ಬ್ರೇಕಿಂಗ್ ನ್ಯೂಸ್
14-04-25 09:48 pm HK News Desk ಕರ್ನಾಟಕ
ಹುಬ್ಬಳ್ಳಿ, ಏ 14: ಇತಿಹಾಸದಲ್ಲಿಯೇ ಹುಬ್ಬಳ್ಳಿ ನಗರದಲ್ಲಿ ಮೊದಲ ಪೊಲೀಸ್ ಎನ್‌ಕೌಂಟ್ ಭಾನುವಾರ ನಡೆದಿದೆ. ಐದು ವರ್ಷದ ಹೆಣ್ಣು ಮಗುವನ್ನು ಅಪಹರಣ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಆರೋಪಿಯು ಮಹಿಳಾ ಪಿಎಸ್‌ಐ ಗುಂಡೇಟಿಗೆ ಬಲಿಯಾಗಿದ್ದಾನೆ. ಎನ್‌ಕೌಂಟರ್ ಮಾಡಿ ಶೀಘ್ರವೇ ನ್ಯಾಯ ಕೊಡಿಸಿದ ಪಿಎಸ್‌ಐ ಅನ್ನಪೂರ್ಣ ಅವರನ್ನು ಜನ ಲೇಡಿ ಸಿಂಗಂ ಬಿರುದು ನೀಡಿದ್ದಾರೆ.
ಹುಬ್ಬಳ್ಳಿಯ ಅಶೋಕ ನಗರದಲ್ಲಿ ಐದು ವರ್ಷದ ಮಗುವನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಬಾಲಕಿಯನ್ನು ಕೊಲೆ ಮಾಡಿದ್ದ ಆರೋಪಿ ಬಿಹಾರ ಮೂಲದ ರಿತೇಶ್‌ನನ್ನು ಪ್ರಕರಣ ನಡೆದ ದಿನವೇ ಎನ್‌ಕೌಂಟರ್ ಮಾಡಲಾಗಿದೆ. ಹುಬ್ಬಳ್ಳಿಯ ಅಶೋಕ ನಗರ ಮಹಿಳಾ ಪಿಎಸ್‌ಐ ಅನ್ನಪೂರ್ಣ ಅವರು ಆರೋಪಿಯ ಬೆನ್ನಿಗೆ ಗುಂಡಿಳಿಸಿದ್ದಾರೆ. ಹುಬ್ಬಳ್ಳಿ - ಧಾರವಾಡದ ಮಹಾನಗರದ ಇತಿಹಾಸದಲ್ಲಿ ಇದೇ ಮೊದಲ ಎನ್‌ಕೌಂಟರ್ ಎನ್ನಲಾಗುತ್ತಿದೆ. ಈ ಹಿಂದೆ ಹಲವು ಬಾರಿ ರೌಡಿಗಳ ಕಾಲಿಗೆ ಗುಂಡೇಟು ಬಿದ್ದಿದ್ದರು ಎನ್‌ಕೌಂಟರ್ ಆಗಿದ್ದಿಲ್ಲ. ಆದರೆ, ಪಿಎಸ್‌ಐ ಅನ್ನಪೂರ್ಣ ಆರೋಪಿಯ ಬೆನ್ನಿಗೆ ಗುಂಡಿಕ್ಕುವ ಮೂಲಕ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.
ಸದ್ಯಕ್ಕೆ ಅಶೋಕ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಕೆಲಸ ಮಾಡುತ್ತಿರುವ ಅನ್ನಪೂರ್ಣ ಆರ್ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್‌ನವರು. ಗೋಕಾಕ್ ತಾಲೂಕಿನ ಗುಜನಗಟ್ಟಿ ಗ್ರಾಮದ ಅನ್ನಪೂರ್ಣ 2018ನೇ ಬ್ಯಾಚ್‌ನ ಪಿಎಸ್‌ಐ. ರೈತಾಪಿ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಅನ್ನಪೂರ್ಣ ಅವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿಯ ನೆರಳಲ್ಲಿ ಬದುಕಿದ್ದರು. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದ ಅನ್ನಪೂರ್ಣ ಅವರು ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್‌ಸಿ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದರು. ಎಂಎಸ್‌ಸಿ ಪದವಿ ಪಡೆದರು ಬೇರೆ ನೌಕರಿಗಳತ್ತ ಮುಖಮಾಡದೇ ಪೊಲೀಸ್ ಇಲಾಖೆ ಸೇರಿದ್ದರು.
ಅನ್ನಪೂರ್ಣ ಅವರು ಈ ಮೊದಲು ಹುಬ್ಬಳ್ಳಿ ಶಹರ ಠಾಣೆ, ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅದಾದ ಬಳಿಕ ಅಶೋಕ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಅಲ್ಲಿಯೇ ಕೆಲಸವನ್ನು ಅನ್ನಪೂರ್ಣ ಮುಂದುವರೆಸಿದ್ದರು. ಈಗ ಐದು ವರ್ಷದ ಬಾಲಕಿಯ ಕೊಲೆ ಕೇಸ್‌ನ ಆರೋಪಿಯ ಎನ್‌ಕೌಂಟರ್ ಮೂಲಕ ರಾಜ್ಯದ ಜನರ ಗಮನವನ್ನು ಅನ್ನಪೂರ್ಣ ಸೆಳೆದಿದ್ದಾರೆ. ಆರೋಪಿ ಹಲ್ಲೆಯಿಂದ ಗಾಯಗೊಂಡಿರುವ ಲೇಡಿ ಸಿಂಗಂ ಅನ್ನಪೂರ್ಣ ಸೇರಿ ಇನ್ನಿಬ್ಬರು ಸಿಬ್ಬಂದಿ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನ್ನಪೂರ್ಣ ಗುಂಡಿಗೆ ಹೆಣವಾದ ನೀಚ ರಿತೇಶ್ ;
ಮೂರು ಬಾರಿ ಗಾಳಿಯಲ್ಲಿ ಗುಂಡು, ಕಾಲಿಗೆ, ಬೆನ್ನಿಗೆ ಏಟು ಎನ್‌ಕೌಂಟರ್ ಹೇಗೆ ನಡೆಯಿತು ಎಂಬುದನ್ನು ನೋಡಿದರೆ, ಆರೋಪಿ ಮೇಲೆ ಬೇಕು ಅಂತಲೇ ಗುಂಡು ಹಾರಿಸಲಿಲ್ಲ ಎನ್ನಲಾಗಿದ್ದು, ಆತ್ಮರಕ್ಷಣೆಗೆ ಗುಂಡು ಹಾರಿಸಿದ ಗುಂಡಿಗೆ ಆರೋಪಿ ರಿತೇಶ್ ಸಾವನ್ನಪ್ಪಿದ್ದಾನೆ. ಹೀಗಾಗಿ, ಇದು ಎನ್‌ಕೌಂಟರ್ ಆದಂತಾಗಿದೆ. ಅಡಗಿ ಕುಳಿತಿದ್ದ ಆರೋಪಿಯನ್ನು ಬಂಧಿಸಲು ಆತನ ಮನೆ ಬಳಿ ತೆರಳಿದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜತೆಗೆ ಪೊಲೀಸರ ವಾಹನದ ಮೇಲೂ ಕಲ್ಲು ತೂರಿದ್ದಾನೆ. ಇದರಿಂದ ಪಿಎಸ್‌ಐ ಅನ್ನಪೂರ್ಣಾ ಸೇರಿದಂತೆ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವೇಳೆ ಎಚ್ಚರಿಕೆ ಸಂದೇಶ ನೀಡುವ ಉದ್ದೇಶದಿಂದ ಪಿಎಸ್‌ಐ ಅನ್ನಪೂರ್ಣ ಮೊದಲು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆತನ ದಾಳಿ ಮಾತ್ರ ಮುಂದುವರಿದಿತ್ತು. ಈ ವೇಳೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆತನ ಕಾಲಿಗೆ ಮೊದಲು ಗುಂಡು ಹಾರಿಸಲಾಗಿದೆ. ಆಗಲೂ ಆತ ತನ್ನ ಪ್ರಯತ್ನ ಮುಂದುವರೆಸಿದಾಗ ಮತ್ತೊಮ್ಮೆ ಫೈರ್ ಮಾಡಲಾಗಿದ್ದು, ಬುಲೆಟ್ ಆತನ ಬೆನ್ನಿಗೆ ಬಿದ್ದು, ಸಾವನ್ನಪ್ಪಿದ್ದಾನೆ.
ಪಿಎಸ್‌ಐಗೆ ಅತ್ಯುನ್ನತ ಪದಕ ನೀಡಬೇಕು ; ಲಕ್ಷ್ಮೀ ಹೆಬ್ಬಾಳ್ಕರ್
ಇನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಅತ್ಯುನ್ನತ ಪದಕ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಗೆ ಶಿಫಾರಸು ಮಾಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಾನು ಓರ್ವ ಸಚಿವೆಯಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ನಾನು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಇಂಥ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆ ಆಗಬೇಕು, ದೌರ್ಜನ್ಯಕ್ಕೆ ಒಳಗಾದವರಿಗೆ ತ್ವರಿತವಾಗಿ ನ್ಯಾಯಸಿಗಬೇಕು. ಅನ್ನಪೂರ್ಣ ಅವರ ಕಾರ್ಯ ಇತರ ಅಧಿಕಾರಿಗಳಿಗೆ ದಾರಿ ದೀಪವಾಗಬೇಕು ಎಂದು ಸಚಿವರು ಹೇಳಿದರು.
ಇಂತಹ ಪಿಡುಗು ನಮ್ಮ ಸಮಾಜದಿಂದ ನಿರ್ಮೂಲನೆ ಆಗಬೇಕು. ಸರಕಾರಿ ನೌಕರರಿಗೆ ನಮ್ಮ ಇಲಾಖೆಯಿಂದ ಕೊಡ ಮಾಡುವ ರಾಣಿ ಚನ್ನಮ್ಮ ಪ್ರಶಸ್ತಿ ನೀಡವುದಿಲ್ಲ. ಒಂದು ವೇಳೆ ಸರಕಾರಿ ನೌಕರರಿಗೆ ಕೊಡಬೇಕು ಅಂತ ಬಂದರೆ ಅನ್ನಪೂರ್ಣ ಅವರ ಹೆಸರು ಮೊದಲಿರುತ್ತದೆ ಎಂದು ಉತ್ತರಿಸಿದರು.
ಇನ್ನು ಸುದ್ದಿ ಕೇಳಿ ರಾಜಕಾರಣಿಗಳೂ ರಾಜಕೀಯದ ಮಾತುಗಳನ್ನ ಆಡಲು ಹೋಗಿಲ್ಲ. ಪ್ರಕರಣದ ತೀವ್ರತೆ ಅರಿತ ಸಚಿವ ಸಂತೋಷ್ ಲಾಡ್ ಕೂಡ ಮೃತ ಮಗುವನ್ನ ನೋಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳೋ ಕೆಲಸ ಮಾಡಿದ್ರು. ಇದಾದ ಮೇಲೆ ಗಾಯಗೊಂಡಿದ್ದ ಅನ್ನಪೂರ್ಣರನ್ನ ಭೇಟಿ ಮಾಡಿದ್ರು..ಲೇಡಿ ಪಿಎಸ್‌ಐ ಶೌರ್ಯಕ್ಕೆ ಸೆಲ್ಯೂಟ್ ಹೊಡೆದ್ರು. ಇದರ ಜೊತೆಗೆ ತರಹದ ಘಟನೆ ಮತ್ತೆ ಮರುಕಳಿಸದಂದೆ ಕ್ರಮ ಕೈಗೊಳ್ಳುವಂತೆ ಸೂಚಿಸಿರೋದಾಗಿಯೂ ತಿಳಿಸಿದ್ರು.
ಇವತ್ತು ಹುಬ್ಬಳ್ಳಿಯಲ್ಲಿ ಬಾಲಕಿ ಆತ್ಮಕ್ಕೆ ಶಾಂತಿ ಸಿಗೋದ್ರ ಹಿಂದೆ ಪೊಲೀಸ್ ಆಯುಕ್ತ ಶಶಿಕುಮಾರ್ ಪಾತ್ರ ಬಹುಮುಖ್ಯವಿದೆ. ಕಳೆದ ಒಂಬತ್ತು ತಿಂಗಳ ಹಿಂದೆ ಹುಬ್ಬಳಿಗೆ ಕಾಲಿಟ್ಟಿದ್ಟ ಖಡಕ್ ಕಮಿಷನರ್ ಶಶಿಕುಮಾರ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅನೇಕ ಕ್ರಮ ಕೈಗೊಂಡಿದ್ದಾರೆ. ನಗರಕ್ಕೆ ಎಂಟ್ರಿ ಕೊಡ್ತಿದ್ತಂತೆ ಮಾದಕ ವಸ್ತುಗಳ ಸೇವನೆಗೆ ಮಟ್ಟ ಹಾಕೋದಕ್ಕೆ ಆಪರೇಷನ್ಗಳನ್ನ ಮಾಡಿದ್ದಾರೆ. ಇದಷ್ಟೇ ಅಲ್ಲ ರೌಡಿಶೀಟರ್ಗಳ ಹೆಡೆಮುರಿ ಕಟ್ಟೋದ್ರಲ್ಲೂ ಡೇರಿಂಗ್ ಅನಿಸಿಕೊಂಡಿರೋ ಶಶಿಕುಮಾರ್ರವರ ಸಾರಥ್ಯದಲ್ಲೇ, ಬಿಹಾರಿ ಕೀಚಕನ ಸೆರೆ ಹಿಡಿಯೋದಕ್ಕೆ ಬಲೆ ಬೀಸಲಾಗಿತ್ತು ಅನ್ನೋ ಮಾಹಿತಿ ಕೂಡ ಇದೆ. ಇವತ್ತು ಇವರ ಕಾರ್ಯವೈಖರಿಗೆ ಸಾಕ್ಷಿ ಎಂಬಂತೆ ಪಾಪಿಯೊಬ್ಬನ ಸಂಹಾರ ಕೂಡ ನಡೆದಿದೆ.
How Hubballi police PSI Annapurna gunned down Bihar man accused of murder and rape.who is Annapurna and her background, Minister Lakshmi Hebbalkar on Monday said that she would recommend Police Sub-Inspector (PSI) Annapurna for a top state medal for her action in the recent Hubballi murder case, in which a minor girl was killed.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm