ಬ್ರೇಕಿಂಗ್ ನ್ಯೂಸ್
06-06-25 09:46 pm Bangalore Correspondent ಕರ್ನಾಟಕ
ಬೆಂಗಳೂರು, ಜೂನ್ 6 : ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನು ಅಮಾನತುಗೊಳಿಸಿದ್ದು ಮತ್ತು ತರಾತುರಿಯಲ್ಲಿ ಎಫ್ಐಆರ್ ಮಾಡಿ ಆರ್ ಸಿಬಿ ಮ್ಯಾನೇಜರ್ ಸೇರಿದಂತೆ ಪ್ರಮುಖರನ್ನು ಬಂಧನ ಮಾಡಿದ್ದನ್ನು ಹೆಸರಾಂತ ಉದ್ಯಮಿ ಮೋಹನದಾಸ್ ಪೈ ಟೀಕಿಸಿದ್ದಾರೆ. ಈ ರೀತಿಯ ನಡೆಯಿಂದ ಇಡೀ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಕುಂದಿಸಲಾಗಿದೆ ಎಂದು ಹೇಳಿದ್ದಾರೆ.
ಎಫ್ಐಆರ್ ಹಾಕಿರುವ ನಡೆಯನ್ನು ಕಾಂಗರೂ ಎಂದು ಟೀಕಿಸಿರುವ ಮೋಹನದಾಸ್ ಪೈ, ವಿಚಾರಣೆಗೆ ಮೊದಲೇ ಆರ್ ಸಿಬಿ ತಂಡದ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಪೊಲೀಸ್ ಕಮಿಷನರ್ ಅವರನ್ನು ಏಕಾಏಕಿ ಸಸ್ಪೆಂಡ್ ಮಾಡಿರುವುದು ಪೊಲೀಸ್ ಇಲಾಖೆಗೆ ತಪ್ಪು ಸಂದೇಶ ನೀಡಿದಂತಾಗಿದೆ. ಸ್ಥಳೀಯವಾಗಿ ನಿಯೋಜಿಸಲ್ಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಇದನ್ನೆಲ್ಲ ಕೆಳಸ್ತರದ ಪೊಲೀಸರು ನೋಡಿಕೊಳ್ಳುವುದಷ್ಟೇ. ಇದಕ್ಕಾಗಿ ಪೊಲೀಸ್ ಕಮಿಷನರ್ ಮೇಲೆ ಕ್ರಮ ಕೈಗೊಳ್ಳುವುದು ಸರಿಯೆಂದು ನನಗನಿಸ್ತಾ ಇಲ್ಲ. ಈ ರೀತಿಯ ನಡೆಯಿಂದಾಗಿ ಇಡೀ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸ್ಥೈರ್ಯ ಕುಂದಿಸಿದಂತೆ ಮತ್ತು ಇಲಾಖೆಗೆ ಕೆಟ್ಟ ಸಂದೇಶ ನೀಡಿದಂತೆ ಎಂದು ಹೇಳಿದ್ದಾರೆ.
ಆರ್ ಸಿಬಿ ಮ್ಯಾನೇಜರನ್ನು ಬಂಧನ ಮಾಡಿರುವುದು ಕೂಡ ತಪ್ಪು ನಡೆಯಾಗಿದೆ. ಈ ರೀತಿ ಬಂಧನ ಮಾಡುವ ಮೂಲಕ ತಪ್ಪು ಸಂದೇಶವನ್ನು ಕೊಟ್ಟಂತಾಗಿದೆ. ಆರ್ ಸಿಬಿ ಮಾರ್ಕೆಟಿಂಗ್ ಮ್ಯಾನೇಜರ್ ಏನು ಮಾಡಿರುತ್ತಾರೆ, ಯಾವ ತಪ್ಪಿನ ಮೇಲೆ ಅವರನ್ನು ಬಂಧಿಸಿದ್ದಾರೆ, ಅವರು ಆರ್ ಸಿಬಿಯಲ್ಲಿ ಇದ್ದಾರೆಂಬುದನ್ನು ಬಿಟ್ಟರೆ ಎಂದು ಪೈಗಳ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಾವೆಲ್ಲ ಉತ್ತರದಾಯಿಗಳು, ಯಾಕಂದ್ರೆ ನಾವೆಲ್ಲ ಸಂಕಟ ಅನುಭವಿಸಿದ್ದೇವೆ. ತನಿಖೆಯ ಬಳಿಕ ಆರ್ ಸಿಬಿ ತಪ್ಪು ಮಾಡಿದ್ದು ಅಂತ ಕಂಡುಬಂದರೆ ಎಫ್ಐಆರ್ ದಾಖಲಿಸುವುದು ಸರಿ. ಇದೊಂದು ರೀತಿಯ ಕಾಂಗರೂ ಎಫ್ಐಆರ್ ಎಂದು ಪೈ ಟೀಕೆ ಮಾಡಿದ್ದಾರೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಒಟ್ಟು ಅವ್ಯವಸ್ಥೆ ಬಗ್ಗೆ ಟೀಕಿಸಿರುವ ಮೋಹನದಾಸ್ ಪೈ, ಇದೆಲ್ಲ ನೋಡಿದರೆ ಸರ್ಕಾರ ನೈಜ ವಿಚಾರವನ್ನು ಮರೆ ಮಾಚುತ್ತಿರುವಂತೆ ತೋರುತ್ತಿದೆ. ನೈಜ ವಿಚಾರ ಏನಂದ್ರೆ, ಮೂರು ಲಕ್ಷದಷ್ಟು ಜನ ಸೇರಿದ್ದು ಹೇಗೆ ಎನ್ನುವುದು. ಒಂದೇ ಬಾರಿಗೆ ಅಷ್ಟು ಜನ ಸೇರುವುದಿಲ್ಲ. ಹತ್ತು ನಿಮಿಷದಲ್ಲಿ ಅಷ್ಟು ಜನ ಸೇರಿದ್ದಲ್ಲ. ನಾಲ್ಕು ಗಂಟೆ ಮೊದಲೇ ಸಾಲುಗಟ್ಟಿ ಬಂದಿದ್ದಾರೆ. ಹಾಗಿರುವಾಗ ಪೊಲೀಸರಿಗೆ ಇದನ್ನು ಗ್ರಹಿಸಲು ಸಾಧ್ಯವಾಗಿಲ್ಲ ಏಕೆ. ಇದು ಒಮ್ಮೆಲೇ ಸೇರಿದ್ದ ಗುಂಪು ಆಗಿರಲಿಲ್ಲ. ಜನ ಹೆಚ್ಚು ಸೇರಿದಾಗ ಅದನ್ನು ಮ್ಯಾನೇಜ್ ಮಾಡುವುದಕ್ಕಾಗಿಯೇ ಪ್ರೋಟೋಕಾಲ್ ಇದೆ. ರಸ್ತೆಯಲ್ಲಿ ಅಪಘಾತ ಆಯ್ತು ಅಂತ ಪೊಲೀಸರನ್ನು ಅರೆಸ್ಟ್ ಮಾಡ್ತೀರಾ.. ಇದು ಹಾಗೇ ಆಯ್ತಲ್ವಾ ಎಂದು ಪ್ರಶ್ನಿಸಿದ್ದಾರೆ.
ಕಾಲ್ತುಳಿತ ಆದ ಜಾಗದಲ್ಲಿ ಮೆಡಿಕಲ್ ಸೌಲಭ್ಯವೂ ಇರಲಿಲ್ಲ. ಆಂಬುಲೆನ್ಸ್ ಇರಲಿಲ್ಲ. ಕಾಲ್ತುಳಿತಕ್ಕೆ ಸಿಲುಕಿ ಗಾಯಗೊಂಡವರನ್ನು ಜನರೇ ಎತ್ತಿ ಒಯ್ಯುತ್ತಿದ್ದರು. ಹಾಗಾದ್ರೆ, ಆಂಬುಲೆನ್ಸ್ ಎಲ್ಲಿತ್ತು, ಪ್ರಥಮ ಚಿಕಿತ್ಸೆ ನೀಡುವುದಕ್ಕೆ ಏರ್ಪಾಡು ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಲ್ಲದೆ, ಆರ್ ಸಿಬಿ ಆಟಗಾರರ ವರ್ತನೆಯೂ ತಕ್ಕುದಾಗಿರಲಿಲ್ಲ. ವಿರಾಟ್ ಕೊಹ್ಲಿ ತುಂಬ ವರ್ಷಗಳಿಂದ ನಾಯಕರಾಗಿದ್ದಾರೆ. ನಾವು ನಮಗೆ ಸಿಗುವ ಬೋನಸ್ ಮೊತ್ತದ ಒಂದಂಶವನ್ನು ಕೊಡುತ್ತೇವೆ ಎನ್ನುವ ಬದಲು ನಾವೆಲ್ಲ ಆಟಗಾರರು ಸಂತ್ರಸ್ತರ ಜೊತೆಗಿದ್ದೇವೆ ಎಂದು ಹೇಳಬೇಕಿತ್ತು. ನಾವು ಅಭಿಮಾನಿಗಳ ಬಗ್ಗೆ ಕೇರ್ ಇಟ್ಟುಕೊಂಡಿಲ್ಲ ಎನ್ನುವುದನ್ನು ಕೊಹ್ಲಿ ತೋರಿಸಿದ್ದಾರೆ. ಜೊತೆಗೆ ಆರ್ ಸಿಬಿ ಮಾಲೀಕರು ಕೂಡ ಕನ್ಸರ್ನ್ ತೋರಿಸಬೇಕಿತ್ತು ಎಂದು ಹೇಳಿದ್ದಾರೆ.
ಆರ್ ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿತ್ತು. ಸೋಸಲೆ ಅವರು ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದಾಗ ಏರ್ಪೋರ್ಟಿನಿಂದಲೇ ಬಂಧಿಸಿ ಕರೆದೊಯ್ಯಲಾಗಿತ್ತು. ನಿಖಿಲ್ ಸೋಸಲೆ ಆರ್ ಸಿಬಿ ಆಟಗಾರರು ಮತ್ತು ಫ್ರಾಂಚೈಸಿ ಕಂಪನಿಯ ನಡುವೆ ಕೊಂಡಿಯಂತಿದ್ದ ಪ್ರಮುಖ ವ್ಯಕ್ತಿಯಾಗಿದ್ದು ತಂಡದ ಪ್ರೊಮೋಶನ್, ಸೋಶಿಯಲ್ ಮೀಡಿಯಾ ಹ್ಯಾಂಡಲಿಂಗ್ ಅನ್ನು ತಾನೇ ನೋಡಿಕೊಂಡಿದ್ದರು.
The suspension of former Bengaluru Police Commissioner B Dayananda and the arrest of four people in connection with the Chinnaswamy stadium stampede have sent the wrong message and "demoralised" the entire state's police top brass, Aarin Capital Chairman Mohandas Pai said on Friday.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am