ಬ್ರೇಕಿಂಗ್ ನ್ಯೂಸ್
27-03-25 02:03 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.27 : ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಯಾದ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕರ್ನಾಟಕ ಕಾಂಗ್ರೆಸ್ ಕಟು ಮಾತುಗಳಲ್ಲಿ ಕಿಚಾಯಿಸಿದ್ದು ಸರಣಿ ಟ್ವೀಟ್ ಮೂಲಕ ಕರ್ನಾಟಕ ಬಿಜೆಪಿ, ಆರೆಸ್ಸೆಸ್ ಮತ್ತು ಯತ್ನಾಳ್ ಅವರನ್ನು ವ್ಯಂಗ್ಯವಾಗಿ ಟೀಕಿಸಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಈಗ ‘ಸಂತೋಷ’ ವಾಯಿತೇ? ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್ ಎಂದು ಕಾಲೆಳೆದಿದೆ.
ಭ್ರಷ್ಟ ಅಪ್ಪ ಮಕ್ಕಳ ಸೂಟ್ ಕೇಸ್ ರಾಜಕೀಯಕ್ಕೆ ಬಗ್ಗಿದ ಬಿಜೆಪಿ ಹೈಕಮಾಂಡ್. ನಾಗಪುರದ ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ಬಿಜೆಪಿ! ಇಂದು ಇಲಿಯಾದ ಯತ್ನಾಳ್! ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
'ಹಿಂದೂ ಹುಲಿ ಇಲಿಯಾದ ಕಥೆ’, ‘ಯತ್ನಾಳ್‌ಗೆ ಬಿಲ ತೋಡಿ ಮಣ್ಣು ಮುಚ್ಚಿದ ವಿಜಯೇಂದ್ರ’, ‘ಭ್ರಷ್ಟ ಅಪ್ಪ ಮಕ್ಕಳ ಸೂಟ್‌ಕೇಸ್ ರಾಜಕೀಯಕ್ಕೆ ಬಗ್ಗಿದ ಹೈಕಮಾಂಡ್’ ಎಂಬ ಬರಹಗಳ ಜೊತೆಗೆ ಯಡಿಯೂರಪ್ಪ, ವಿಜಯೇಂದ್ರ ಮತ್ತು ಯತ್ನಾಳ್ ಫೋಟೊಗಳಿರುವ ಪೋಸ್ಟರ್ ಅನ್ನು ಕಾಂಗ್ರೆಸ್ ಹಂಚಿಕೊಂಡು ಟೀಕೆ ಮಾಡಿದೆ. ಇದಲ್ಲದೆ, ಬಿಜೆಪಿ ಭ್ರಷ್ಟ, ದುಷ್ಟ, ಸುಳ್ಳುಗಾರರ ಪಕ್ಷ! ಎನ್ನುವ ಯತ್ನಾಳ್ ಅವರು ಸ್ಲೇಟ್ ಹಿಡಿದುಕೊಂಡು ನಿಂತಿರುವ ಎಡಿಟೆಡ್ ಫೋಟೋವನ್ನು ಹಾಕಿ ಮತ್ತೊಂದು ಟ್ವೀಟ್ ಮಾಡಿದೆ. ಮಲ್ಲೇಶ್ವರದ ಜಗನ್ನಾಥ ಭವನದ ಮುಂದೆ ಯತ್ನಾಳ್ ಅವರು ನಿಂತಿರುವ ಫೋಟೋವನ್ನು ಹಾಕಲಾಗಿದೆ.
ಟ್ವೀಟ್ ನಲ್ಲಿ, ’ನಾಗಪುರದ ಬಿಜೆಪಿಯನ್ನು ಸೋಲಿಸಿದ ಕರ್ನಾಟಕ ಬಿಜೆಪಿ! ಇಂದು ಇಲಿಯಾದ ಯತ್ನಾಳ್!’ ’ಈಗ 'ಸಂತೋಷ' ವಾಯಿತೇ? ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್! ’ ಎನ್ನುವ ಪದಗಳನ್ನು ಬಳಸಿ ಕೆಪಿಸಿಸಿ ಟೀಕೆ ಮಾಡಿದೆ.
ಈಗ 'ಸಂತೋಷ' ವಾಯಿತೇ?
— Karnataka Congress (@INCKarnataka) March 26, 2025
ಆ ಜೀ ಈ ಜೀ ಗಳ ಮಾತುಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್! pic.twitter.com/io9QllyIEV
In a scathing attack, the Karnataka Congress party has criticized BJP MLA Yatnal for his recent leadership decisions, accusing him of seeking advice from a multitude of sources that have ultimately led to a decline in his political career.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm