ಬ್ರೇಕಿಂಗ್ ನ್ಯೂಸ್
03-06-25 10:50 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 3 : ನಟ ಕಮಲಹಾಸನ್ ನಟನೆಯ ‘ಥಗ್ ಲೈಫ್ ' ಸಿನಿಮಾವನ್ನು ಕರ್ನಾಟಕದಲ್ಲಿ ಸದ್ಯಕ್ಕೆ ಬಿಡುಗಡೆ ಮಾಡದಿರಲು ಚಿತ್ರತಂಡ ಒಪ್ಪಿಕೊಂಡಿದೆ. ಚಿತ್ರ ಬಿಡುಗಡೆಗಾಗಿ ಭದ್ರತೆ ಕೋರಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ನಿರ್ಮಾಪಕರ ಹೇಳಿಕೆಯನ್ನು ದಾಖಲಿಸಿದ್ದು, ಈ ವೇಳೆ ಭಾಷೆಯ ವಿಚಾರದಲ್ಲಿ ಮುಂದಡಿ ಇಡುವಾಗ ವಿವೇಚನೆ ಬಳಸುವಂತೆ ಕಿವಿಮಾತು ಹೇಳಿತು. ಕರ್ನಾಟಕದಲ್ಲಿ ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ನಿರ್ಮಾಪಕರು ರಾಜ್ಯದಲ್ಲಿ ಸದ್ಯಕ್ಕೆ ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕನ್ನಡ ತಮಿಳು ಮೂಲದಿಂದ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆ ನೀಡಿದ್ದಕ್ಕೆ ಕರ್ನಾಟಕದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಕಮಲ್ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡದಂತೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಕರ್ನಾಟಕ ಸರ್ಕಾರವು ಸಿನಿಮಾ ಬಿಡುಗಡೆಗೆ ಭದ್ರತೆ ನೀಡಬೇಕು ಎಂದು ಕೋರಿ ಚಿತ್ರ ತಂಡವು ಹೈಕೋರ್ಟ್ ಮೊರೆ ಹೋಗಿತ್ತು.
ಕ್ಷಮೆ ಕೇಳಿ ಎಂದಿದ್ದ ಹೈಕೋರ್ಟ್
ನಟ ಕಮಲ್ ಹಾಸನ್ ಅವರಲ್ಲಿ ಹೇಳಿಕೆ ಸಂಬಂಧಿಸಿ ಕನ್ನಡಿಗರ ಕ್ಷಮೆ ಕೋರುವಂತೆ ಹೈಕೋರ್ಟ್ ಸೂಚಿಸಿತ್ತು. ಆದರೆ ನಟನ ಪರ ಹಾಜರಾದ ವಕೀಲ ಧ್ಯಾನ್ ಚಿನ್ನಪ್ಪ, ಪೀಠದ ಭಾವನೆಗಳನ್ನು ಕಮಲ್ ಹಾಸನ್ ಅವರಿಗೆ ತಿಳಿಸಿದ್ದೇನೆ. ಮೆರಿಟ್ ಮೇಲೆ ವಾದಿಸಲಾಗುವುದು ಎಂದು ಹೇಳಿ, ನಟ ಕಮಲ್ ಅವರು ಕರ್ನಾಟಕ ವಾಣಿಜ್ಯ ಮಂಡಳಿಗೆ ಬರೆದಿರುವ ಪತ್ರವನ್ನು ಕೋರ್ಟ್ಗೆ ಓದಿ ಹೇಳಿದರು.
ಪತ್ರವನ್ನು ಕೇಳಿಸಿಕೊಂಡ ನ್ಯಾಯಮೂರ್ತಿಗಳು, " ಎಲ್ಲವೂ ಸರಿಯಾಗಿದೆ. ಇದರ ಜೊತೆಗೆ ಯಾರ ಭಾವನೆಗಾದರೂ ನಾನು ನೋವು ಉಂಟು ಮಾಡಿದ್ದರೆ ಎಂದು ಹೇಳಿದ್ದರೆ ಸರಿ ಆಗಿರುತ್ತಿತ್ತು" ಎಂದರು.
ಕಮಲ್ ಅವರು ಪತ್ರದಲ್ಲಿ ಕನ್ನಡದ ಬಗ್ಗೆ ಇರುವ ತಮ್ಮ ಗೌರವವನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಕ್ಷಮೆ ಕೇಳಬೇಕೆಂದು ಹೇಳಲು ಸಾಧ್ಯವಿಲ್ಲ. ಹಾಗಂತ, ನಾವು ಭಾಷೆ ಆಧಾರದಲ್ಲಿ ವಿಭಜನೆಯಾಗಬಾರದು, ದೇಶ- ಭಾಷೆ ಒಂದೇ, ಕನ್ನಡವೂ ಇರಬೇಕು, ತಮಿಳೂ ಇರಬೇಕು ಎಂದು ಬರೆದ ಪತ್ರವನ್ನು ಉಲ್ಲೇಖಿಸಿ ವಕೀಲ ಧ್ಯಾನ್ ಚಿನ್ನಪ್ಪ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ಈ ವಿಚಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೊಂದಿಗೆ ಚರ್ಚೆ ನಡೆಸಲು ಸಿದ್ದವಿದ್ದೇವೆ. ಅದಕ್ಕಾಗಿ ಒಂದು ವಾರ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು.
ನಟ ಕಮಲ್ ಅವರಲ್ಲಿ ಹೇಳಿಕೆಯ ಬಗ್ಗೆ ವಾಣಿಜ್ಯೋದ್ಯಮ ಮಂಡಳಿಯಿಂದ ಕ್ಷಮೆ ಕೋರಲು ಕೇಳಲಾಗಿತ್ತು. ಆದರೆ ಕ್ಷಮೆ ಕೇಳುವ ಬದಲು ತನ್ನ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿ ಕಮಲ್ ಪತ್ರ ಬರೆದಿದ್ದಾರೆ. ಈ ಕುರಿತು ಕಮಲ್ ಅವರು ವಾಣಿಜ್ಯ ಮಂಡಳಿ ಸಮಾಲೋಚನೆ ಜೊತೆ ನಡೆಸಲು ನಿರ್ಧರಿಸಿದ್ದು, ಸದ್ಯ ವಿಚಾರಣೆ ಮುಂದೂಡುವಂತೆ ನಟನ ಪರ ವಕೀಲರು ಕೋರಿದ್ದಾರೆ. ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಲಾಗಿದೆ.
Thug Life Movie Release Stalled in Karnataka; Kamal Haasan's Remarks Spark Controversy
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm