ಬ್ರೇಕಿಂಗ್ ನ್ಯೂಸ್
21-05-25 05:42 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಪ್ರದಕ್ಷಿಣೆ ಮಾಡಿ ನಗರದ ಹಲವು ಪ್ರದೇಶಗಳಲ್ಲಿ ಮಳೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರಿನ ಶಾಸಕರು ಉಪಸ್ಥಿತರಿದ್ದರು. ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಿದರು.
ಯಲಹಂಕದಲ್ಲಿ ರಾಜ ಕಾಲುವೆ ಒತ್ತುವರಿ ಸ್ಥಳ ಪರಿಶೀಲಿಸಿದ ಮುಖ್ಯಮಂತ್ರಿಗಳು ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು.
ಮಾನ್ಯತಾ ಟೆಕ್, ಇಬ್ಸು, ಮ್ಯಾನ್ ಫೋ ಹಾಗೂ ಕಾರ್ಲೆ ಖಾಸಗಿ ಬಿಲ್ಡರ್ ಗಳು ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ಅಧಿಕಾರಿಗಳು ವಿವರಿಸಿದರು.
ಈ ವೇಳೆ ನೋಟಿಸ್ ಕೊಟ್ಟಿಲ್ಲವೇ, ಒತ್ತುವರಿ ಆಗಿರುವುದನ್ನು ನೋಡಿಕೊಂಡು ಕುಳಿತಿದ್ದೀರಾ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು. ಬಳಿಕ ಎಷ್ಟೇ ದೊಡ್ಡ ಬಿಲ್ಡರ್ ಆಗಿದ್ದರೂ ಮುಲಾಜು ನೋಡಬೇಡಿ, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಎಂದು ಸ್ಪಷ್ಟ ಸೂಚನೆ ನೀಡಿದರು.
ರಾಜಕಾಲುವೆಯ ಹರಿವಿನ ಹಾದಿಯಲ್ಲಿ ರೈಲ್ವೇ ಟ್ರಾಕ್ ಇರುವ ಕಡೆ ಆಗಿರುವ ಬಾಟಲ್ ನೆಕ್ ಸರಿ ಪಡಿಸಲು, ವಿಸ್ತರಿಸಲು ಸೂಚನೆ ನೀಡಿದರು.
ಬಾದಿತ ಪ್ರದೇಶಗಳಲ್ಲಿ ಬೇಸ್ ಮೆಂಟ್ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಟೌನ್ ಪ್ಲಾನಿಂಗ್ ನಲ್ಲಿ ಬದಲಾವಣೆ ತರುವ ದಿಕ್ಕಿನಲ್ಲಿ ಸೂಚನೆ ನೀಡಿದರು.
ವಡ್ಡರಪಾಳ್ಯ ಲೇಔಟ್, ಗೆದ್ದಲಹಳ್ಳಿಗೆ ಭೇಟಿ ;
ರಾಜಕಾಲುವೆ ವಿಸ್ತೀರ್ಣ 29 ಮೀಟರ್. ಆದರೆ ಗೆದ್ದಲಹಳ್ಳಿಯ ಕಾಲುವೆ ಬಾಟಲ್ ನೆಕ್ ಇದ್ದು ಕೇವಲ 8 ಮೀಟರ್ ಇದೆ. ಆದ್ದರಿಂದ ಮೇಲಿನಿಂದ ರಾಜಕಾಲುವೆಯಲ್ಲಿ ಹರಿದು ಬರುವ ನೀರು ಈ ಬಾಟಲ್ ನೆಕ್ ನಲ್ಲಿ ಓವರ್ ಫ್ಲೋ ಆಗಿ ಸಾಯಿ ಲೇಔಟ್ ಗೆ ನುಗ್ಗುತ್ತದೆ ಎನ್ನುವುದು ಸಮಸ್ಯೆ.
ಆದ್ದರಿಂದ 8 ಮೀಟರ್ ಬಾಟಲ್ ನೆಕ್ ಇರುವ ರೈಲ್ವೇ ವೆಂಟ್ ಅನ್ನು ವಿಸ್ತರಿಸಲು ಸೂಚನೆ ನೀಡಲಾಯಿತು.
ನೆನ್ನೆ ದಿನ ರೈಲ್ವೇಯವರು ಈ ವೆಂಟ್ ವಿಸ್ತರಣೆಗೆ BDA ಗೆ ಅನುಮತಿ ನೀಡಿದ್ದಾರೆ. ಜೊತೆಗೆ ಕಾಲುವೆ ನಿರ್ವಹಣೆ ಮಾಡದ ಗುತ್ತಿಗೆದಾರರಿಂದ ವಿವರಣೆ ಕೇಳುವಂತೆ ಸೂಚಿಸಲಾಯಿತು.
ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಸಾಯಿ ಲೇಔಟ್ ಸೇರಿದಂತೆ ಕೆಲವು ಪ್ರದೇಶಗಳು ಮುಳುಗಡೆ ಆಗಿವೆ. ಮಳೆ ನೀರಿನಿಂದ ಹಾನಿಗೊಳಗಾದ ಸಾಯಿ ಲೇಔಟ್‌ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಸಿಟಿ ರೌಂಡ್ಸ್‌ಗೆ ಬಂದ ಸಿಎಂ ಹಾಗೂ ಸಚಿವರ ಮೇಲೆ ಸಾಯಿ ಲೇಔಟ್ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನಿ ಮಳೆಯಿಂದ ತೊಂದರೆಯಾದ ಮನೆಗಳಿಗೆ ಭೇಟಿ ನೀಡಿ. ದೂರದಿಂದ ನೋಡಿದ್ರೆ ನಿಮಗೆ ಏನು ಗೊತ್ತಾಗುತ್ತೆ? ಎಂದು ಸ್ಥಳೀಯ ಮಹಿಳೆಯರು ಸಿಎಂಗೆ ಆಗ್ರಹಿಸಿದರು.
ಸಾಯಿ ಲೇಔಟ್ ಗೆ ಸಂಬಂಧಿಸಿದ ಬೃಹತ್ ರಾಜ ಕಾಲುವೆಯನ್ನು ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳ ಬಳಿ ಮಾಹಿತಿ ಪಡೆದರು. ಸಾಯಿ ಲೇಔಟ್‌ನಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಸಿಎಂ ಸಾರ್ವಜನಿಕರ ಮನವಿ ಆಲಿಸಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಎಂದು ಸ್ಥಳೀಯರು ತಮ್ಮ ಕಷ್ಟಗಳನ್ನು ಸಿಎಂಗೆ ಮನವರಿಕೆ ಮಾಡಿದರು.
ಸಾಯಿ ಲೇಔಟ್‌ನಿಂದ ಹೊರಡಲು ಸಿಎಂ, ಸಚಿವರು ಸಜ್ಜಾಗುತ್ತಿದ್ದಂತೆ ಸ್ಥಳೀಯ ಮಹಿಳೆಯರು ತಡೆಯಲು ಯತ್ನಿಸಿದರು. ಕಷ್ಟ ಸುಖ ಕೇಳಲು ನೀವು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಸ್ಥಳೀಯರನ್ನು ತಡೆದ ಪೋಲೀಸರು, ಹಗ್ಗ ಹಾಕಿ ಸಿಎಂ ಹಾಗೂ ಅಧಿಕಾರಿಗಳಿಗೆ ರಕ್ಷಣೆ ನೀಡಿದರು.
ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಕೆ.ಜೆ ಜಾರ್ಜ್ ಕೂಡ ಸ್ಥಳೀಯರ ಮನವಿ ಆಲಿಸಿದರು. ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರನ್ನ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಸ್ಥಳೀಯರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಿಎಂ, ಡಿಸಿಎಂ, ಅಧಿಕಾರಿಗಳು ಬಸ್‌ನಲ್ಲಿ ತೆರಳಲು ಸಜ್ಜಾದರು. ಬೇಗ ಬಸ್ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾಯಿ ಲೇಔಟ್ ಅಕ್ಷರಶಃ ನೀರಲ್ಲಿ ಮುಳುಗಿದೆ. ಅಲ್ಲಿನ ಜನರ ಸಂಕಷ್ಟ ಇನ್ನೂ ಸುಧಾರಿಸಿಲ್ಲ. 48 ಗಂಟೆ ಕಳೆಯುತ್ತಾ ಬಂದರೂ ಸಮಸ್ಯೆಗಳು ಹೆಚ್ಚಾಗುತ್ತಿವೆಯೇ ವಿನಃ ಕಮ್ಮಿಯಾಗುತ್ತಿಲ್ಲ. ಮಳೆರಾಯನ ರಣಕೇಕೆಗೆ ಅಲ್ಲಿನ ಜನರ ಸ್ಥಿತಿ ತೀರ ಹದಗೆಡುತ್ತಿದೆ.
ಇಂಥಾ ಮಹಾಮಳೆಯಾಗುತ್ತಾ ಇದ್ದರೂ ಸಾಯಿಲೇಔಟ್ನ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕಾರಣ ಅವರೆಲ್ಲಾ ಮನೆಯಲ್ಲಿ ಸಿಲುಕಿ ಬಿಟ್ಟಿದ್ದಾರೆ. ಮನೆಯಲ್ಲಿ ಕರೆಂಟ್ ಇಲ್ಲ, ನೀರಿಲ್ಲ, ದಿಕ್ಕು ಕಾಣದೇ ಕಂಗಾಲಾಗಿದ್ದಾರೆ. ಅವರಿಗೆ ಮುಖ್ಯವಾಗಿ ನೀರಿನ ಸಮಸ್ಯೆ ಆಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈಗಾಗಲೇ ಬಿಬಿಎಂಪಿ ಸಿಬ್ಬಂದಿಗಳು ವಾಟರ್ ಬಾಟಲ್ಗಳನ್ನ ಮನೆ ಮನೆಗೆ ಜೆಸಿಬಿಯಲ್ಲಿ ಪೂರೈಕೆ ಮಾಡುತ್ತಿದ್ದಾರೆ.
ಇಲ್ಲಿ ಮತ್ತೊಂದು ಸಮಸ್ಯೆ ಏನೆಂದರೆ ಇಲ್ಲಿ ಕೆಲವರು ಪೇಷೆಂಟ್ಗಳಿದ್ದಾರೆ. ಕೆಲ ಹಿರಿಯ ವ್ಯಕ್ತಿಗಳು, ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಅವರಿಗೆ ಬಿಸಿ ನೀರು ಬೇಕು. ಆದರೇ ಬಾಟಲ್ನಲ್ಲಿ ಸಿಕ್ಕ ನೀರನ್ನ ಬಿಸಿ ಮಾಡಲು ಅವರಿಗೆ ಆಗುತ್ತಿಲ್ಲ. ಯಾಕಂದರೇ ಈಗ ಸಾಯಿಲೇಔಟ್ನಲ್ಲಿ ಕರೆಂಟ್ ಕಟ್ ಆಗಿದೆ. ಗ್ಯಾಸ್ ಹಚ್ಚಲು ನೀರಲ್ಲಿ ಮುಳುಗಿರುವ ಕಾರಣಕ್ಕೆ ಭಯ ಆವರಿಸಿದೆ.
ಸದ್ಯಕ್ಕೆ ಸಾಯಿ ಲೇಔಟ್ ನಿವಾಸಿಗಳಿಗೆ ಶೀತ, ಕೆಮ್ಮು, ನೆಗಡಿ, ಜ್ವರ ಸೇರಿದಂತೆ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳಿಗೆ, ಬಿಬಿಎಂಪಿ ಆರೋಗ್ಯ ಸಿಬ್ಬಂದಿಯಿಂದ ತುರ್ತು ಔಷಧಿಯ ವ್ಯವಸ್ಥೆ ಮಾಡಲಾಗಿದೆ. ರೋಗನಿರೋಧಕ ಔಷಧಿ ಸೇರಿದಂತೆ ಹಲವು ಬಗೆಯ ಔಷಧಿಗಳನ್ನ ಅವರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಅಲ್ಲಿನ ಮಕ್ಕಳಿಗೂ ವಿಶೇಷವಾಗಿ ಔಷಧಿಗಳನ್ನ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಪೂರೈಕೆ ಮಾಡುತ್ತಿದ್ದಾರೆ.
ನೀರಲ್ಲಿ ಹಾವು ಮರಿಗಳ ತೊಳಲಾಟ ;
ಮಹಾಮಳೆಯಿಂದ ಸಾಯಿಲೇಔಟ್ ದ್ವೀಪವಾಗಿದ್ದು ನಿಜ. ಆದರೆ ಆ ದ್ವೀಪದ ನೀರಲ್ಲಿ ಹಾವುಗಳು ಸಹ ಒದ್ದಾಡುತ್ತಾ ಕಂಡಿವೆ. ಎಲ್ಲಿಂದಲೋ ಕೊಚ್ಚಿಕೊಂಡು ಬಂದ ಹಾವು ಮರಿಗಳು ಏಕಾಏಕಿ ಮನೆಗಳಲ್ಲಿ ಪ್ರತ್ಯಕ್ಷವಾಗಿವೆ. ಕೂಡಲೇ ಭೇಟಿ ಕೊಟ್ಟ ಉರಗ ತಜ್ಞರು, ಆ ಹಾವಿನ ಮರಿಗಳನ್ನ ಹಿಡಿದು ರಕ್ಷಣೆ ಮಾಡಿದ್ದಾರೆ.
CM Visits Rain Hit Areas, Siddaramaiah Inspects Waterlogged Sai Layout, Urges Direct Assessment of Affected Homes.
21-05-25 09:16 pm
Bangalore Correspondent
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
ED Raids, Parameshwar College, Ranya Rao: ಹೋಂ...
21-05-25 01:50 pm
KG Halli Police Sub inspector Nagraj, Wife su...
21-05-25 12:12 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 11:09 pm
HK News Desk
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm