ಬ್ರೇಕಿಂಗ್ ನ್ಯೂಸ್
28-04-25 10:15 pm HK News Desk ಕರ್ನಾಟಕ
ಬೆಳಗಾವಿ, ಏ 28: ಗಡಿನಾಡು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರ ವಿರುದ್ಧವೇ ಗರಂ ಆದ ಘಟನೆ ನಡೆಯಿತು. ಸಿಟ್ಟಾದ ಸಿಎಂ ಪೊಲೀಸ್ ಅಧಿಕಾರಿಗೆ ಹೇ ಎಂದು ಗದರಿ ಕೈ ಎತ್ತಿ ಹೊಡೆಯಲು ಮುಂದಾದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಸೋಮವಾರ ಕಾಂಗ್ರೆಸ್ನಿಂದ ಆಯೋಜಿಸಿದ್ದ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಆಡಳಿತ ವಿರೋಧಿ ಖಂಡನಾ ಸಮಾವೇಶದಲ್ಲಿ ಈ ಘಟನೆ ನಡೆಯಿತು. ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಆಯೋಜಿಸಿರುವ ಜನಾಕ್ರೋಶ ಸಭೆಯಲ್ಲಿ ಸಿಎಂ ಭಾಷಣ ಮಾಡುವಾಗ, ಬಿಜೆಪಿಯ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಮಾಡಿ ಅಡ್ಡಿಪಡಿಸಲಾಯಿತು. ಜತೆಗೆ ಬಿಜೆಪಿ ಕಾರ್ಯಕರ್ತರು ವೇದಿಕೆ ಕೆಳಗೆ ಗಲಾಟೆ ಮಾಡುತ್ತಿದ್ದರು. ಜತೆಗೆ ಕಾರ್ಯಕರ್ತರು ಓಡಾಟ ಹೆಚ್ಚಿತ್ತು. ಈ ವೇಳೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ ಪೊಲೀಸರ ಮೇಲೆ ಗರಂ ಆದರು.
ಹೋಗುವವರಾದರೆ ಹೋಗಲಿ, ಕುಳಿತುಕೊಳ್ಳುವವರಾದರೆ ಕುಳಿತುಕೊಳ್ಳಲಿ. ಹೇ ಕುಳಿತುಕೊಳ್ಳಿ. ಯಾರು ಅದು ಎಂದು ಕೇಳಿದರು. ಹೇ ಪೊಲೀಸ್ ಬಾರಯ್ಯ ಇಲ್ಲಿ ಯಾವನು ಅವನು ಬಾರಯ್ಯ ಇಲ್ಲಿ. ಯಾವನು ಅವನು ಎಸ್ಪಿ. ಏನು ಮಾಡ್ತಾ ಇದ್ದೀರಾ ಇಲ್ಲಿ ಎಂದು ಪ್ರಶ್ನೆ ಮಾಡಿದರು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ವೇದಿಕೆ ಮೇಲೆ ಬಂದು ಸಿಎಂ ಬಳಿ ಆಗಮಿಸಿದಾಗ ಗದರಿದ ಸಿಎಂ ಅವರ ಮೇಲೆ ಕೈ ಎತ್ತಲು ಮುಂದಾದರು. ಅಷ್ಟರದಲ್ಲಿ ವೇದಿಕೆ ಮೇಲೆ ಇದ್ದ ಸಚಿವ ಎಂ ಬಿ ಪಾಟೀಲ್, ಎಚ್ಕೆ ಪಾಟೀಲ್ ಅವರು ಸಿಎಂ ಬಳಿ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಆ ಬಳಿಕ ಸಿಎಂ ಅಲ್ಲಿಯೇ ಇದ್ದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆಗೂ ಸಿಟ್ಟಾದರು. ಅವರನ್ನು ಕರೆದು ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, " ಆರ್ಎಸ್ಎಸ್ ಹಾಗೂ ಬಿಜೆಪಿಗರನ್ನು ನೋಡಿಕೊಳ್ಳಿ ಅಂತಾ ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದರೆ ಸಾಕು, ಇವರಿಗೆ ಬಾಲ ಬಿಚ್ಚದಂತೆ ಮಾಡ್ತಾರೆ. ಬಾಲ ಬಿಚ್ಚಲು ಸಾಧ್ಯವೇ ಇಲ್ಲ" ಎಂದು ಹೇಳಿದರು.
ಬಿಜೆಪಿಯವರಿಂದ ಶಾಂತಿ ಕದಡುವ, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತದೆ. ಅವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ. ಸಾರ್ವಜನಿಕವಾಗಿ ಅವರನ್ನು ಎದುರಿಸುವ ಶಕ್ತಿ ನಮಗಿದೆ. ಈ ರೀತಿ ದುಷ್ಕೃತ್ಯ ಮಾಡುವವರಿಗೆ ಇಡೀ ಕಾಂಗ್ರೆಸ್ ನಿಂದ ಧಿಕ್ಕಾರ ಎಂದು ಸಿಎಂ ಕಿಡಿಕಾರಿದರು.
ಸಿದ್ದರಾಮಯ್ಯ ವರ್ತನೆಗೆ ವ್ಯಾಪಕ ವಿರೋಧ; ಕ್ಷಮೆಗೆ ಆಗ್ರಹ
ಇನ್ನು ಸಿದ್ದರಾಮಯ್ಯ ಅವರ ವರ್ತನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ಮಾತ್ರವಲ್ಲದೇ ಸಾರ್ವಜನಿಕರು ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾನವತಾವಾದಿˌ ಸಮಾಜವಾದಿ ಸಿದ್ದರಾಮಯ್ಯನವರೇ ಪೊಲೀಸ್ ಅಧಿಕಾರ ಮೇಲೆ ಕೈ ಎತ್ತಿದ್ದು ನಿಮಗೆ ಶೋಭೆ ತರಲ್ಲ ಎಂದು ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಕಿಡಿಕಾರಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಅವರ ಹೀನ ವರ್ತನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಖಂಡಿಸಿದ್ದಾರೆ. ಇನ್ನು ಟ್ವೀಟರ್ನಲ್ಲಿ ಸಾಕಷ್ಟು ಮಂದಿ ಸಿಎಂ ಅಧಿಕಾರಿ ಮೇಲೆ ಕೈ ಎತ್ತುವ ವಿಡಿಯೋ ಹಾಕಿ ದುರ್ವರ್ತನೆ, ಧಿಮಾಕು, ಅಧಿಕಾರದ ಅಮಲು ಎಂದೆಲ್ಲಾ ವಾಗ್ದಾಳಿ ನಡೆಸಿದ್ದಾರೆ. ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರ ಮೇಲೆ ಕೈ ಎತ್ತಿದ್ದ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಯಡುವೀರ್ ಸಿಎಂ ಅವರನ್ನು ಪ್ರಶ್ನೆ ಮಾಡಿ ವರ್ತನೆಯನ್ನು ಖಂಡಿಸಿದ್ದಾರೆ. "ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಕೈ ಎತ್ತುವುದು ನಿಮ್ಮ ಮುಖ್ಯಮಂತ್ರಿಯ ಸ್ಥಾನಕ್ಕೆ, ಘನತೆಗೆ ಕಿಂಚಿತ್ತೂ ಶೋಭೆ ತರುವುದಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಏಕವಚನ ಪ್ರಯೋಗಿಸಿ ಪೊಲೀಸ್ ಅಧಿಕಾರಿಗಳನ್ನು ಅವಮಾನ ಮಾಡುವುದು ಎಷ್ಟು ಸರಿ? ಇದೇನಾ ನೀವು ಸಂವಿಧಾನಕ್ಕೆ ಕೊಡುವ ಗೌರವ? ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಲಾಗದವರು ಈ ರಾಜ್ಯದ ಆಡಳಿತವನ್ನು ಹೇಗೆ ನಿಭಾಯಿಸುತ್ತಾರೆ? " ಎಂದು ಪ್ರಶ್ನೆ ಮಾಡಿದ್ದಾರೆ.
Belagavi: CM Siddaramaiah raises hand against a police officer (addl. SP of Belagavi) over a security scuffle.
— Pinky Rajpurohit 🇮🇳 (@Madrassan_Pinky) April 28, 2025
CM Siddaramaiah, who joined the protest against the central government over inflation, had to face the anger, when BJP workers accused the CM of being a Pakistan… pic.twitter.com/0xtP6melyq
Karnataka Chief Minister Siddaramaiah found himself at the center of fresh controversy after he appeared to almost slap an additional superintendent of police (ASP) during a public event in Belagavi. The incident, which was captured on video and widely circulated, shows Siddaramaiah raising his hand in anger after summoning ASP Narayan Bharamani onto the stage.
20-09-25 10:57 pm
HK News Desk
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
20-09-25 05:11 pm
Mangalore Correspondent
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm