Shivanand Patil, U T Khader: ಯತ್ನಾಳ್ ಸವಾಲು ಸ್ವೀಕರಿಸಿ ಶಾಸಕ ಸ್ಥಾನಕ್ಕೆ ಶಿವಾನಂದ ಪಾಟೀಲ ರಾಜೀನಾಮೆ ; ಯತ್ನಾಳ್ ರಾಜಿನಾಮೆ ಕೊಡಲಿ, ಆಮೇಲೆ ನಿರ್ಧರಿಸುತ್ತೇನೆಂದ ಸ್ಪೀಕರ್ ಖಾದರ್ 

02-05-25 10:00 pm       Bangalore Correspondent   ಕರ್ನಾಟಕ

ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸವಾಲು ಸ್ವೀಕರಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸ್ಪೀಕರ್ ಖಾದರ್ ಅವರಿಗೆ ರಲ್ಲಿ ರಾಜಿನಾಮೆ ಪತ್ರ ನೀಡಿದ್ದಾರೆ. 

ಬೆಂಗಳೂರು, ಮೇ.2: ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸವಾಲು ಸ್ವೀಕರಿಸಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಸ್ಪೀಕರ್ ಖಾದರ್ ಅವರಿಗೆ ರಲ್ಲಿ ರಾಜಿನಾಮೆ ಪತ್ರ ನೀಡಿದ್ದಾರೆ. 

ಯತ್ನಾಳ್ ಅವರು, ಶಿವಾನಂದ ಪಾಟೀಲ ಅವರು ಪಾಟೀಲನೇ ಅಲ್ಲ. ಅಪ್ಪನಿಗೆ ಹುಟ್ಟಿದ್ದು ಹೌದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನ್ನ ಎದುರು ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದರು. ಇದರಂತೆ, ಶಿವಾನಂದ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. 

ಈ ಬಗ್ಗೆ ಹೇಳಿಕೆ ನೀಡಿರುವ ಶಿವಾನಂದ ಪಾಟೀಲ, ರಾಜಿನಾಮೆ ನನ್ನ ವೈಯಕ್ತಿಕ ನಿರ್ಧಾರ. ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಸ್ಪೀಕರ್ ಖಾದರ್ ಅವರು ಇನ್ನೂ ರಾಜೀನಾಮೆ ಪತ್ರ ಅಂಗೀಕರಿಸಿಲ್ಲ. 

ಸುದ್ದಿಗಾರರೊಂದಿಗೆ ಮಾತನಾಡಿದ ಯುಟಿ ಖಾದರ್, ಶಿವಾನಂದ ಪಾಟೀಲ್ ಇನ್ನೊಬ್ಬ ಶಾಸಕರ ಸವಾಲು ಪಡೆದು ರಾಜಿನಾಮೆ ನೀಡಿದ್ದಾರೆ. ಇನ್ನೊಬ್ಬ ಶಾಸಕರ ರಾಜೀನಾಮೆ ಅಂಗೀಕರಿಸಿದ ನಂತರ ನನ್ನ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಯತ್ನಾಳ್ ಅವರು ಇನ್ನೂ ರಾಜೀನಾಮೆ ನೀಡಿಲ್ಲ. ಹೀಗಾಗಿ ಪಾಟೀಲ್ ಅವರ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Karnataka Legislative Assembly Speaker U T Khader on Friday said Minister Shivanand Patil's "conditional resignation" as MLA cannot be accepted as per rules.