ಬ್ರೇಕಿಂಗ್ ನ್ಯೂಸ್
01-06-25 10:08 pm HK News Desk ಕರ್ನಾಟಕ
ಶಿವಮೊಗ್ಗ, ಜೂನ್ 1 : ರಾಜ್ಯದಲ್ಲಿ ವೈಮಾನಿಕ ಸೌಲಭ್ಯ ವಿಸ್ತರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ತರಬೇತಿ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ. ಆಮೂಲಕ ವಿಮಾನ ನಿಲ್ದಾಣ ರೆಡಿಯಾಗಿದ್ದರೂ, ಬಳಕೆಗೆ ಬಾರದ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸದುದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರದ ಅಧೀನದ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ನಿರ್ವಹಣೆ ಮಾಡುತ್ತಿದ್ದು ಇದೀಗ ವೈಮಾನಿಕ ತರಬೇತಿ ಸಂಸ್ಥೆ ಆರಂಭಿಸಲು ಟೆಂಡರ್ ಆಹ್ವಾನಿಸಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಎಫ್ಟಿಒ ಸ್ಥಾಪನೆಗಾಗಿ 3,500 ಚದರ ಮೀ. ವಿಸ್ತೀರ್ಣದ ಜಾಗ ನೀಡಲಾಗುತ್ತಿದ್ದು, ಅದರಲ್ಲಿ 1,500 ಚದರ ಮೀ. ಅನ್ನು ವಿಮಾನಗಳ ಹ್ಯಾಂಗರ್ಗಳಿಗೆ, 2 ಸಾವಿರ ಚದರ ಮೀ. ತರಗತಿ ಕೊಠಡಿ, ಕಚೇರಿಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. 2000 ಚದರ ಮೀಟರ್ ಜಾಗವನ್ನು ಟರ್ಮಿನಲ್ ಹೊರ ಭಾಗದಲ್ಲಿ ನೀಡಲಾಗುತ್ತಿದೆ. ಇಲ್ಲಿ ಕ್ಲಾಸ್ರೂಂ, ಸಿಮ್ಯುಲೇಟರ್ ವಿಭಾಗ, ಗ್ರಂಥಾಲಯ, ರೇಡಿಯೋ ಟೆಲಿಫೋನಿ ತರಬೇತಿ, ಟೆಸ್ಟಿಂಗ್ ರೂಮ್, ಕಚೇರಿಗಳು ಸೇರಿದಂತೆ ವಿವಿಧ ಕೊಠಡಿಗಳನ್ನು ನಿರ್ಮಿಸಲಾಗುತ್ತದೆ.
ಕೆಎಸ್ಐಐಡಿಸಿ ಸಂಸ್ಥೆಯು ಫೈರ್ ಸೇಫ್ಟಿ, ಆಂಬ್ಯುಲೆನ್ಸ್ ಸೌಲಭ್ಯ, ಏರ್ ಟ್ರಾಫಿಕ್ ಕಂಟ್ರೋಲ್, ರನ್ ವೇ ನಿರ್ವಹಣೆ ಮಾಡಲಿದೆ. ತರಬೇತಿ ಸಂಸ್ಥೆ ಆರಂಭಿಸುವ ಏಜೆನ್ಸಿಯು ತನ್ನ ವ್ಯಾಪ್ತಿಯ ವಿದ್ಯುತ್ ಬಿಲ್, ಸೆಕ್ಯೂರಿಟಿ ಸೇರಿದಂತೆ ವಿವಿಧ ನಿರ್ವಹಣೆಗಳನ್ನು ತಾನೆ ಮಾಡಿಕೊಳ್ಳಬೇಕು. ಅಲ್ಲದೆ, ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ನಾಗರಿಕ ವಿಮಾನಯಾನ ಇಲಾಖೆ ಸೂಚಿಸಿರುವ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.
ಪ್ರತಿ ವರ್ಷ 100 ಮಂದಿಗೆ ತರಬೇತಿ ನೀಡುವ ಗುರಿ ಇದೆ. ತರಬೇತಿ ಸಂಸ್ಥೆ ಆರಂಭಗೊಂಡ ಮೊದಲ ವರ್ಷ 50 ಅಭ್ಯರ್ಥಿಗಳನ್ನು ದಾಖಲು ಮಾಡಲಾಗುತ್ತದೆ. ಮೂರನೇ ವರ್ಷದ ಹೊತ್ತಿಗೆ 100 ಅಭ್ಯರ್ಥಿಗಳನ್ನು ದಾಖಲು ಮಾಡಿಕೊಳ್ಳಬೇಕು. ಶೇ.25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಕಾಯ್ದಿರಿಸಬೇಕು. ಅವರಿಗೆ ಶುಲ್ಕ ವಿನಾಯಿತಿ ಸಹ ನೀಡಬೇಕು. ಏಜೆನ್ಸಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೂ ಅದಕ್ಕೆ ಮುನ್ನ ಕೆಎಸ್ಐಐಡಿಸಿ ಅನುಮತಿ ಪಡೆಯಬೇಕು.
ಪ್ರತಿ ಚದರ ಮೀಟರ್ಗೆ ವಾರ್ಷಿಕ 650 ರೂ.ಗಳನ್ನು ಕೆಎಸ್ಐಐಡಿಸಿಗೆ ಏಜೆನ್ಸಿ ಸಂಸ್ಥೆ ಪಾವತಿಸಬೇಕು. ಪ್ರತಿ ಮೂರು ವರ್ಷಕ್ಕೆ ಈ ದರ ಶೇ.15ರಷ್ಟು ಹೆಚ್ಚಳವಾಗಲಿದೆ. ವಿಮಾನ ನಿಲ್ದಾಣ ಮತ್ತು ರನ್ವೇ ಬಳಕೆ ಮಾಡಿಕೊಳ್ಳುವಾಗ ಕೆಎಸ್ಐಐಡಿಸಿಯೊಂದಿಗೆ ಮಾಹಿತಿ ಪಡೆಯಬೇಕು. ದೈನಂದಿನ ಕಾರ್ಯಾಚರಣೆ, ಸರ್ಕಾರದ ವಿಮಾನಗಳು, ವಿವಿಐಪಿ ವಿಮಾನಗಳಿಗೆ ಮೊದಲ ಆದ್ಯತೆ ನೀಡಬೇಕು. ತರಬೇತಿ ಸಂಸ್ಥೆ ಕಾರ್ಯಾರಂಭ ಮಾಡಿದ ಮೂರು ತಿಂಗಳ ಒಳಗೆ ಮೂರು ವಿಮಾನಗಳನ್ನು ಹೊಂದಿಸಿಕೊಳ್ಳಬೇಕು ಎಂಬ ಷರತ್ತುಗಳನ್ನು ಹಾಕಲಾಗಿದೆ.
Flight Training Academy Planned at Shivamogga Airport, Govt Invites Tenders.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm