ಬ್ರೇಕಿಂಗ್ ನ್ಯೂಸ್
24-04-25 10:13 pm HK News Desk ಕರ್ನಾಟಕ
ಶಿವಮೊಗ್ಗ, ಎ.24 : ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಮಂಜುನಾಥ್ ಉಸಿರು ಚೆಲ್ಲಿದ್ದಾರೆ. ಸದ್ಯ ಅವರ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಬ್ರಾಹ್ಮಣ ಸಮುದಾಯದಂತೆ ಶಿವಮೊಗ್ಗದಲ್ಲಿ ನೆರವೇರಿಸಲಾಯಿತು. ಇದೇ ವೇಳೆ ಅವರ ಪುತ್ರ ಅಭಿಜೈ ನೋವಿನಲ್ಲೇ ಅಲ್ಲಿ ಅನುಭವಿಸಿದ ಕರಾಳತೆಯನ್ನು ಕಣ್ಣಿಗೆ ಕಟ್ಟಿದಂತೆ ಮಾಧ್ಯಮಗಳಿಗೆ ಹೇಳಿದ್ದಾರೆ.
ನಾವೆಲ್ಲಾ ಪಹಲ್ಗಾಮ್ಗೆ ಹೋದ ಕೇವಲ 10 ನಿಮಿಷಗಳಲ್ಲೇ ಭಯೋತ್ಪಾದಕರು ಗುಂಡಿನ ದಾಳಿ ಆರಂಭಿಸಿದರು. ಸ್ಥಳದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಉಗ್ರರು ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡು ಇದ್ದರು. ಆದರೆ ಸ್ಥಳದಲ್ಲಿ ನೀವು ಹಿಂದೂಗಳ.. ಹಿಂದೂಗಳ ಎಂದು ಕೇಳಿ.. ಕೇಳಿ ಗುಂಡು ಹಾರಿಸಿ ಪ್ರಾಣ ತೆಗೆದರು, ಅವ್ರಿಗೆ ನಾನು ಏಯ್ ಕುತ್ತೇ ಎಂದು ಜೋರಾಗಿ ಕೂಗಿದೆ ಎಂದರು.
ಪಹಲ್ಗಾಮ್ನಲ್ಲಿ ಮಿನಿ ಸ್ವಿಡ್ಜರ್ಲ್ಯಾಂಡ್ ಎನ್ನುವ ಪ್ರದೇಶ ಇದೆ. ಏಳು ಪ್ರದೇಶಗಳಲ್ಲಿ ಮಿನಿ ಸ್ವಿಡ್ಜರ್ಲ್ಯಾಂಡ್ ಎನ್ನುವುದು 3ನೇ ಪ್ರದೇಶ. ಆ ದಿನ ನಾನು ಏನು ತಿಂದಿರಲಿಲ್ಲ. ಹಾಗಾಗಿ ಅಪ್ಪ, ಅಮ್ಮ ತಿಂಡಿ ತರೋಕೆ ಹೋಗಿದ್ದರು. ಬಳಿಕ ನನ್ನನ್ನು ಕರೆದುಕೊಂಡು ಬರಲು ಅಮ್ಮನನ್ನ ವಾಪಸ್ ಕಳಿಸಿದ್ದರು. ಆಗ ಗುಂಡಿನ ಸದ್ದು ಕೇಳಿತು. ನಾವೆಲ್ಲ ಭಾರತೀಯ ಸೇನೆಯ ಅಭ್ಯಾಸ ನಡೆಯುತ್ತಿದೆ ಎಂದು ಅಂದುಕೊಂಡಿದ್ದೇವು. ಆದರೆ ಏಕಾಏಕಿ ಎಲ್ಲರೂ ಓಡಲು ಆರಂಭಿಸಿದ್ದರಿಂದ ಉಗ್ರರ ದಾಳಿ ಎಂದು ಗೊತ್ತಾಯಿತು. ನಾನು, ಅಮ್ಮ ಇಬ್ಬರು ಕೈ ಹಿಡಿದುಕೊಂಡು ಓಡುವಾಗ ಅಪ್ಪ ಎಲ್ಲಿ ಅಂತ ನೋಡಿದಾಗ ಆವಾಗಲೇ ಉಗ್ರರು ಶೂಟ್ ಮಾಡಿದ್ದರು. ಆದರೆ ಅಲ್ಲಿನ ಸ್ಥಳೀಯರು ನಮಗೆ ಹೆಚ್ಚು ಸಹಾಯ ಮಾಡಿದರು. ಕಾಶ್ಮೀರದಲ್ಲಿ ಪೊಲೀಸ್, ಏರ್ಪೋರ್ಟ್ ಸಿಬ್ಬಂದಿ, ಅಧಿಕಾರಿಗಳ ಸಹಾಯದಿಂದ ಇವತ್ತು ಇಲ್ಲಿಗೆ ಬಂದು ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಕೆಲವರ ಹಣೆಯ ಬೊಟ್ಟು ಹಾಗೂ ಕೈ ಬಳೆಗಳನ್ನು ನೊಡಿ ಗುಂಡು ಹಾರಿಸಿದರು. ಇದೇ ವೇಳೆ ನಾವು ಹಿಂದೂಗಳು ಎನ್ನವುದು ಅವರಿಗೆ ನೇರವಾಗಿ ಗೊತ್ತಾಯಿತು. ಇದರಿಂದ ನನ್ನ ತಂದೆಗೆ ಗುಂಡಿಟ್ಟು ಜೀವ ತೆಗೆದರು. ದೇಶದ ಪ್ರಧಾನಿ ಮೋದಿ ಹಾಗೂ ಭಾರತೀಯ ಸೇನೆಯ ಮೇಲೆ ನಮಗೆ ನಂಬಿಕೆ ಇದೆ. ಅವರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಹೋದರರು ನಮ್ಮನ್ನು ಕಾಪಾಡಿದರು ;
ಮಂಜುನಾಥ ರಾವ್ ಪತ್ನಿ ಪಲ್ಲವಿ ಮಾತನಾಡಿ, ಉಗ್ರರ ಗುಂಡಿಗೆ ನನ್ನ ಪತಿ ಸಾವಾದ ನಂತರ ದಾಳಿ ಸ್ಥಳದಿಂದ ನಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದವರು ಸ್ಥಳೀಯ ಮುಸ್ಲಿಮರು. ಅವರನ್ನು ನಾನು ನನ್ನ ಸಹೋದರುರು ಎಂದೇ ಕರೆಯುತ್ತೇನೆ. ಮೂವರು ಮುಸ್ಲಿಂ ಸೋದರರು ನಮ್ಮನ್ನು ಸುತ್ತುವರಿದರು. ಬಿಸ್ಮಿಲ್ಲಾ, ಬಿಸ್ಮಿಲ್ಲಾ ಎಂದು ಹೇಳುತ್ತಾ, ನಮ್ಮನ್ನು ಸುರಕ್ಷಿತ ಪ್ರದೇಶಕ್ಕೆ ಕರೆದು ತಂದರು. ಬಬ್ಬರು ನನ್ನ ಮಗನನ್ನು ಹೆಗಲ ಮೇಲೆಯೇ ಹೊತ್ತು ಕರೆದುಕೊಂಡು ಬಂದರು. ದುರ್ಗಮ ಹಾದಿಯಲ್ಲಿ ನಾನು ಬೀಳದಂತೆ ಎಚ್ಚಕೆ ವಹಿಸಿದರು. ನಾವು ಪ್ರವಾಸ ಕೈಗೊಂಡಿದ್ದ ವಾಹನದ ಚಾಲಕ ಸಹ ನಮ್ಮೊಂದಿಗೇ ಇದ್ದು, ನೆರವು ನೀಡಿದರು ಎಂದು ಹೇಳಿದ್ದಾರೆ.
Heroic Act, Muslim Man Rescues Victim of Terrorist Attack in Shivamogga, Manjunath son Defies Hate with Bravery.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 02:30 pm
Mangalore Correspondent
Mangalore Accident, Kulur, Death: ಕುಳೂರಿನಲ್ಲಿ...
09-09-25 11:48 am
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm