ಬ್ರೇಕಿಂಗ್ ನ್ಯೂಸ್
28-03-25 10:47 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.28 : ರಾಜ್ಯದಲ್ಲಿ ನಕ್ಸಲ್ ನಿಗ್ರಹ ದಳವನ್ನು ಒಮ್ಮಿಂದೊಮ್ಮೆಲೇ ನಿಲ್ಲಿಸುವ ಸರ್ಕಾರದ ಪ್ರಸ್ತಾಪಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ನಕ್ಸಲಿಸಂ ಎನ್ನುವುದು ಒಂದು ರೀತಿಯ ಐಡಿಯಾಲಜಿ. ಅದು ಒಮ್ಮೆಲೇ ಸಾಯುವುದಿಲ್ಲ. ಹೀಗಾಗಿ ಮತ್ತೆ ಚಿಗಿತುಕೊಳ್ಳಲ್ಲ ಎಂದು ಹೇಳಲಾಗದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಇತ್ತೀಚಿನ ಬಜೆಟ್ ಭಾಷಣದಲ್ಲಿ ನಕ್ಸಲ್ ನಿಗ್ರಹ ದಳ( ಎಎನ್ಎಫ್) ಬರ್ಖಾಸ್ತು ಮಾಡುವ ಬಗ್ಗೆ ಹೇಳಿಕೆ ನೀಡಿದ್ದರು. ಇದರಿಂದ ವಾರ್ಷಿಕ 50 ಕೋಟಿ ಉಳಿಕೆಯಾಗುತ್ತದೆ ಎಂದೂ ಹೇಳಿದ್ದರು. ಆದರೆ ಈ ನಿರ್ಧಾರವನ್ನು ಪೊಲೀಸ್ ಇಲಾಖೆಯ ಜೊತೆಗೆ ಚರ್ಚಿಸಿ ತೆಗೆದುಕೊಂಡಿರಲಿಲ್ಲ ಎನ್ನಲಾಗುತ್ತಿದೆ. ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಬೀಡು ಬಿಟ್ಟಿದ್ದ ನಕ್ಸಲರ ಪೈಕಿ ಕೊನೆಯ ಬಾರಿಗೆ ಜನವರಿಯಲ್ಲಿ ಆರು ಮಂದಿಯ ತಂಡ ಶರಣಾಗತಿ ಆಗಿತ್ತು. ಇದರೊಂದಿಗೆ ರಾಜ್ಯದಲ್ಲಿ ನಕ್ಸಲ್ ವಾದ ಪೂರ್ಣವಾಗಿ ತೊಲಗಿಬಿಟ್ಟಿದೆ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಸರಕಾರ ಬಂದುಬಿಟ್ಟಿದೆ. ಇದರ ಬೆನ್ನಲ್ಲೇ ರಾಜ್ಯ ನಕ್ಸಲ್ ಮುಕ್ತವಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದರು.
ಆದರೆ ಉನ್ನತ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿಗಳು ಎಎನ್ಎಫ್ ಪಡೆಯನ್ನು ಪೂರ್ತಿಯಾಗಿ ಬರ್ಖಾಸ್ತು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಜೊತೆಗೆ ಚರ್ಚೆಯನ್ನೂ ನಡೆಸಿಲ್ಲ ಎಂದೂ ಹೇಳಿದ್ದಾರೆ. ಎಎನ್ಎಫ್ ಬರ್ಖಾಸ್ತು ಮಾಡುವುದು ತಪ್ಪು ನಡೆಯಾಗುತ್ತದೆ. ರಾಜ್ಯದಲ್ಲಿ ನಕ್ಸಲರು ಏಕ್ಟಿವ್ ಆಗಿ ಇಲ್ಲದೇ ಇರಬಹುದು. ಆದರೆ ನಕ್ಸಲ್ ವಾದ ಎನ್ನುವುದು ಒಂದು ರೀತಿಯ ಐಡಿಯಾಲಜಿ. ಅದು ಪೂರ್ತಿಯಾಗಿ ಸತ್ತಿಲ್ಲ. ನಾವು ತಿಳಿದಿರುವ ನಕ್ಸಲರು ಏಕ್ಟಿವ್ ಆಗಿಲ್ಲ ಅಷ್ಟೇ. ಹಾಗಂದ ಮಾತ್ರಕ್ಕೆ ನಕ್ಸಲ್ ವಾದ ಮಾಯವಾಗಿದೆ ಎಂದರ್ಥವಲ್ಲ. ಮತ್ತೆ ನಕ್ಸಲ್ ವಾದ ಚಿಗಿತುಕೊಳ್ಳದಂತೆ ನಾವು ಎಚ್ಚರದಲ್ಲಿರಬೇಕು ಎಂದು ಇಲಾಖೆಯ ಉನ್ನತ ಅಧಿಕಾರಿಗಳು ಹೇಳುತ್ತಾರೆ.
ಹೀಗಾಗಿ ರಾಜ್ಯ ಸರಕಾರ ಈ ಬಗ್ಗೆ ಪುನರ್ ವಿಮರ್ಶೆ ಮಾಡುವುದು ಒಳಿತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಶರಣಾಗತಿ ಆಗಿರುವ ನಕ್ಸಲರನ್ನು ಇನ್ನೂ ವಿಚಾರಣೆ ಮಾಡಲಾಗುತ್ತಿದೆ. ಎಷ್ಟು ಮಂದಿ ಇವರ ತಂಡದಲ್ಲಿದ್ದಾರೆ, ಎಲ್ಲೆಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಇದೇ ವೇಳೆ, ಛತ್ತೀಸ್ಗಢದಲ್ಲಿ ನಕ್ಸಲ್ ವಾದ ತೀವ್ರವಾಗಿದ್ದು, ಅತ್ಯಂತ ಕೆಟ್ಟ ಸ್ಥಿತಿಗೆ ಸಾಕ್ಷಿಯಾಗುತ್ತಿದೆ. ಅಲ್ಲಿ ಪ್ರತಿ ದಾಳಿ ಹೆಚ್ಚಿದಾಗ ಉತ್ತರದಲ್ಲಿರುವ ನಕ್ಸಲರು ಕರ್ನಾಟಕಕ್ಕೆ ವಲಸೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ, ಕರ್ನಾಟಕದಲ್ಲಿ ಕೂಂಬಿಂಗ್ ಆಪರೇಶನ್ ಸದಾ ಸನ್ನದ್ಧ ಸ್ಥಿತಿಯಲ್ಲಿಡುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಸದ್ಯಕ್ಕೆ ಕರ್ನಾಟಕದ ಎಎನ್ಎಫ್ ತಂಡದಲ್ಲಿ ಪಳಗಿದ ಸಾವಿರ ಮಂದಿ ಸಿಬಂದಿ ಇದ್ದಾರೆ. ಬೇರೆ ಬೇರೆ ಪೊಲೀಸ್ ವಿಂಗ್, ಕೆಎಸ್ಸಾರ್ಪಿ, ಟ್ರಾಫಿಕ್ ಹೀಗೆ ಎಲ್ಲ ತರಬೇತಿಯನ್ನೂ ಪಡೆದವರನ್ನು ಈ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಪೊಲೀಸ್ ಆಗಿ ಸೇವೆ ಮಾಡಿದ ಅನುಭವ ಹೊಂದಿಲ್ಲದವರೂ ತಂಡದಲ್ಲಿದ್ದಾರೆ. ಅಂಥವರನ್ನು ನೇರವಾಗಿ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳುವುದಕ್ಕೂ ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಎಎನ್ಎಫ್ ಹೆಸರಲ್ಲಿ ಕೂಂಬಿಂಗ್ ಆಪರೇಶನ್ ಮಾಡುತ್ತಿದ್ದರೆ ಅರಣ್ಯ ರಕ್ಷಣೆ, ಬುಡಕಟ್ಟು ಜನರ ರಕ್ಷಣೆ, ಯಾವುದೇ ಸಂದರ್ಭದಲ್ಲಿ ಪ್ರತಿದಾಳಿ ಕಾರ್ಯಾಚರಣೆಗೆ ಬಳಸಿಕೊಳ್ಳಲು ಸುಲಭವಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
Police are strongly opposing the state government's plans to disband the Anti-Naxal Force (ANF), arguing that while there may be no active Naxals in Karnataka, Naxalism as an ideology is far from dead.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm