ಬ್ರೇಕಿಂಗ್ ನ್ಯೂಸ್
30-04-25 05:08 pm Bangalore Correspondent ಕರ್ನಾಟಕ
ಬೆಂಗಳೂರು, ಏ 29: ರಾಜ್ಯ ಪೊಲೀಸ್ ಇಲಾಖೆಗೆ ನೂತನ ದಂಡನಾಯಕನ ನೇಮಕ ಮಾಡುವ ಸಾಧ್ಯತೆಯಿದೆ. ಹಾಲಿ ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿ ಇಂದು (ಏಪ್ರಿಲ್ 30) ಅಂತ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಬಹುತೇಕ ಹೊಸ ಡಿಜಿಪಿಯನ್ನು ನೇಮಿಸುವ ಬಗ್ಗೆ ಒಲವು ತೋರಿದೆ.
ಡಿಜಿಪಿ ರೇಸ್ನಲ್ಲಿ ಸಿಐಡಿ ಡಿಜಿ ಡಾ. ಎಂ.ಎ. ಸಲೀಂ, ಅಗ್ನಿಶಾಮಕ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಮುನ್ನೆಲೆಯಲ್ಲಿದ್ದು, ಇಬ್ಬರಲ್ಲಿ ಕನ್ನಡಿಗ ಸಲೀಂ ಅವರು ಪೊಲೀಸ್ ಇಲಾಖೆಗೆ ನೂತನ ಸಾರಥಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಲೋಕ್ ಮೋಹನ್ ಅವರು 2023ರಲ್ಲಿ ಇಲಾಖೆಯ ಸಾರಥಿಯಾಗಿದ್ದರು. ಆರಂಭದ ಮೂರು ತಿಂಗಳ ಕಾಲ ಪ್ರಭಾರಿ ಡಿಜಿಪಿಯಾಗಿದ್ದು, ಬಳಿಕ ಅವರನ್ನ ಪೂರ್ಣಪ್ರಮಾಣದ ಡಿಜಿಪಿಯಾಗಿ ಸರ್ಕಾರ ನೇಮಿಸಿತ್ತು. ರಾಜ್ಯದಲ್ಲಿ ಡಿಜಿ-ಐಜಿಪಿಯಾಗಿ ಕನಿಷ್ಠ ಕಾಲಾವಧಿ ಎರಡು ವರ್ಷ ಇರಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಈ ಆದೇಶದಂತೆ ಮೂರು ತಿಂಗಳ ಕಾಲ ಡಿಜಿಪಿಯಾಗಿ ವಿಸ್ತರಿಸಬೇಕೆಂದು ಕೋರಿ ಕೇಂದ್ರ ಗೃಹ ಇಲಾಖೆಗೆ ಅಲೋಕ್ ಮೋಹನ್ ಅವರು ಸಲ್ಲಿಸಿದ ಪ್ರಸ್ತಾವಕ್ಕೆ ಇನ್ನೂ ಉತ್ತರ ಬಂದಿಲ್ಲ. ಅಲ್ಲದೆ ಸಕಾರಾತ್ಮಕವಾಗಿ ಸ್ಫಂದಿಸಿಲ್ಲ. ಬುಧವಾರ ಸೇವಾವಧಿ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹೊಸ ಡಿಜಿಪಿಯನ್ನ ನೇಮಿಸುವ ಅನಿವಾರ್ಯತೆ ಎದುರಾಗಿದೆ.
ಅಲೋಕ್ ಮೋಹನ್ ಅವರಿಂದ ತೆರವಾಗುವ ಡಿಜಿಪಿಗೆ ಸ್ಥಾನಕ್ಕೆ ಪ್ರಮುಖವಾಗಿ 1993ನೇ ಬ್ಯಾಚ್ನ್ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಹಾಗೂ 1992ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಪ್ರಶಾಂತ್ ಕುಮಾರ್ ಠಾಕೂರ್ ಹೆಸರುಗಳು ಮುಂಚೂಣಿಯಲ್ಲಿವೆ. ಬೆಂಗಳೂರಿನ ಚಿಕ್ಕಬಾಣಾವರದ ಕರ್ನಾಟಕ ಕೇಡರ್ ಆಗಿರುವ ಸಲೀಂ ಅವರು ಉಡುಪಿ, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ನಗರ ಪೂರ್ವ ವಿಭಾಗದ ಡಿಸಿಪಿ (ಲಾ ಅಂಡ್ ಆರ್ಡರ್), ಟ್ರಾಫಿಕ್ ಡಿಸಿಪಿ ಹಾಗೂ ನಗರ ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿದ್ದರು. ಸಂಚಾರ ಕ್ಷೇತ್ರದಲ್ಲಿಯೂ ಡಾಕ್ಟರೇಟ್ ಪದವಿ ಹೊಂದಿದ್ದು, ಇವರನ್ನ ಡಿಜಿಪಿ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಗ್ನಿಶಾಮಕ ಇಲಾಖೆಯ ಡಿಜಿಪಿಯಾಗಿರುವ ಬಿಹಾರ ಮೂಲದ ಕರ್ನಾಟಕ ಕೇಡರ್ ಆಗಿರುವ ಪ್ರಶಾಂತ್ ಕುಮಾರ್ ಠಾಕೂರ್ ಸೇವಾ ಜೇಷ್ಠತೆ ಹೊಂದಿದ್ದಾರೆ. ಸಲೀಂ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಹೊಂದಿದ್ದಾರೆ. ಸೀನಿಯಾರಿಟಿ ಮೇರೆಗೆ ಮುಂಬಡ್ತಿ ನೀಡುವ ಪದ್ಧತಿಯನ್ನು ಸರ್ಕಾರ ನಡೆಸಿಕೊಂಡು ಬರುತ್ತಿದೆ. ಒಂದು ವೇಳೆ ಇವರನ್ನು ಬದಿಗೊತ್ತಿ ಡಾ. ಸಲೀಂ ಅವರಿಗೆ ನೀಡಿದರೆ ಮುಂಬಡ್ತಿ ನೀಡದಿರುವುದನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
Senior IPS officer MA Saleem is emerging as the frontrunner for the post of Director General and Inspector General of Police (DGP-IGP) in Karnataka. Currently serving as the Special Commissioner (Traffic) in Bengaluru, Saleem is known for his administrative efficiency and clean track record.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm