ಬ್ರೇಕಿಂಗ್ ನ್ಯೂಸ್
22-04-25 10:13 pm Bangalore Correspondent ಕರ್ನಾಟಕ
ಬೆಂಗಳೂರು, ಎ.22 : ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ವರದಿಯ ಕೆಲವು ಅಂಶಗಳು ಲೀಕ್ ಆಗಿದ್ದು ಮುಸ್ಲಿಮರ ಜನಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆ ಆಗಿರುವುದನ್ನು ತೋರಿಸಿದೆ.
2015ರ ವೇಳೆಗೆ ನಡೆಸಲಾದ ಸಮೀಕ್ಷೆಯಲ್ಲಿ ಯಾವ್ಯಾವ ಸಮುದಾಯ, ಎಷ್ಟೆಷ್ಟು ಹೆಚ್ಚಾಗಿದೆ ಎಂಬ ಸಂಗತಿ ಇದೀಗ ಬಯಲಾಗಿದೆ. ಅದರಲ್ಲೂ, 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.90ರಷ್ಟು ಏರಿಕೆಯಾಗಿದೆ ಎನ್ನುವ ಅಂಶ ಸೋರಿಕೆಯಾಗಿದೆ. ಪರಿಶಿಷ್ಛ ಜಾತಿ ಸಮುದಾಯದ ಜನಸಂಖ್ಯೆಯೂ ಗಣನೀಯ ಮಟ್ಟದಲ್ಲಿ ಏರಿಕೆಯಾಗಿದೆ. ವರದಿ ಪ್ರಕಾರ 1984ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆ ಪ್ರಕಾರ 61 ಲಕ್ಷ ಜನರಿದ್ದ ವೀರಶೈವ ಲಿಂಗಾಯತರು ಜಾತಿ ಲೆಕ್ಕಾಚಾರದಲ್ಲಿ ನಂ.1 ಸ್ಥಾನದಲ್ಲಿದ್ದರು. ಆದರೆ, 2015ರ ಕಾಂತರಾಜು ಆಯೋಗದ ಸಮೀಕ್ಷೆ ಪ್ರಕಾರ 66 ಲಕ್ಷ ಜನಸಂಖ್ಯೆ ಇರುವ ವೀರಶೈವ ಲಿಂಗಾಯತರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಲಿಂಗಾಯತರ ಜನಸಂಖ್ಯೆ ವೃದ್ಧಿ ಕೇವಲ 8.50ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ಹಾಗೆಯೇ 57 ಲಕ್ಷವಿದ್ದ ಎಸ್‌ಸಿ ಸಮುದಾಯ 30 ವರ್ಷದಲ್ಲಿ 1 ಕೋಟಿಯಾಗಿದ್ದು ಬರೋಬ್ಬರಿ 90 ಶೇಕಡದಷ್ಟು ಜನಸಂಖ್ಯೆ ವೃದ್ಧಿಯಾಗಿದೆ. ಮುಸ್ಲಿಮರ ಸಂಖ್ಯೆಯೂ ಕೂಡ 1984ರಲ್ಲಿ ಕರ್ನಾಟಕದಲ್ಲಿ ಕೇವಲ 39 ಲಕ್ಷ ಜನರಿದ್ದರು. ಆದರೆ, ಇವರ ಸಂಖ್ಯೆ ಕಾಂತರಾಜು ಆಯೋಗದ ವರದಿ ಪ್ರಕಾರ 76 ಲಕ್ಷವಾಗಿದೆ. ಅಂದರೆ, ಬರೋಬ್ಬರಿ ಶೇ. 94 ರಷ್ಟು ಜನಸಂಖ್ಯೆ ಪ್ರಮಾಣ ಹೆಚ್ಚಾಗಿದೆ.
1984ರಲ್ಲಿ ಇಡೀ ರಾಜ್ಯದಲ್ಲಿ ಶೇಕಡಾ 17ರಷ್ಟು ಜನಸಂಖ್ಯೆ ಹೊಂದಿದ್ದ ಲಿಂಗಾಯತರು ಈಗ ಮೂರನೇ ಸ್ಥಾನಕ್ಕೆ ಕುಸಿದಿರುವುದಾಗಿ ಈಗ ಮಂಡನೆಯಾದ ವರದಿಯಲ್ಲಿ ತಿಳಿಸಲಾಗಿದೆ. 2015ರ ಹೊತ್ತಿಗೆ, ಹೊಸ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ ಎಂದೂ ಕರೆಯಲ್ಪಡುವ) ಪ್ರಕಾರ, ಅದರ ಪಾಲು ಶೇ.11ಕ್ಕೆ ಇಳಿದಿದೆ.
ಸರ್ವೇಯಲ್ಲಿ ಲಿಂಗಾಯತರಿಗೆ ಮೂರನೇ ಸ್ಥಾನ ನೀಡಿ ಮುಸ್ಲಿಮರಿಗೆ 2ನೇ ಸ್ಥಾನ, ಪರಿಶಿಷ್ಟ ಜಾತಿಗಳು ಅತಿದೊಡ್ಡ ವರ್ಗ ಎಂದು ವರದಿ ನೀಡಿದ್ದಾರೆ. ಆದರೆ ಈಗ ಉಳಿದ ಸಮುದಾಯಗಳು ನಿಧಾನಗತಿಯಲ್ಲಿ ಏರಿಕೆ ಕಂಡಿದ್ದರೂ, ಮುಸ್ಲಿಮರ ಜನಸಂಖ್ಯೆ ಏಕಾಏಕಿ 30 ವರ್ಷದಲ್ಲಿ ಶೇಕಡಾ 94ರಷ್ಟು ಬೆಳವಣಿಗೆ ಆಗಿದ್ಹೇಗೆ ಎಂದು ವಿಪಕ್ಷಗಳು ಪ್ರಶ್ನಿಸುತ್ತಿವೆ.
ವೆಂಕಟಸ್ವಾಮಿ ಆಯೋಗವು 1984 ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಿತ್ತು. ಇದು ರಾಜ್ಯದ 3.61 ಕೋಟಿ ಜನಸಂಖ್ಯೆಯ 91% ರಷ್ಟನ್ನು ಒಳಗೊಂಡಿತ್ತು. 2015 ರ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗಳು ಏಕೈಕ ಅತಿದೊಡ್ಡ ಸಮುದಾಯವಾಗಿದ್ದು, ನಂತರದ ಸ್ಥಾನದಲ್ಲಿ ಮುಸ್ಲಿಮರು ಇದ್ದಾರೆ. ವೀರಶೈವ-ಲಿಂಗಾಯತರು ಮೂರನೇ ಸ್ಥಾನ ಪಡೆದಿದ್ದು, ನಂತರದ ಸ್ಥಾನಗಳಲ್ಲಿ ಒಕ್ಕಲಿಗರು, ಕುರುಬರು ಮತ್ತು ಬ್ರಾಹ್ಮಣರು ಇದ್ದಾರೆ. ಈ ಅಂಕಿ ಅಂಶಗಳೇ 'ಪ್ರಬಲ' ಸಮುದಾಯದ ನಾಯಕರನ್ನು ಬೆಚ್ಚಿಬೀಳಿಸಿವೆ.
Prabal Raises Concerns Over Caste Census Amidst Significant Population Shifts, Muslims and Scheduled Castes See Doubling in 30 Years, Lingayats in Focus
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 03:33 pm
Mangalore Correspondent
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm