ಬ್ರೇಕಿಂಗ್ ನ್ಯೂಸ್
06-06-25 02:14 pm Nithin, Bengaluru Staff ಕರ್ನಾಟಕ
ಬೆಂಗಳೂರು, ಜೂ.6 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಸೇರಿದಂತೆ ಆರು ಮಂದಿ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಆದರೆ ಸರ್ಕಾರದ ಈ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧವೂ ವ್ಯಕ್ತವಾಗುತ್ತಿದೆ. ಎತ್ತಿಗೆ ಜ್ವರ ಎಮ್ಮೆಗೆ ಬರೆ ಎಳೆದಿದ್ದಾರೆಂದು ಆಕ್ರೋಶ ಕೇಳಿಬಂದಿದೆ. ಮಾಜಿ ಪೊಲೀಸ್ ಅಧಿಕಾರಿ ಭಾಸ್ಕರ ರಾವ್ ಕೂಡ, ರಾಜ್ಯ ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಬಲಿ ಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
ಆರ್ ಸಿ ಬಿ ತಂಡ ಗೆದ್ದ ದಿನ ತಡರಾತ್ರಿ 3 ಗಂಟೆಯ ವರೆಗೂ ಬೆಂಗಳೂರು ನಗರ ಪೊಲೀಸರು ಕರ್ತವ್ಯ ನಿರ್ವಹಿಸಿದ್ದರು. ಮರು ದಿನ ದಿಢೀರ್ ಆಗಿ ವಿಜಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಪೊಲೀಸ್ ಇಲಾಖೆಯಿಂದ ತೆರೆದ ವಾಹನದಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನೀಡಿರಲಿಲ್ಲ ಎಂಬ ಮಾಹಿತಿ ಇದೆ. ಹೀಗಿದ್ದರೂ ದಿಢೀರ್ ಆಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಪರಿಣಾಮ ಗೊಂದಲ ಸೃಷ್ಟಿಯಾಗಿ ಜನರನ್ನು ನಿಯಂತ್ರಣ ಮಾಡಲು ಸಾಧ್ಯವಾಗದೆ 11 ಮಂದಿಯ ಸಾವಾಗಿದೆ. ಈ ನಿಟ್ಟಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೆಗೆ ಪೊಲೀಸರೇ ಕಾರಣ ಎಂದು ಅವರನ್ನು ಬಲಿ ಕೊಡಲಾಗಿದೆ.
ಬಿ ದಯಾನಂದ್ - ಬೆಂಗಳೂರು ನಗರ ಪೊಲೀಸ್ ಆಯುಕ್ತ, ವಿಕಾಸ್ ಕುಮಾರ್ - ಹೆಚ್ಚುವರಿ ಪೊಲೀಸ್ ಆಯುಕ್ತ, ಎಚ್ ಟಿ ಶೇಖರ್ - ಕೇಂದ್ರ ವಿಭಾಗದ ಡಿಸಿಪಿ, ಸಿ. ಬಾಲಕೃಷ್ಣ - ಕಬ್ಬನ್ ಪಾರ್ಕ್ ಎಸಿಪಿ, ಎಕೆ ಗಿರೀಶ್ - ಕಬ್ಬನ್ ಪಾರ್ಕ್ ಪೊಲೀಸ್ ಇನ್ ಸ್ಪೆಕ್ಟರ್ ಅವರನ್ನು ರಾಜ್ಯ ಸರ್ಕಾರ ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಿದ್ದು ಒಟ್ಟು ಘಟನೆಗೆ ಪೊಲೀಸರೇ ಕಾರಣ ಎನ್ನುವಂತೆ ದೂಷಣೆ ಮಾಡಲಾರಂಭಿಸಿದೆ. ನಿಷ್ಠಾವಂತ ಐಪಿಎಸ್ ಅಧಿಕಾರಿಯೆಂದು ಇಲಾಖೆಯಲ್ಲಿ ಹೆಸರು ಮಾಡಿದ್ದ ದಯಾನಂದ್ ಅವರನ್ನು ಸಸ್ಪೆಂಡ್ ಮಾಡಿದ್ದಕ್ಕೆ ಇಲಾಖೆ ಒಳಗಡೆಯೇ ಅಸಮಾಧಾನ ವ್ಯಕ್ತವಾಗಿದೆ.
ಸರ್ಕಾರದ ಕ್ರಮಕ್ಕೆ ಆಕ್ರೋಶ
ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿದ್ದಕ್ಕೆ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾರ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಕೊಡುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಅವರ ಬೆಂಬಲಕ್ಕೆ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿಂತಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ ಎಂದು ಜರೆದಿದ್ದಾರೆ.
“ಸಿದ್ದರಾಮಯ್ಯ ಪ್ಯಾನಿಕ್ ಮೋಡ್‌ಗೆ ಹೋಗಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ. ಸತ್ಯವನ್ನು ಹೇಳಿದ್ದಕ್ಕಾಗಿ ಬಹುಮಾನ ಮತ್ತು ಅವರು ಮತ್ತು ಅವರ ತಂಡ ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಕೆಲಸ ಮಾಡಿದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಡೆತ್ ಮಾರ್ಚ್‌ಗೆ ಕಾರಣಕರ್ತ ಎಂಬುದು ಕರ್ನಾಟಕದ ಎಲ್ಲರಿಗೂ ಗೊತ್ತು. ಯಾವ ಮುಖ್ಯಮಂತ್ರಿಯೂ ಅಸಹಾಯಕ, ಹೇಡಿ, ನರ ಮತ್ತು ಭಯಭೀತರಾಗಿಲ್ಲ. ಸರ್ಕಾರದ ಕೈ ರಕ್ತಮಯವಾಗಿದೆ” ಎಂದು ಕಿಡಿಕಾರಿದ್ದಾರೆ.
ಕಮಿಷನರ್ ಪರ ಜಾಲತಾಣಗಳಲ್ಲಿ ಬೆಂಬಲ
ದಯಾನಂದ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲೂ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸರ್ಕಾರ ತನ್ನ ಹೊಣೆಯನ್ನು ಪೊಲೀಸರ ಮೇಲೆ ವರ್ಗಾವಣೆ ಮಾಡುತ್ತಿದೆ. ಇಡೀ ದುರ್ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆರೋಪಿಸುತ್ತಿದೆ. ಹಾಗಾದರೆ ಸರ್ಕಾರದ ಪಾಲು ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ನಿಷ್ಠಾವಂತ ಅಧಿಕಾರಿಗೆ ಇದು ಬಹುಮಾನವೇ ?
ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್‌ಗೆ ಪೊಲೀಸ್ ಇಲಾಖೆಯಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿ ಅಂತಾನೇ ಹೆಸರು ಪಡೆದಿದ್ದಾರೆ. ಬಿ. ದಯಾನಂದ್ ಅವರು ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಶ್ರಮಿಸುವುದಾಗಿ ತಮ್ಮ ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಹೇಳಿದ್ದರು. ಅದೇ ಪ್ರಕಾರ, ಕರ್ತವ್ಯ ನಿರ್ವಹಿಸಿದ್ದರು. ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಒತ್ತು ನೀಡುತ್ತ ಕೆಲಸ ಮಾಡಿದ್ದರು ಎಂಬ ಮಾತಿದೆ. ಹೋನೆಸ್ಟ್ ಪೊಲೀಸ್ ಎಂದೇ ಖ್ಯಾತಿ ಪಡೆದಿರುವ ದಯಾನಂದ್ ಅವರು 1994ನೇ ಐಪಿಎಸ್ ಬ್ಯಾಚ್ ಅಧಿಕಾರಿ. 1998ರಲ್ಲಿ ಪುತ್ತೂರು ಸಬ್ ಡಿವಿಷನ್ ಎಎಸ್ಪಿಯಾಗಿ ಕರ್ತವ್ಯ ಆರಂಭಿಸಿದ್ದರು. 1990ರಿಂದ 2008ರ ವರೆಗೂ ಬಿಜಾಪುರ, ಬೆಳಗಾಂ, ಚಿತ್ರದುರ್ಗ, ದಕ್ಷಿಣ ಕನ್ನಡ, ಕೋಲಾರ, ಈ ಐದು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು. 2008ರಲ್ಲಿ ಡಿಐಜಿಯಾಗಿ ಪ್ರಮೋಷನ್ ಲಭಿಸಿತ್ತು.
ಬೆಂಗಳೂರು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದ ಇವರು ನಂತರ ಸಿಐಡಿ ಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 2013-15ರ ವರೆಗೆ ಬೆಂಗಳೂರು ಸಂಚಾರಿ ಪೊಲೀಸ್ ಆಯುಕ್ತರಾಗಿದ್ದ ಇವರು 2015-16ರಲ್ಲಿ ಮೈಸೂರು ಕಮಿಷನರ್ ಆಗಿ ನೇಮಕಗೊಂಡಿದ್ದರು. 2016-17ರ ವರೆಗೆ ರಾಜ್ಯ ಗುಪ್ತಚರ ಇಲಾಖೆ ಐಜಿಯಾಗಿ ಕೆಲಸ ನಿರ್ವಹಣೆ ಮಾಡಿದ್ದು 2017-18ರ ವರೆಗೆ ಸಾರಿಗೆ ಆಯುಕ್ತರಾಗಿ (ರಸ್ತೆ ಸುರಕ್ಷಿತ) ಕೆಲಸ ಮಾಡಿದ್ದರು. ನಂತರ 2018-19ರ ವರೆಗೆ ಕೇಂದ್ರ ವಲಯದ ಐಜಿಪಿಯಾಗಿದ್ದು 2019-20ರ ವರೆಗೆ ಸಿಐಡಿ ಆರ್ಥಿಕ ವಿಭಾಗದ ಎಡಿಜಿಪಿಯಾಗಿ ಪ್ರಮೋಷನ್ ಲಭಿಸಿತ್ತು. 2020ರಲ್ಲಿ ಗುಪ್ತಚರ ಇಲಾಖೆಯ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು.
ಗೃಹ ಸಚಿವರಿಗೆ ಗೊತ್ತಿಲ್ವಾ? ಗುಪ್ತಚರ ಇಲಾಖೆ ವೈಫಲ್ಯ ಅಲ್ವಾ?
ಇನ್ನೊಂದೆಡೆ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆ ವೈಫಲ್ಯ ಕೂಡ ಎದ್ದು ಕಾಣುತ್ತಿದೆ. ಎಷ್ಟು ಜನ ಸೇರಬಹುದು, ಅದರ ಪರಿಣಾಮ ಏನಿರಬಹುದು? ನಮ್ಮಲ್ಲಿ ಪೊಲೀಸ್ ಇಲಾಖೆ ಹೇಗಿದೆ? ಪೊಲೀಸ್ ಬಲ ಎಷ್ಟಿದೆ ಎಂಬ ಇಂಚಿಂಚೂ ಮಾಹಿತಿ ಗೃಹಸಚಿವ ಡಾ ಪರಮೇಶ್ವರ್ ಅವರಿಗೆ ಇದ್ದೇ ಇರುತ್ತದೆ. ಯಾವುದೇ ತಯಾರಿ ಇಲ್ಲದೇ ಏಕಾಏಕಿ ಆರ್‌ಸಿಬಿ ವಿಜಯೋತ್ಸವ ನಡೆಸಿದ್ರೆ ಏನಾಗಬಹುದು ಎಂಬ ಕಲ್ಪನೆ ಗುಪ್ತಚರ ಇಲಾಖೆಗೆ ಇರುತ್ತೆ. ಆದರೂ ಈ ಘಟನೆ ನಡೆದಿದೆ ಎಂದರೆ ಇದು ಯಾರ ವೈಫಲ್ಯ ಎಂಬ ಬಗ್ಗೆಯೂ ಪ್ರಶ್ನೆ ಎದ್ದಿದೆ.
The Karnataka government's decision to suspend six senior police officials, including Bengaluru Police Commissioner B. Dayanand, following the tragic stampede during the RCB victory parade at Chinnaswamy Stadium, has triggered widespread public outrage and sparked heated debate across social media platforms.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am