ಬ್ರೇಕಿಂಗ್ ನ್ಯೂಸ್
29-04-25 09:51 pm Bangalore Correspondent ಕರ್ನಾಟಕ
ಬೆಂಗಳೂರು, ಎ.29 : "ಮಾನ್ಯ ಸಿದ್ದರಾಮಯ್ಯನವರೇ, ನೀವು ನಮ್ಮ ನಾಡಿನ ’ಏಕವಚನ’ದ ವ್ಯಾಕರಣ ಮೇಷ್ಟ್ರು. ಆದರೆ, ತಾವು ರಾಜ್ಯದ ಮುಖ್ಯಮಂತ್ರಿಗಳಾಗಿ, ಎಲ್ಲರಿಗೂ ಮೇಲ್ಪಂಕ್ತಿಯನ್ನು ಹಾಕಿ ಕೊಡಬೇಕಾಗಿರುವುದು ನಿಮ್ಮ ಜವಾಬ್ದಾರಿ ಎಂದು ಹಿರಿಯ ಬಿಜೆಪಿ ಶಾಸಕ, ಮಾಜಿ ಸಚಿವ ಸುರೇಶ್ ಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಕುಟುಕಿದ್ದಾರೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ನಡೆದ ವಿದ್ಯಮಾನವನ್ನು ಉಲ್ಲೇಖಿಸಿ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿ ಹಾಗೂ ದೇಶ ವಿರೋಧಿ ಎಂದು ಖಂಡನಾ ಸಮಾವೇಶ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಆ ವೇಳೆ, ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಗೆ ಇಳಿದಿದ್ದರು. ಆ ವೇಳೆ, ಪೊಲೀಸ್ ಅಧಿಕಾರಿ ಒಬ್ಬರನ್ನು ವೇದಿಕೆಗೆ ಕರೆಸಿ, ಕೈಎತ್ತಿ ಬೈಯ್ದು ಸಿದ್ದರಾಮಯ್ಯ ಕಳುಹಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
'ಅಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ, ಇಂದು ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ... ನಿಮ್ಮ ಕೋಪ ತಾಪಕ್ಕೆ ಬಲಿಯಾಗಿದ್ದು ನಿಜಕ್ಕೂ ಒಳ್ಳೆಯ ಮೇಲ್ಬಂಕ್ತಿ ಅಲ್ಲ. ಮುಖ್ಯಮಂತ್ರಿಯೇ ತನ್ನ ರಾಜ್ಯದ ಓರ್ವ ಅಧಿಕಾರಿಯ ವಿರುದ್ಧ ತನ್ನ ಪ್ರತಾಪವನ್ನು ಬಹಿರಂಗವಾಗಿ ವೇದಿಕೆಯ ಮೇಲಿಂದ ತೋರಿಸಿದರೆ, ರಾಜಕೀಯ ಪಕ್ಷದ ಕಾರ್ಯಕರ್ತರು ಇನ್ನಷ್ಟು ಅಧಿಕಾರಿಗಳ ಮೇಲೆ ತಮ್ಮ ಪ್ರತಾಪವನ್ನು ನಿಮ್ಮ ಮೇಲ್ಪಂಕ್ತಿಯನ್ನು ಅನುಸರಿಸಿ ಇನ್ನಷ್ಟು ಉಗ್ರವಾಗಿಯೇ ತೋರಿಸುತ್ತಾರೆ".
ಇದು ವ್ಯವಸ್ಥೆ ದುರ್ಬಲವಾಗುವುದಕ್ಕೆ ಕಾರಣವಾಗುತ್ತದೆ. ಅಧಿಕಾರಿಗಳ ಮನೋಬಲವನ್ನು ಕುಗ್ಗಿಸುವ, ಅವರನ್ನು ಬಹಿರಂಗವಾಗಿ ಅವಮಾನಿಸುವ ಕಾರ್ಯ ಓರ್ವ ಮುಖ್ಯಮಂತ್ರಿಯಿಂದ ಆಗಬಾರದು. ಇದು ರಾಜ್ಯದ ಒಟ್ಟು ಆಡಳಿತ ಯಂತ್ರದ ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ" ಎಂದು ಸುರೇಶ್ ಕುಮಾರ್, ಸಿಎಂ ಸಿದ್ದರಾಮಯ್ಯಗೆ ಹಿತವಚನ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ, 1994ರ ಬ್ಯಾಚಿನ ಮತ್ತು ಪೊಲೀಸ್ ಇಲಾಖೆಯಲ್ಲಿ ಉತ್ತಮ ಹೆಸರು ಪಡೆದಿರುವ ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠ ನಾರಾಯಣ ವಿ. ಭರಮನಿ ವೇದಿಕೆಗೆ ಆಗಮಿಸಿದ್ದರು.
ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ, ಬಿಜೆಪಿಯ ಮಹಿಳಾ ಮೋರ್ಚಾ ಕಾರ್ಯಕರ್ತರು ವೇದಿಕೆ ಕೆಳಗೆ ಕಪ್ಪು ಬಾವುಟ ಹಿಡಿದು ಗಲಾಟೆ ಮಾಡುತ್ತಿದ್ದರು. ಇದರಿಂದ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ಏ.. ಪೊಲೀಸ್ ಬಾರಯ್ಯ ಇಲ್ಲಿ .. ಯಾವನು ಅವನು ಎಸ್‌ಪಿ. ಏನು ಮಾಡ್ತಾ ಇದ್ದೀರಾ ಇಲ್ಲಿ ಎಂದು ಎಎಸ್ಪಿ ಭರಮನಿ ಅವರನ್ನು ಕರೆದು ಪ್ರಶ್ನೆ ಮಾಡಿದ್ದಾರೆ. ಭಾಷಣದ ಮಧ್ಯೆಯೇ ಸಿಎಂ ಪೊಲೀಸ್ ಅಧಿಕಾರಿಯ ಮೇಲೆ ಕೈಎತ್ತಿ ಗದರುವುದು ಟಿವಿಗಳಲ್ಲಿ ಲೈವ್ ಆಗಿ ಬಂದಿತ್ತು. ಇದರ ವಿಡಿಯೋ ವೈರಲ್ ಆಗಿದ್ದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.
Former BJP minister and senior leader S. Suresh Kumar strongly criticized Karnataka Chief Minister Siddaramaiah over his recent behavior with a senior police officer during his visit to Belagavi. The incident, which has gone viral on social media, shows the Chief Minister appearing visibly agitated while addressing the top cop in front of the media and public.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
27-10-25 04:36 pm
Mangalore Correspondent
11 ದಿನಗಳಿಂದ ಅರಬ್ಬೀ ಸಮುದ್ರದಲ್ಲಿ ಸಿಕ್ಕಿಬಿದ್ದಿದ್...
26-10-25 04:42 pm
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
27-10-25 04:04 pm
Bangalore Correspondent
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am