ಬ್ರೇಕಿಂಗ್ ನ್ಯೂಸ್
29-05-25 10:21 pm Bangalore Correspondent ಕರ್ನಾಟಕ
ಬೆಂಗಳೂರು, ಮೇ 29 : ಮಂಗಳೂರಿನಲ್ಲಿ ಬರೀ ಗಲಾಟೆ ನಡೆಯುತ್ತೆ. ಧರ್ಮ ಜಾತಿ ಅಂತ ಒಡೆಯೋಕೆ ಹೋಗ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಯುವಕರು ಇರ್ತಾನೇ ಇಲ್ಲ. ಎಲ್ಲರೂ ದುಬೈ, ಬೆಂಗಳೂರು ಕಡೆ ಬರ್ತಿದ್ದಾರೆ. ಬರೀ ಧರ್ಮ ಜಾತಿ ಅಂತ ಒಡೆಯುತ್ತಿದ್ದಾರೆ. ನಾವು ಒಟ್ಟುಗೂಡಿಸುವ ಕೆಲಸ ಮಾಡ್ತೇವೆ. ಬಿಜೆಪಿಯವರು ಕತ್ತರಿ ಇದ್ದಂತೆ, ನಾವು ಸೂಜಿ ಇದ್ದಂತೆ. ನಾವು ಹೊಲೆಯೋ ಕೆಲಸ ಮಾಡ್ತೇವೆ ಎಂದು ಹೇಳಿದರು.
ಇದೇ ವೇಳೆ ಮಂಗಳೂರಿನಲ್ಲಿ ನಮ್ಮ ಗ್ಯಾರೆಂಟಿ ಬೇಡ ಅಂದ್ರು, ಆದರೆ ಅವರೇ ಮೊದಲು ಕ್ಯೂನಲ್ಲಿ ಇದ್ರು ಎಂದ ಡಿಕೆಶಿ, ಕನಕಪುರಕ್ಕಿಂತ ಅವರೇ 80%ರಷ್ಟು ಅರ್ಜಿ ಹಾಕಿದ್ರು. ಮಂಗಳೂರಿನವರಿಗೆ ಹೊಟ್ಡೆ ಬಟ್ಟೆಗೆ ಕಾಂಗ್ರೆಸ್ ಬೇಕು. ವೋಟು ಹಾಕೋಕೆ ಬೇರೆಯವರು ಬೇಕು. ಈಗೇನು ಅಲ್ಲಿ ಬದಲಾವಣೆ ಕಾಣಿಸ್ತಿದೆ ಎಂದು ಪ್ರಶ್ನಿಸಿದರು.
ಬಿಜೆಪಿ ಜೆಡಿಎಸ್ ವಿರುದ್ಧವೂ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ಅಧಿಕಾರದಿಂದ ಇಳಿಸಿದವರನ್ನ ತಬ್ಬಿಕೊಂಡಿದ್ದಾರೆ. ನಾನು ಹಿಂದೆ ಎಸ್ ಟಿ ಸೋಮಶೇಖರ್ಗೆ ಅಲ್ಲಿ ಹೋಗಬೇಡಿ ಅಂತ ಹೇಳಿದ್ದೆ. ಯೋಗೇಶ್ವರ್ ಮತ್ತೆ ಕಾಂಗ್ರೆಸ್ಗೆ ಬಂದ, ಎಂಟಿಬಿ ಕಥೆ ಏನಾಯ್ತು? ಶ್ರೀಮಂತ್ ಪಾಟೀಲ್ ಏನಾಯ್ತು? ಮಹೇಶ್ ಕುಮಟಳ್ಳಿ ಪರಿಸ್ಥಿತಿ ಹೇಗಿದೆ? ಅಯ್ಯೋ ನಮ್ಮನ್ನ ಸಾಯಿಸ್ತಾರೆ ಅಂತ ಯಾರೋ ಹೇಳ್ತಿದ್ದಾನೆ. ಮಾಡಬಾರದು ಮಾಡಿ ಬಾಯಿ ಬಡ್ಕೊತ್ತಿದ್ದಾರೆ. ಎಲ್ಲರೂ ವಾಪಸ್ ಬರ್ತಿದ್ದಾರೆ ಎಂದು ಹೇಳಿದರು.
ಬಹಳ ಜನ ಪಕ್ಷಕ್ಕೆಬರೋಕೆ ಕಾಯ್ತಿದ್ದಾರೆ. ಲೋಕಲ್ನಲ್ಲಿ ನಾನು ಸಂದೇಶ ಕೊಟ್ಟಿದ್ದೇನೆ ಎಂದ ಡಿಸಿಎಂ ಡಿಕೆ ಶಿವಕುಮಾರ್, ಇವತ್ತು ಎಲ್ಲರು ಕಾಂಗ್ರೆಸ್ ಗೆ ಬರ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ ದೊಡ್ಡ ಸಮುದ್ರ, ತಿಮಿಂಗಿಲ, ದೊಡ್ಡ, ಸಣ್ಣ ಮೀನು ಎಲ್ಲ ಇರುತ್ತೆ. ರಾಷ್ಟ್ರಧ್ವಜ ತಯಾರಿಸಿದ ಪಕ್ಷ ನಮ್ಮದು. ರಾಷ್ಟ್ರಗೀತೆ, ಸಂವಿಧಾನ ಕೊಟ್ಟ ಪಕ್ಷ ನಮ್ಮದು, ಸಮಯ ಈಗ ಬದಲಾಗಿರಬಹುದು, ಆದರೆ ಯಾರು ಪರ್ಮನೆಂಟ್ ಅಲ್ಲ ಎಂದು ಹೇಳಿದರು.
ಇನ್ನು, ಮೊನ್ನೆ ಯುದ್ಧ ಆಯ್ತು. ಎಲ್ಲರೂ ಇಂದಿರಾಗಾಂಧಿ ನೆನೆಸಿಕೊಳ್ತಿದ್ರು ಎಂದ ಡಿಕೆಶಿ, ಈಗ ಅವರು ಇದ್ದಿದ್ದರೆ ಏನಾಗ್ತಿತ್ತು ಅಂತ ನೆನಪಿಸ್ತಿದ್ರು. ನೆಹರು, ಇಂದಿರಾ ಕಾಲದಲ್ಲಿ ಎಲ್ಲವೂ ಆಯ್ತು. ಡ್ಯಾಂಗಳು ಎಲ್ಲವೂ ಕಾಂಗ್ರೆಸ್ ಕಾಲದಲ್ಲಿ ಆಗಿದ್ದು. ಬಿಜೆಪಿ, ಜೆಡಿಎಸ್ ಕಾಲದಲ್ಲಿ ಯಾವ್ದು ಆಗಲಿಲ್ಲ. ಎತ್ತಿನಹೊಳೆ ಮಾಡ್ತಿರೋದು ಬಿಜೆಪಿ, ಜೆಡಿಎಸ್ ಅಲ್ಲ. ಕುಮಾರಸ್ವಾಮಿ, ದೇವೇಗೌಡರು ಇದ್ರು. ಅವರು ಏನು ಮಾಡಿದ್ರು ಗುರುತು ಇದ್ಯಾ? ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜನತಾ ದಳದ ಲೀಡರ್ ನಂಬಿದ್ರೆ ಭವಿಷ್ಯ ಇಲ್ಲ ಎಂದು ಪರೋಕ್ಷವಾಗಿ ಎಚ್ಡಿ ಕುಮಾರಸ್ವಾಮಿ ಕಾಲೆಳೆದ ಡಿಕೆ ಶಿವಕುಮಾರ್, ಜೆಡಿಎಸ್ ಪಕ್ಷ ಅಲ್ಲ, ಅದೊಂದು ಕುಟುಂಬ. ಅವರೆಲ್ಲ ಗೆದ್ದಿದ್ದು ಪಕ್ಷದಿಂದ ಅಲ್ಲ, ಅಳಿಯನನ್ನ ಕರೆದೊಯ್ದು ಬಿಜೆಪಿಗೆ ನಿಲ್ಲಿಸಿದ್ರು. ನಮಗೆ ತಂತ್ರ ಮಾಡೋಕೆ ಬರೋದಿಲ್ವೇ? ನಾವು ಯೋಗೇಶ್ವರ್ ಕದೊದೋಯ್ದು ನಿಲ್ಲಿಸಿದ್ವಿ. ಯೋಗೇಶ್ವರ್ ಗೆಲ್ಲಲ್ಲಿಲ್ವೇ ಎಂದರು.
ಹಾಸನದಲ್ಲಿ ಏಳಕ್ಕೆ ಏಳು ನಾವು ಗೆಲ್ತೇವೆ ಎಂದ ಡಿಕೆ ಶಿವಕುಮಾರ್, ಹಾಸನದಲ್ಲಿ ಎರಡು ಮೂರು ಗೆಲ್ತಿದ್ವಿ. ನಮ್ಮವರ ಕುತಂತ್ರದಿಂದಲೇ ಸೋತಿದ್ದು. ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ, ರಾಜ್ಯದ್ದು ನೀವು ಬಿಡಿ, ದೇಶಕ್ಕೆ ಕಾಂಗ್ರೆಸ್ ಬೇಕಿದೆ. ಇಲ್ಲಿ ಸಾರ್ಕ್ ಸಮ್ಮೇಳನ ನಡೆಸಲಾಗಿತ್ತು. ಬಾಂಗ್ಲಾ, ಬೂತಾನ್, ಎಲ್ಲವೂ ಬಂದಿದ್ವು. ಈಗ ನಮ್ಮ ನಡುವೆ ಯುದ್ಧ ನಡೆಯುತ್ತಿದೆ. ಒಬ್ಬರು ನಮ್ಮ ಪರವಾಗಿ ನಿಲ್ತಿಲ್ಲ ಎಂದರು.
Mangalore Wants Congress for Hotte Batte, But Others for Voting, BJP the Scissors, Congress the Needle, Dk slams Mangaloreans.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm