ಬ್ರೇಕಿಂಗ್ ನ್ಯೂಸ್
04-06-25 09:07 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್.4: ಐಪಿಎಲ್ ಟ್ರೋಫಿ ಗೆದ್ದ ಆರ್ಸಿಬಿ ತಂಡವನ್ನು ಸನ್ಮಾನಿಸಲು ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತೆ ಮಾಡಿಕೊಳ್ಳದೆ ತರಾತುರಿ ಮಾಡಿದ್ದು ದುರಂತಕ್ಕೆ ಕಾರಣವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ. ಇಷ್ಟಕ್ಕೂ ಏರ್ಪೋರ್ಟ್ ನಲ್ಲಿ ಸ್ವತಃ ಡಿಸಿಎಂ ಡಿಕೆಶಿ ಅದ್ದೂರಿ ಸ್ವಾಗತ ಮಾಡಿಕೊಂಡು ವಿಧಾನಸೌಧ ಮುಂದೆ ಸನ್ಮಾನ, ಆಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಫ್ಯಾನ್ಸ್ ಮೀಟ್, ಹೀಗೆ ಅಕ್ಕ ಪಕ್ಕದಲ್ಲಿ ಎರಡೆರಡು ಕಾರ್ಯಕ್ರಮ ಹಮ್ಮಿಕೊಂಡು ವ್ಯವಸ್ಥೆ ಸರಿಯಾಗಿ ಮಾಡದಿದ್ದುದೇ ಎಡವಟ್ಟಿಗೆ ಕಾರಣ ಆಯ್ತು ಎನ್ನುವ ಮಾತು ಕೇಳಿಬಂದಿದೆ.
ಒಂದೆಡೆ ವಿಧಾನಸೌಧ ಮುಂಭಾಗದಲ್ಲಿ ಆರ್ಸಿಬಿ ತಂಡಕ್ಕೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು. ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್ಸಿಬಿ, ಫ್ಯಾನ್ಸ್ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಎರಡು ಕಡೆಯೂ ರಾಜ್ಯ ಸರ್ಕಾರದ್ದೇ ಕಾರ್ಯಕ್ರಮ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡಬಹುದು, ಸೆಲ್ಫಿ ತಗೋಬಹುದು ಅಂತ ಅಪಾರ ಅಭಿಮಾನಿಗಳು ಹರಿದು ಬಂದಿದ್ದರು. ಇದೇ ವೇಳೆ, ನೂಕು ನುಗ್ಗಲು ಉಂಟಾಗಿ ಅನಾಹುತ ನಡೆದು ಹೋಗಿದೆ. ಇತ್ತ ಕಾಲ್ತುಳಿತ ಉಂಟಾಗಿ ದುರಂತ ಎದುರಾದರೆ, ಅತ್ತ ವಿಧಾನಸೌಧ ಮುಂಭಾಗದಲ್ಲಿ ಆಟಗಾರರಿಗೆ ಸನ್ಮಾನ ಏರ್ಪಡಿಸಲಾಗಿತ್ತು. ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಆಗುತ್ತಿದ್ದಂತೆ ಒಟ್ಟು ಕಾರ್ಯಕ್ರಮವನ್ನೇ ರದ್ದುಪಡಿಸಲಾಗಿದೆ.
ರಾಜ್ಯ ಸರ್ಕಾರ ಜನ ಸೇರುವ ಬಗ್ಗೆ ಸರಿಯಾದ ಪ್ಲಾನ್ ಮಾಡದೇ ಕಾರ್ಯಕ್ರಮ ಆಯೋಜಿಸಿದ್ದೇ ದುರಂತಕ್ಕೆ ಕಾರಣವಾಯ್ತಾ ಎಂಬ ಪ್ರಶ್ನೆ ಇದೆ. ಆರ್ಸಿಬಿ ನಿನ್ನೆ ರಾತ್ರಿ ಕಪ್ ಗೆದ್ದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿತ್ತು. ಇದಲ್ಲದೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವ ರೀತಿಯ ಕಾರ್ಯಕ್ರಮ, ಟಿಕೆಟ್ ಹೇಗೆ ವಿತರಣೆ ಎಂಬ ವಿಚಾರದಲ್ಲಿ ಗೊಂದಲವಿತ್ತು. ಸ್ಟೇಡಿಯಂ ಒಳಗೆ ಎಂಟ್ರಿ ನೀಡಲು ಯಾವುದೇ ಪಾಸ್ ಬೇಕಾಗಿಲ್ಲ ಎಂದು ಮೊದಲು ಹೇಳಿದ್ದರೆ, ಕೊನೆಯಲ್ಲಿ ಜನರನ್ನು ನಿಯಂತ್ರಣ ಮಾಡಲಿಕ್ಕೆ ಆಗದು ಎಂದರಿತು ಪಾಸ್ ಕಡ್ಡಾಯ ಮಾಡಲಾಗಿತ್ತು. ಪಾಸ್ ಇಲ್ಲದವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಜನ ಸೇರಿದ ಬಳಿಕ ಸಿಬ್ಬಂದಿ ಹೇಳತೊಡಗಿದ್ದು ಎಡವಟ್ಟಿಗೆ ಕಾರಣವಾಯ್ತು.
ಸಾವಿರಾರು ಜನರು ಸೇರಿದ್ದರಿಂದ ಪೊಲೀಸರಾಗಲೀ, ಅಲ್ಲಿನ ಸಿಬಂದಿಯಾಗಲೀ ಯಾವುದೇ ವ್ಯವಸ್ಥೆ ಮಾಡೋದಕ್ಕೂ ಆಗಲಿಲ್ಲ. ಕೊನೆಗೆ ಅಭಿಮಾನಿಗಳು ಗೋಡೆ, ಕಾಂಪೌಂಡ್ ಹತ್ತಿ ಸ್ಟೇಡಿಯಂ ಒಳಗೆ ಹೋಗಲು ಮುಂದಾಗಿದ್ದಾರೆ. ಇದೇ ವೇಳೆ, ಕೆಲವರು ಪಾಸ್ ಇಲ್ಲದೇ ಒಳಗೆ ನುಗ್ಗಿದ್ದಾರೆ. ಸ್ಟೇಡಿಯಂ ತುಂಬಿದ ಬಳಿಕ ಸಿಬಂದಿ ಗೇಟ್ ಬಂದ್ ಮಾಡಿದಾಗ, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ನಿರೀಕ್ಷೆಗೂ ಮೀರಿದ ಜನ ಸ್ಟೇಡಿಯಂ ಹೊರಗೆ ನಿಂತಿದ್ದಲ್ಲದೆ, ಮೈದಾನದ ಒಳಗೆ ಹೋಗಲೇಬೇಕು ಎಂದು ಹಠ ಮಾಡಿದ್ದಾರೆ. ಯುವಕರು ನುಗ್ಗತೊಡಗಿದ್ದರಿಂದ ಸಿಬಂದಿಗೆ ಕಂಟ್ರೋಲ್ ತಪ್ಪಿದ್ದು ಒಟ್ಟು ನೂಕುನುಗ್ಗಲು ಉಂಟಾಗಿದೆ. ನೋಡ ನೋಡುತ್ತಿದ್ದಂತೆ ಮಕ್ಕಳೊಂದಿಗೆ ಬಂದಿದ್ದವರು, ವಿದ್ಯಾರ್ಥಿನಿಯರು ಕಾಲ್ತುಳಿತಕ್ಕೊಳಗಾಗಿ ನೆಲಕ್ಕೆ ಬಿದ್ದಿದ್ದಾರೆ. ಟಿಕೆಟ್ ಬಗ್ಗೆ ಮೊದಲೇ ಹೇಳುತ್ತಿದ್ದರೆ ಸ್ಟೇಡಿಯಂ ಮುಂದೆ ಕಾಲ್ತುಳಿತ ಆಗ್ತಿರಲಿಲ್ಲ ಎಂಬ ಮಾತು ಕೇಳಿಬಂದಿದೆ.
ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳದೇ, ಫ್ಯಾನ್ಸ್ ಮೀಟ್ ಮಾಡೋಕೆ ಉಚಿತ ಏರ್ಪಾಡು ಮಾಡಿದ್ದೇ ಎಡವಟ್ಟಿಗೆ ಕಾರಣ. ಇದಲ್ಲದೆ, ಅಭಿಮಾನಿಗಳ ಅತಿರೇಕದಲ್ಲಿ ಇರುವಾಗಲೇ ತರಾತುರಿಯಲ್ಲಿ ಫ್ಯಾನ್ಸ್ ಮೀಟ್ ಮಾಡಿದ್ಯಾಕೆ ಎಂಬ ಪ್ರಶ್ನೆಯೂ ಇದೆ. ರಾಜ್ಯ ಸರ್ಕಾರದಿಂದ ಕಾರ್ಯಕ್ರಮ ಏರ್ಪಡಿಸುವಾಗ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮರುದಿನವೇ ಮಾಡಬೇಕೆಂಬ ತರಾತುರಿ ಅಗತ್ಯವಿರಲಿಲ್ಲ. ಹೀಗಾಗಿ ಒಟ್ಟು ಅವ್ಯವಸ್ಥೆಯೇ ಅಭಿಮಾನಿಗಳ ಪ್ರಾಣ ಕಸಿಯುವಂತಾಗಿದೆ.
In a major lapse of planning and crowd management, the Karnataka state government's hastily organized felicitation ceremony—coupled with poor communication and free entry announcements—led to overwhelming crowds gathering outside the stadium. The stampede occurred at multiple entry gates as thousands of fans surged in hopes of catching a glimpse of their favorite players.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm