ಬ್ರೇಕಿಂಗ್ ನ್ಯೂಸ್
21-05-25 12:12 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 21 : ಕೆಜಿ ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಪತ್ನಿ ಶಾಲಿನಿ ಎಚ್ಬಿಆರ್ ಲೇಔಟ್ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಗೆ ದಾಂಪತ್ಯ ಕಲಹ ಕಾರಣ ಎಂದು ಶಂಕಿಸಲಾಗಿದ್ದು, ಗೋವಿಂದಪುರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲಿನಿಯ ತಂದೆ-ತಾಯಿ ಈ ಸಾವಿನಲ್ಲಿ ಕೊಲೆಯ ಆರೋಪ ಹೊರಿಸಿದ್ದು, ಪಿಎಸ್ಐ ನಾಗರಾಜ್ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಶಾಲಿನಿ ಮತ್ತು ನಾಗರಾಜ್ ಚಿಕ್ಕಂದಿನಿಂದಲೂ ಟ್ಯೂಷನ್ನಲ್ಲಿ ಸ್ನೇಹಿತರಾಗಿದ್ದರು. ಶಾಲಿನಿ ಎಂ.ಎಸ್.ಸಿ. ಪದವೀಧರರಾಗಿದ್ದು, ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ತಯಾರಿ ನಡೆಸುವಾಗ ಶಾಲಿನಿ ಆರ್ಥಿಕ ಸಹಾಯವನ್ನೂ ನೀಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ಶಾಲಿನಿ ತನ್ನ ಮೊದಲ ಪತಿಗೆ 2024ರ ಆಗಸ್ಟ್ನಲ್ಲಿ ವಿಚ್ಛೇದನ ನೀಡಿ ನಾಗರಾಜ್ನನ್ನ ಮದುವೆಯಾದರು. ಆದರೆ, ಮದುವೆಯಾದ ಕೆಲವೇ ತಿಂಗಳಲ್ಲಿ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು.
ಕಳೆದ ಎರಡು ತಿಂಗಳಿನಿಂದ ಶಾಲಿನಿ ಮತ್ತು ನಾಗರಾಜ್ ನಡುವಿನ ಸಂಬಂಧ ಒಡಕು ಮೂಡಿದ್ದು, ನಾಗರಾಜ್ ಶಾಲಿನಿ ಮನೆಯನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರು. ಇದರಿಂದ ಕೋಪಗೊಂಡ ಶಾಲಿನಿ, ತೀವ್ರ ಮಾನಸಿಕ ಒತ್ತಡಕ್ಕೊಳಗಾಗಿದ್ದರು. ಈ ಘಟನೆಗೂ ಮುನ್ನ ರಾತ್ರಿ ಶಾಲಿನಿ 'ರೈಲಿಗೆ ಸಿಲುಕಿ ಸಾಯುವೆ' ಎಂದು ಹೇಳಿ ಮನೆಯಿಂದ ಹೊರಟಿದ್ರಂತೆ. ಹೊಯ್ಸಳ ಪೊಲೀಸರು ಗಸ್ತಿನ ವೇಳೆ ಶಾಲಿನಿಯನ್ನ ರಕ್ಷಿಸಿ ಮನೆಗೆ ಕರೆತಂದಿದ್ದರು. ಆದರೆ, ಮನೆಗೆ ಮರಳಿದ ಕೆಲವೇ ಕ್ಷಣಗಳಲ್ಲಿ ಶಾಲಿನಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಾಲಿನಿಯ ತಂದೆ ಶಿವಲಿಂಗಪ್ಪ ಮತ್ತು ತಾಯಿ ಭಾರತಿ, ನಾಗರಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ನಾಗರಾಜ್ಗೆ ನನ್ನ ಮಗಳ ಹಣ ಬೇಕಿತ್ತು, ಆಕೆಯ ಜೊತೆ ಜೀವನ ಬೇಡವಿತ್ತು. ಆಕೆಯನ್ನು ಹೊಡೆಯುತ್ತಿದ್ದ, ಹಣಕ್ಕಾಗಿ ಒತ್ತಾಯಿಸುತ್ತಿದ್ದ, ಡೈಮಂಡ್ ರಿಂಗ್ಗೆ ಡಿಮ್ಯಾಂಡ್ ಮಾಡುತ್ತಿದ್ದ,' ಎಂದು ತಂದೆ ಆರೋಪಿಸಿದ್ದಾರೆ. 'ಇದು ಆತ್ಮಹತ್ಯೆಯಲ್ಲ, ಕೊಲೆ,' ಎಂದು ಶಾಲಿನಿಯ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಿನಿ ಈ ಹಿಂದೆ ಕೋಣನಕುಂಟೆ ಠಾಣೆಯಲ್ಲಿ ಪೊಲೀಸ್ ಗಂಡ ವಿರುದ್ಧ ದೂರು ದಾಖಲಿಸಿದ್ದರು, ಇದರ ಮೇಲೆ ಇಲಾಖಾ ತನಿಖೆಯೂ ನಡೆದಿತ್ತು.
ಶಾಲಿನಿಗೆ ಮೊದಲ ಮದುವೆಯಿಂದ ಏಳು ವರ್ಷದ ಮಗುವಿದೆ. ಈಗ ತಂದೆ-ತಾಯಿಯನ್ನ ಕಳೆದುಕೊಂಡ ಆ ಮಗುವಿನ ಭವಿಷ್ಯದ ಬಗ್ಗೆ ಕುಟುಂಬದವರು ಕಳವಳ ವ್ಯಕ್ತಪಡಿಸಿದ್ದಾರೆ. 'ನನ್ನ ಮಗಳ ಸಾವಿಗೆ ನ್ಯಾಯ ಸಿಗ್ಬೇಕು,' ಎಂದು ಶಾಲಿನಿಯ ತಂದೆ-ತಾಯಿ ಒತ್ತಾಯಿಸಿದ್ದಾರೆ.
KG Halli Police Sub inspector Wife Dies by Suicide, Parents Allege Abuse Over Diamond Ring, Dowry Demands by Cop Husband.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm