ಬೆಡ್ ಸಿಗದ ಹಿನ್ನಲೆ ಕೊರೋನಾ ಸೋಂಕಿಗೆ ತುತ್ತಾಗಿ ಬಾಣಂತಿ ಸಾವು

31-07-20 08:01 am       Bangalore Correspondant   ಕರ್ನಾಟಕ

ಮಹಿಳೆಯನ್ನು ತುರ್ತು ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ನಿನ್ನೆ ತಡರಾತ್ರಿ ವರೆಗೆ ನಾನಾ ಆಸ್ಪತ್ರೆಗೆ ಓಡಾಡಿದ್ದಾರೆ. ಆದರೆ, ಎಲ್ಲೂ ಬೆಡ್‌ ಸಿಕ್ಕಿರಲಿಲ್ಲ. ಈ ನಡುವೆ ಅಧಿಕಾರಿಗಳಿಗೆ ಕರೆ ಮಾಡಿದರೂ ಉಪಯೋಗವಾಗಲಿಲ್ಲ.

ಬೆಂಗಳೂರು (ಜುಲೈ 31); ಆಸ್ಪತ್ರೆಯಲ್ಲಿ ಬೆಡ್‌ ಹಾಗೂ ಸೂಕ್ತ ಚಿಕಿತ್ಸೆ ಸಿಗದ ಕಾರಣ ಆರು ದಿನದ ಮಗುವನ್ನು ಬಿಟ್ಟು ಬಾಣಂತಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.

ಮೃತ ಮಹಿಳೆಗೆ ಕಳೆದ ಆರು ದಿನಗಳ ಹಿಂದೆ ಹೆರಿಗೆ ಆಗಿ ಮಗು ಜನಿಸಿತ್ತು. ಆದರೆ, ಹೆರಿಗೆಯ ನಂತರ ಆಕೆಗೆ ಕೊರೋನಾ ಪಾಸಿಟೀವ್‌ ಇರುವುದು ದೃಢಪಟ್ಟಿತ್ತು. ಹೀಗಾಗಿ ಕಳೆದ ಒಂದು ವಾರದಿಂದ ಆಕೆಗೆ ಉತ್ತಮ ಚಿಕಿತ್ಸೆ ನೀಡಲು ಕುಟುಂಬ ವರ್ಗ ಪರದಾಡಿದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ನಿನ್ನೆ ಸಂಜೆ ಆಕೆಗೆ ಧಿಡೀರ್‌ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ.

ಹೀಗಾಗಿ ಮಹಿಳೆಯನ್ನು ತುರ್ತು ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ನಿನ್ನೆ ತಡರಾತ್ರಿ ವರೆಗೆ ನಾನಾ ಆಸ್ಪತ್ರೆಗೆ ಓಡಾಡಿದ್ದಾರೆ. ಆದರೆ, ಎಲ್ಲೂ ಬೆಡ್‌ ಸಿಕ್ಕಿರಲಿಲ್ಲ. ಈ ನಡುವೆ ಅಧಿಕಾರಿಗಳಿಗೆ ಕರೆ ಮಾಡಿದರೂ ಉಪಯೋಗವಾಗಲಿಲ್ಲ. ಹೀಗಾಗಿ ಕುಟುಂಬದವರು ಶಾಸಕಿ ಸೌಮ್ಯ ರೆಡ್ಡಿ ಅವರಿಗೆ ಕರೆ ಮಾಡಿತ್ತು. ಸೌಮ್ಯ ರೆಡ್ಡಿ ಸಹ "ಬಾಣಂತಿಗೆ ಬೆಡ್‌ ಬೇಕು" ಎಂದು ಟ್ವೀಟ್‌ ಮಾಡುವ ಮೂಲಕ ಸರ್ಕಾರವನ್ನು ವಿನಂತಿಸಿದ್ದರು.

ಆದರೆ, ಕೊನೆಗೂ ಆಕೆಗೆ ಬೆಡ್‌ ಸಿಗಲಿಲ್ಲ. ಹೀಗಾಗಿ ನಿನ್ನೆ ರಾತ್ರಿ ಉಸಿರಾಟದ ತೊಂದರೆಯಿಂದ ಬಾಣಂತಿ ಮಹಿಳೆ ಮೃತಪಟ್ಟಿದ್ದಾರೆ. ಆರು ದಿನದ ಮಗುವನ್ನು ಮಹಿಳೆ ತೊರೆದಿದ್ದು ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.