳ್ಳಾರಿಯಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟಿನಿಂದ ಹಿಡಿದು ಎಲ್ಲವೂ ತೆರೆದಿವೆ. ಬಸ್, ಆಟೋ ಸಂಚಾರವಿದ್ದು ಬಳ್ಳಾರಿ ಮಂದಿ ಬಂದ್ಗೆ ಬೆಂಬಲ ನೀಡಿಲ್ಲ.
ಮಂಗಳೂರಲ್ಲಿ ಬಂದ್ಗೆ ಸಿಗದ ಬೆಂಬಲ;
ಮಂಗಳೂರು ಮತ್ತು ಉಡಪಿ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಬಸ್, ಆಟೋರಿಕ್ಷಾ ಸಂಚಾರ, ಜನಜೀವನ ಯಥಾಸ್ಥಿತಿಯಲ್ಲಿದೆ. ಬಸ್ ಮಾಲೀಕರ ಸಂಘ ಹಾಗೂ ಕೆನರಾ ಬಸ್ ಮಾಲೀಕರ ಸಂಘವು ಈ ಬಂದ್ಗೆ ಸಹಮತ, ಸಹಾನುಭೂತಿ ವ್ಯಕ್ತಪಡಿಸಿದ್ದರೂ, ಬಂದ್ಗೆ ಬೆಂಬಲವಿಲ್ಲ.
ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರಬೇಕಿದ್ದ ಬಸ್ಗಳ ಸಂಚಾರ ಕೂಡ ಬಂದ್ ಆಗಿದೆ. ಇನ್ನುಳಿದಂತೆ ಬೆಳಗಾವಿ ನಗರ, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಎಂದಿನಂತೆ ಬಸ್ಗಳು ಕಾರ್ಯಾಚರಣೆ ಮಾಡುತ್ತಿವೆ.
ಬಸ್ ವಾಪಸ್ ಕರೆಸಿಕೊಂಡ ಮಹಾರಾಷ್ಟ್ರ : ಮಹಾರಾಷ್ಟ್ರದ ಪುಣೆ, ಥಾಣೆ, ಮುಂಬೈ, ಮೀರಜ್, ಸಾಂಗ್ಲಿಯಿಂದ ಬಸ್ ಸೇವೆ ಸಂಪೂರ್ಣ ಸ್ಥಗಿತವಾಗಿದೆ. ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿಗೆ 90 ಬಸ್ಗಳು ಆಗಮಿಸುತ್ತಿದ್ದವು. ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮಹಾರಾಷ್ಟ್ರ ಸರ್ಕಾರ ತಮ್ಮ ಬಸ್ಗಳನ್ನು ವಾಪಸ್ ಕರೆಸಿಕೊಂಡಿದೆ.
ಹೂವು ವ್ಯಾಪಾರಿಗಳಿಗೂ ಕರ್ನಾಟಕ ಬಂದ್ ಬಿಸಿ ತಟ್ಟಿದೆ. ವ್ಯಾಪಾರ-ವಾಹಿವಾಟುವಿಲ್ಲದೇ ಬೆಳಗಾವಿಯ ಹೂವು ಮಾರಾಟಗಾರರು ಕಂಗಾಲಾಗಿದ್ದಾರೆ. ಚಿತ್ರದುರ್ಗ, ಶಿರಾ ಭಾಗದಿಂದ ಬೆಳಗಾವಿಗೆ ತರಹೇವಾರಿ ಹೂವುಗಳು ಬರುತ್ತಿದ್ದವು. ಆಬೂಲಿ, ಮೈಸೂರು ಮಲ್ಲಿಗೆ, ಸಾದಾ ಮಲ್ಲಿಗೆ, ತುಳಸಿ ಮಾಲೆ ಅಲ್ಲಿಂದ ತರಿಸಲಾಗುತ್ತಿತ್ತು.
ಒಂದೆಡೆ ಕನ್ನಡ ಹೋರಾಟಗಾರರು ಪ್ರತಿಭಟನೆಗೆ ಸಜ್ಜಾಗಿದ್ದರೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.
ಇನ್ನು ಮೈಸೂರಿನಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಬಸ್ಗಳಿಗೆ ಅಡ್ಡಲಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆ ಪೊಲೀಸರು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ
Mixed Reactions to Karnataka Bandh in Bengalore, Traffic Normalcy, Mangalore Udupi gets not support , around 50 protestors detain in Mysuru. The pro-Kannada organisations called for the bandh to protest against the recent attack on a Karnataka State Road Transport Corporation (KSRTC) driver in Maharashtra's Belagavi for not knowing Marathi.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm