ಬ್ರೇಕಿಂಗ್ ನ್ಯೂಸ್
27-06-25 10:42 pm HK News Desk ಕರ್ನಾಟಕ
ಮೈಸೂರು, ಜೂನ್ 27 : ಚಾಮರಾಜನಗರ ಜಿಲ್ಲೆಯ ಅರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಸತ್ತ ಹಸುವಿಗೆ ವಿಷವಿಕ್ಕಿದ್ದೇ ಕಾರಣ ಎಂಬುದು ದೃಢಪಟ್ಟಿದೆ. ಮೇಯಲು ಬಿಟ್ಟಿದ್ದ ದನವೊಂದನ್ನು ಹುಲಿ ದಾಳಿ ಮಾಡಿ, ಕೊಂದು ಹಾಕಿತ್ತು. ಇದರಿಂದ ಕೋಪಗೊಂಡಿದ್ದ ದನದ ಮಾಲೀಕ ಹಸುವಿನ ಕಳೇಬರಕ್ಕೆ ವಿಷ ಸುರಿದು ಬಿಟ್ಟು ಬಂದಿದ್ದ. ಆನಂತರ, ಹೆಣ್ಣು ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಅಲ್ಲಿಗೆ ಬಂದು ವಿಷ ಹಾಕಲಾಗಿದ್ದ ಹಸುವಿನ ಮಾಂಸವನ್ನು ತಿಂದು ಮೃತಪಟ್ಟಿವೆ ಎನ್ನುವುದು ಅರಣ್ಯಾಧಿಕಾರಿಗಳ ತನಿಖೆಯಲ್ಲಿ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿ ವಿಷ ಹಾಕಿದ್ದ ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಎಂಬಾತನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಆತನ ಜೊತೆಗೆ, ಇತರ ನಾಲ್ವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಚಾಮರಾಜನಗರ ಮತ್ತು ತಮಿಳುನಾಡು ಗಡಿಭಾಗದಲ್ಲಿ ದನಗಳನ್ನು ಕಾಡಿಗೆ ಮೇಯಲು ಬಿಡುವ ಪರಿಪಾಠ ಇದೆ. ಮೇಯಲು ಬಿಟ್ಟ ದನಗಳನ್ನು ಹುಲಿಗಳು ಹಿಡಿದು ತಿನ್ನುವುದು ಕೂಡ ಮಾಮೂಲಿಯಾಗಿದೆ. ಇದೇ ವೇಳೆ, ದನಗಳನ್ನು ಪ್ರತಿ ಬಾರಿ ಹುಲಿ ತಿನ್ನುತ್ತೆ ಎನ್ನುವ ಕೋಪದಲ್ಲಿ ಸ್ಥಳೀಯರು ಸೇರಿ ಸತ್ತ ದನಕ್ಕೆ ವಿಷ ಹಾಕಿ ಆಕ್ರೋಶ ತೋರಿಸಿದ್ದಾರೆ.
ಇದೇ ವೇಳೆ, ಸ್ಥಳೀಯವಾಗಿ ಅರಣ್ಯ ಇಲಾಖೆಯ ಸಿಬಂದಿ ಅರಣ್ಯದಲ್ಲಿ ಕಾವಲು ಕಾಯುತ್ತಿಲ್ಲ. ಮೂರು ತಿಂಗಳಿನಿಂದ ಗುತ್ತಿಗೆ ಕಾರ್ಮಿಕರಾಗಿ ಅರಣ್ಯ ಇಲಾಖೆ ಪರವಾಗಿ ದುಡಿಯುತ್ತಿರುವ ಮಂದಿಗೆ ಸಂಬಳ ಆಗದ ಕಾರಣ ಯಾವಾಗಲೊಮ್ಮೆ ಕಾಡಿಗೆ ಬಂದು ಅರಣ್ಯ ವೀಕ್ಷಿಸುವುದನ್ನು ಮಾಡುತ್ತಿದ್ದಾರೆ. ಇದೇ ಕಾರಣದಿಂದ ವನ್ಯಪ್ರಾಣಿಗಳ ಮತ್ತು ಸ್ಥಳೀಯ ಜನರ ನಡುವೆ ಸಂಘರ್ಷ ಏರ್ಪಟ್ಟಿದ್ದರೂ ಅಧಿಕಾರಿಗಳು ಸುಮ್ಮನಿದ್ದರು. ಅರಣ್ಯ ಪಾಲಕರು ಕೂಡ ಗೊಡವೆಗೆ ಹೋಗಿರಲಿಲ್ಲ. ಇದರ ಪರಿಣಾಮದಿಂದಲೇ ಐದು ಹುಲಿಗಳು ಸಾವಿಗೀಡಾಗಿವೆ ಎಂಬ ಮಾತು ಕೇಳಿಬಂದಿದೆ. ಇದನ್ನು ತನಿಖೆಯ ಸಂದರ್ಭದಲ್ಲಿ ಹಿರಿಯ ಅರಣ್ಯಾಧಿಕಾರಿಗಳು ಕೂಡ ಒಪ್ಪಿಕೊಂಡಿದ್ದಾರೆ.
ಸ್ಥಳೀಯರು ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಪ್ರಾಶನ ಮಾಡಿದ್ದರಿಂದಲೇ ಹುಲಿಗಳು ಜೀವ ಬಿಟ್ಟಿವೆ ಎಂದು ಸಿಸಿಎಫ್ ಹೀರಾಲಾಲ್ ಅವರು ಹೇಳಿದ್ದಾರೆ. ಮೂರು ದಿನದ ಹಿಂದೆ ಹಸುವಿಗೆ ವಿಷ ಹಾಕಿರುವುದು ಕಂಡುಬಂದಿದೆ. 8 ರಿಂದ 9 ವರ್ಷದ ಒಂದು ಹುಲಿ ಹಾಗೂ 9 ರಿಂದ 10 ತಿಂಗಳ 4 ಮರಿಗಳು ಜೀವ ಬಿಟ್ಟಿವೆ. ವೈದ್ಯರು ಹುಲಿಗಳ ಮರಣೋತ್ತರ ಪರೀಕ್ಷೆ ಮಾಡಿದ್ದು ಇದರಲ್ಲಿ ವಿಷಪ್ರಾಶನದಿಂದ ಈ ಕೃತ್ಯ ಆಗಿದೆ ಎಂದಿದ್ದಾರೆ. ವಿಷ ಯಾವುದು, ಎಷ್ಟು ಪ್ರಮಾಣದಲ್ಲಿ ಹಾಕಿದ್ದಾರೆ ಎನ್ನುವುದು ಲ್ಯಾಬ್ನಲ್ಲಿ ಪರೀಕ್ಷಿಸಿದ ಬಳಿಕ ವರದಿಯಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಸಂಬಳ ಆಗದ ಬಗ್ಗೆ ತನಿಖೆ ಮಾಡುತ್ತೇವೆ
ಮಲೆಮಹದೇಶ್ವರ ಬೆಟ್ಟ 94 ಸಾವಿರ ಹೆಕ್ಟರ್ ಅರಣ್ಯ ಪ್ರದೇಶ ಇದೆ. ನಮ್ಮಲ್ಲಿರುವ ಸಿಬ್ಬಂದಿ ಪ್ರತಿನಿತ್ಯ 15 ರಿಂದ 20 ಕಿಲೋ ಮೀಟರ್ ದೂರ ಎಲ್ಲ ಕಡೆ ಕಣ್ಣು ಹಾಯಿಸುತ್ತಾರೆ. ಮೂರು ತಿಂಗಳಿನಿಂದ ಗುತ್ತಿಗೆಯಲ್ಲಿರುವ ಅರಣ್ಯ ಪಾಲಕ ಸಿಬ್ಬಂದಿ ಸಂಬಳ ಆಗಿರಲಿಲ್ಲ. ಈ ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನ ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ ಎಂದಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತ್ರ ಈ ಬಗ್ಗೆ ಯಾವುದೇ ಮಾತು ಆಡಿಲ್ಲ. ವಿಷ ಹಾಕಿದವರನ್ನು ನಾವು ಸುಮ್ಮನೆ ಬಿಡೋದಿಲ್ಲ. ಯಾರು ತಪ್ಪು ಮಾಡಿದ್ದಾರೋ, ಅರಣ್ಯಾಧಿಕಾರಿಗಳು ಆಗಿದ್ದರೂ ಶಿಕ್ಷೆ ಕೊಡಿಸುತ್ತೇವೆ ಎಂದಿದ್ದಾರೆ.
The tragic death of five tigers in the forests of Chamarajanagar district has been confirmed to be the result of poisoning. Investigations by forest officials revealed that locals, angered by a tiger attack on their cattle, had laced a cow carcass with poison, leading to the death of an adult tigress and her four cubs.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm