ಬ್ರೇಕಿಂಗ್ ನ್ಯೂಸ್
20-05-25 07:18 pm HK News Desk ಕರ್ನಾಟಕ
ವಿಜಯಪುರ, ಮೇ 20 : ಪಾಕಿಸ್ತಾನ ವಿಷಯದಲ್ಲಿ ರಾಷ್ಟ್ರದ್ರೋಹಿ ಹೇಳಿಕೆ ನೀಡ್ತಿರೋರನ್ನ ಗುಂಡಿಟ್ಟು ಕೊಲ್ಲಬೇಕು. ಪ್ರಿಯಾಂಕ ಖರ್ಗೆ, ಸಂತೋಷ ಲಾಡ್, ದಿನೇಶ್ ಗುಂಡೂರಾವ್, ಕೊತ್ತೂರು ಮಂಜುನಾಥ, ಹರಿಪ್ರಸಾದ್ ಹೇಳಿಕೆಗೆ ಕಿಡಿ ಕಿಡಿಯಾದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಅಂಥವರನ್ನು ಮೊದಲು ಗುಂಡಿಟ್ಟು ಕೊಲ್ಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
140 ಕೋಟಿ ಜನ ಹಿಂದುಸ್ತಾನ ಪರವಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕರು ದೇಶದ ಪರವಾಗಿದ್ದೀವಿ ಎಂದು ಸೈನಿಕರ ಬಗ್ಗೆ ಹೊಗಳಿದ್ದಾರೆ. ಕಾಂಗ್ರೆಸ್ ನ ದೊಡ್ಡ ದೊಡ್ಡ ನಾಯಕರು ಹಿಂದುಸ್ತಾನ ಪರವಾಗಿದ್ದರೆ, ದೊಡ್ಡ ಖರ್ಗೆ ಹಿಂದುಸ್ತಾನ್ ಪರ, ಮರಿ ಖರ್ಗೆ ಪ್ರಿಯಾಂಕ್ ಖರ್ಗೆ ಪಾಕಿಸ್ತಾನ ಪರ. ಸ್ಪಷ್ಟವಾಗಿ ಹೇಳಿ ನಾವು ಪಾಕಿಸ್ತಾನ ಪರ ಇರ್ತೀವಿ ಅಂತ. ಈ ಬಗ್ಗೆ ಗೊಂದಲ ನಿರ್ಮಾಣ ಮಾಡ್ತಿರೋ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್, ಲಾಡ್, ದಿನೇಶ್ ಗುಂಡೂರಾವ್ ಇರಬಹುದು. ಇಂತಹ ಅನೇಕ ವ್ಯಕ್ತಿಗಳು ಸೈನಿಕರಿಗೆ ಪರೋಕ್ಷವಾಗಿ ಟೀಕೆ ಮಾಡುತ್ತಿದ್ದಾರೆ.
ಅವನ್ಯಾವನೋ ಮಂಜುನಾಥ ಅಂತೆ, ಅವನಿಗೆ ವಿಮಾನದ ಲೆಕ್ಕ ಕೊಡಬೇಕಂತೆ. ಎಷ್ಟು ಪ್ಲೈಟ್ ಹೋದ್ವು, ಎಷ್ಟು ಪಾಕಿಸ್ತಾನಿಯರನ್ನು ಕೊಂದ್ರು ಅಂತ ಕೇಳಿ ಸುಳ್ಳು ಅಂತ ಹೇಳ್ತಿದ್ದಾರೆ. ಇವರನ್ನು ಮೊದಲು ಗುಂಡಿಟ್ಟು ಹೊಡಿಯಬೇಕು. ಇವರು ದೇಶದ್ರೋಹಿಗಳು, ಇಡೀ ಪ್ರಪಂಚದ ಜನ ಭಾರತದ ಜೊತೆಗೆ ಇರಬೇಕಾದ್ರೆ, ಇವರೊಂದಿಷ್ಟು ಜನ ಪಾಕಿಸ್ತಾನ ಪರವಾಗಿ ಕೂಗಾಡ್ತಿದ್ದಾರೆ. ಪಾಕಿಸ್ತಾನ ಪರವಾಗಿ ಮಾತನಾಡ್ತಿರೋ ತರಹ ಭಾವನೆ ತರುತ್ತಿದ್ದಾರೆ. ಇವರು ದೇಶದ್ರೋಹಿಗಳು. ಇಂತಹವರಿಗೆ ಗುಂಡಿಟ್ಟು ಹೊಡೆದ್ರೆ ಕಾಂಗ್ರೆಸ್ ನಲ್ಲಿನ ಅನೇಕರು ತುಂಬಾ ಸಂತೋಷ ಪಡುತ್ತಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಕ್ರಮದ ಬಗ್ಗೆ ಕಾಂಗ್ರೆಸ್ ನವರು ಮೆಚ್ಚಿದ್ದಾರೆ. ದಿನಾ ಟಿವಿ, ಪೇಪರ್ ನಲ್ಲಿ ಬರಬೇಕು ಎಂದು ಕೆಲವರು ಮಾತನಾಡುತ್ತಾರೆ. ಪಾಕಿಸ್ತಾನ ಪರವಾಗಿ ಮಾತನಾಡುತ್ತಿರೋ ಇಂತವರು ಭಾರತ ಹೊರಗೆ, ಒಳಗೆ ಇರೋರಿಗೆ ಉತ್ತೇಜನ ಕೊಡುತ್ತಿದ್ದಾರೆ. ಇವರೆಲ್ಲ ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ಕೊಟ್ಟಂಗೆ. ರಾಷ್ಟ್ರ ದ್ರೋಹಿ ಹೇಳಿಕೆ ಕೊಡುವವರಿಗೆ ಗುಂಡಿಟ್ಟು ಕೊಂದ್ರೆ ದೇಶದಲ್ಲಿ ರಾಷ್ಟ್ರ ದ್ರೋಹಿ ಕೆಲ್ಸ ನಿಲ್ಲುತ್ತೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Former Karnataka Minister K.S. Eshwarappa has stirred a major controversy by calling for those making "anti-national" statements about Pakistan to be shot. His fiery reaction came in response to recent comments made by Congress leaders Priyanka Kharge, Santosh Lad, Dinesh Gundu Rao, Kottur Manjunath, and B.K. Hariprasad.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm