Minister Rajanna, honeytrap, Son, Murder attempt: ಹನಿಟ್ರ್ಯಾಪ್ ಸುಳಿ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಮತ್ತೊಂದು ತಲೆನೋವು ; ಆಡಳಿತ ಪಕ್ಷದ ಎಂಎಲ್ಸಿಗೇ ಕೊಲೆ ಸುಪಾರಿ ! ಸಚಿವ ರಾಜಣ್ಣ ಪುತ್ರನಿಂದ ಡಿಜಿಪಿಗೆ ದೂರು 

28-03-25 12:19 pm       Bangalore Correspondent   ಕರ್ನಾಟಕ

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಪ್ರಕರಣ ಎದ್ದು ಕುಳಿತಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರೇ ತನ್ನ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಈ ಆರೋಪ ಮಾಡಿದ್ದು ಡಿಜಿಪಿಗೆ ಲಿಖಿತ ದೂರು ನೀಡಿದ್ದಾರೆ.

ಬೆಂಗಳೂರು, ಮಾ.28 : ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಹನಿಟ್ರ್ಯಾಪ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಪ್ರಕರಣ ಎದ್ದು ಕುಳಿತಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರೇ ತನ್ನ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಈ ಆರೋಪ ಮಾಡಿದ್ದು ಡಿಜಿಪಿಗೆ ಲಿಖಿತ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ತೆರಳಿ ದೂರು ನೀಡಿದ ರಾಜೇಂದ್ರ, ನಾನು ಹನಿಟ್ರ್ಯಾಪ್​ ಯತ್ನದ ಬಗ್ಗೆ ದೂರು ಕೊಡಲು ಬಂದಿಲ್ಲ. ನನ್ನದೇ ಕೊಲೆ ಮಾಡಲು ಕೆಲವರು ಸುಪಾರಿ ಕೊಟ್ಟಿದ್ದಾರೆ. ಆ ಬಗ್ಗೆ ದೂರು ನೀಡುತ್ತಿದ್ದೇನೆ ಎಂದಿದ್ದಾರೆ.

Son of Karnataka minister who raised 'honeytrap' issue claims attempt on  life | Latest News India - Hindustan Times

ಕಳೆದ ಹತ್ತು ದಿನದಿಂದ ಕೊಲೆ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಾನು ಡಿಜಿಪಿ ಅವರನ್ನು ಭೇಟಿ ಮಾಡಿದ್ದೇನೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಅಂತ ಗೃಹ ಸಚಿವರಿಗೆ ಮನವಿ ಮಾಡಿದ್ದೆ. ಈಗ ಡಿಜಿಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ ಎಂದರು.

ನನ್ನ ಮೇಲೆ ಯಾವುದೇ ಹನಿಟ್ರ್ಯಾಪ್ ಯತ್ನ ನಡೆದಿಲ್ಲ. ಆದರೆ ಫೋನ್ ಕಾಲ್ ಗಳು ಬರ್ತಾ ಇದ್ದವು. ಕಳೆದ ನವೆಂಬರ್ 16 ರಂದು ಮಗಳ ಹುಟ್ಟುಹಬ್ಬ ಇತ್ತು. ಅವತ್ತು ಮನೆಗೆ ಶಾಮೀಯಾನ ಹಾಕಲು ಬಂದವರು ನನ್ನ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿದ್ದರು ಎಂದು ಆರೋಪಿಸಿದರು. 

ಕೊಲೆ ಮಾಡುವ ಉದ್ದೇಶದಿಂದಲೇ ಅವರು ಮನೆಗೆ ಬಂದಿದ್ದರು. ಈ ವಿಚಾರ ನನಗೆ ಜನವರಿಯಲ್ಲಿ ಗೊತ್ತಾಗಿದೆ. ಒಂದು ವಾಯ್ಸ್ ರೆಕಾರ್ಡ್ ಬಂದಿತ್ತು. ನನ್ನ ಸೋರ್ಸ್ ಮೂಲಕ ಕೊಲೆಗೆ ಸುಪಾರಿ ಕೊಟ್ಟ ವಿಚಾರ ಬಯಲಾಯ್ತು. ಆ ವಾಯ್ಸ್ ನಲ್ಲಿ 5 ಲಕ್ಷ ಹಣ ನೀಡಿರುವ ಬಗ್ಗೆ ಮಾತಾಡಿದ್ದಾರೆ. ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ರಾಜೇಂದ್ರ ಆರೋಪಿಸಿದರು.

ಈ ಎಲ್ಲಾ ವಿಚಾರವನ್ನು ನಾನು ಡಿಜಿಪಿ ಅವರಿಗೆ ಹೇಳಿದ್ದೇನೆ, ಅವರು ಬಹುಶಃ ತುಮಕೂರು ಎಸ್​ಪಿಗೆ ಹೇಳ್ತಾರೆ. ಅಲ್ಲಿಯೇ ತನಿಖೆ ಮಾಡ್ತಾರೆ. ನಾನು ಹನಿಟ್ರ್ಯಾಪ್ ಬಗ್ಗೆ ಯಾವುದೇ ದೂರನ್ನ ನೀಡಿಲ್ಲ. ನನ್ನ ಕೊಲೆಗೆ ಸುಫಾರಿ ಪಡೆದಿದ್ದಾರೆ ಅಂತ ದೂರು ನೀಡಿದ್ದೇನೆ. ಡಿಜಿಪಿ ಸೂಚನೆಯಂತೆ, ತುಮಕೂರು ಎಸ್ಪಿ ಕಚೇರಿಗೂ ಭೇಟಿ ನೀಡಿ ದೂರು ಕೊಡುತ್ತೇನೆ ಎಂದು ರಾಜೇಂದ್ರ ತಿಳಿಸಿದ್ದಾರೆ.

Karnataka cooperation minister KN Rajanna's son and Congress MLC Rajendra Rajanna on Thursday alleged that there has been an attempt to “murder him”, reported PTI.