ಗ್ರಾಪಂ ಚುನಾವಣೆ ಸೋಲಿನ ಭೀತಿಯಲ್ಲಿ ಅಭ್ಯರ್ಥಿ ಆತ್ಮಹತ್ಯೆ ?

22-12-20 05:05 pm       Headline Karnataka News Network   ಕರ್ನಾಟಕ

ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬ ಸೋಲಿನ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ, ಡಿ.22: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದ್ದು, ಈ ನಡುವೆ ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬ ಸೋಲಿನ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಇಲ್ಲಿನ ಗರಗ ಗ್ರಾಮ ಪಂಚಾಯಿತಿಯ ಎರಡನೇ ವಾರ್ಡಿನಲ್ಲಿ ಸ್ಪರ್ಧಿಸಿದ್ದ ದಾಮೋದರ ಕೃಷ್ಣಪ್ಪ ಎಲಿಗಾರ ಆತ್ಮಹತ್ಯೆ ಮಾಡಿಕೊಂಡವರು. ವಿಶಾಲ ಕೋ ಆಪರೇಟಿವ್ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿದ್ದ ದಾಮೋದರ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಇಂದು ಬೆಳಗ್ಗೆ ಮತದಾನ ಆರಂಭವಾದ ಸಂದರ್ಭದಲ್ಲಿ ಮತಗಟ್ಟೆ ಕೇಂದ್ರಕ್ಕೆ ಬಂದಿದ್ದ ದಾಮೋದರ, ಬಳಿಕ ಮನೆಗೆ ವಾಪಸಾಗಿದ್ದರು. ಮನೆಯಲ್ಲಿ ಅಟ್ಟಕ್ಕೇರಿದ್ದ ದಾಮೋದರ ಸ್ವಲ್ಪ ಹೊತ್ತಾದರೂ ಇಳಿದಿರಲಿಲ್ಲ. ಹೀಗಾಗಿ ಮನೆಮಂದಿ ಅಟ್ಟಕ್ಕೆ ಹತ್ತಿ ನೋಡಿದಾಗ ನೇಣುಬಿಗಿದು ಸಾವಿಗೆ ಶರಣಾಗಿದ್ದು ಕಂಡುಬಂತು. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಚುನಾವಣೆ ಸೋಲಿನ ಭೀತಿಯಿಂದ ಸಾವಿಗೆ ಶರಣಾಗಿದ್ದಾರೆ ಎಂಬ ವದಂತಿ ಗ್ರಾಮದಲ್ಲಿ ಹಬ್ಬಿದೆ. 

Karnataka Gram Panchayat election 2020. Dharwad contestant commits suicide before results in fearing defeat.