ಬ್ರೇಕಿಂಗ್ ನ್ಯೂಸ್
30-06-25 01:44 pm HK News Desk ಕರ್ನಾಟಕ
ಬೆಳಗಾವಿ, ಜೂನ್ 30 : ಅಕ್ರಮ ಗೋಸಾಗಣೆ ಮಾಡುತ್ತಿದ್ದಾರೆಂದು ಅಡ್ಡಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಕೂಡಿಹಾಕಿ ದಲ್ಲಾಳಿಗಳು ಮತ್ತು ಗ್ರಾಮಸ್ಥರು ಅವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗೋ ಶಾಲೆಯಿಂದ ಗೋವುಗಳನ್ನು ತೆಗೆದುಕೊಂಡು ಹೋಗಿದ್ದನ್ನು ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕೆ ದಲ್ಲಾಳಿಗಳು ಸೇರಿ ಅವರನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಹುಕ್ಕೇರಿ ತಾಲ್ಲೂಕಿನಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ಕಾರ್ಯಕರ್ತರು ತಡೆದು ರಕ್ಷಿಸಿದ್ದರು ಎನ್ನಲಾಗಿದೆ. ಬಳಿಕ ಹಸುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದರು. ಆದರೆ ಹಸುಗಳನ್ನು ಸಾಗಿಸುತ್ತಿದ್ದ ಚಾಲಕ ಆರೋಪ ನಿರಾಕರಿಸಿದ್ದು ಹಸುಗಳನ್ನು ಹೈನುಗಾರಿಕೆ ಉದ್ದೇಶಕ್ಕಾಗಿ ಒಯ್ಯಲಾಗುತ್ತಿತ್ತು ಎಂದು ಹೇಳಿಕೊಂಡಿದ್ದ. ಶ್ರೀರಾಮ ಸೇನೆ ಕಾರ್ಯಕರ್ತರೇ ಸುಳ್ಳು ಆರೋಪ ಮಾಡಿ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದ. ಹಸುಗಳನ್ನು ನಂತರ ಇಂಗಳಿ ಗ್ರಾಮದ ಆಶ್ರಯ ಧಾಮಕ್ಕೆ ಕಳುಹಿಸಲಾಗಿತ್ತು
ಈ ನಡುವೆ, ಬಾಪುಸಾ ಮುಲ್ತಾನಿ ಎಂಬ ವ್ಯಕ್ತಿ ಏಕಾಏಕಿ ಆಶ್ರಯ ಧಾಮಕ್ಕೆ ಬಂದು ಪೊಲೀಸರು ಹಿಡಿದಿಟ್ಟ ಗೋವುಗಳನ್ನು ಬಿಡುಗಡೆ ಮಾಡಿಸಿ ತೆರಳಿದ್ದಾನೆ. ಇದರಿಂದ ಬೇಸತ್ತ ಹಿಂದು ಸಂಘಟನೆ ಕಾರ್ಯಕರ್ತರು ಮುಲ್ತಾನಿ ಮನೆಗೆ ತೆರಳಿ ಆಕ್ಷೇಪಿದ್ದಾರೆ. ಮನೆ ಆವರಣದಲ್ಲಿ ಹಸುಗಳನ್ನು ಸಾಗಿಸಿರುವ ಬಗ್ಗೆ ಗಲಾಟೆ ಮಾಡಿದ್ದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿದ್ದು, ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡ ಗ್ರಾಮಸ್ಥರು ಹಿಂದೂ ಪರ ಕಾರ್ಯಕರ್ತರನ್ನು ಬಂಧಿಸಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ.
ಮರಕ್ಕೆ ಕಟ್ಟಿ ಹಲ್ಲೆ, ವಿಡಿಯೋ ವೈರಲ್
ಉದ್ರಿಕ್ತ ಸ್ಥಳೀಯರ ಗುಂಪು ಹಿಂದೂ ಪರ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಿದ್ದಾರೆ. ಅಲ್ಲದೆ, ಕೋಲು, ದೊಣ್ಣೆಗಳಿಂದ ಹೊಡೆದು ಹಿಂಸೆ ನೀಡಿದ್ದಾರೆ. ಇದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಜಾಲತಾಣದಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತ ಯಮಕನಮರಡಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಠ್ಠಲ್ ಗಡ್ಡಿ, 'ಕರ್ನಾಟಕದಲ್ಲಿರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಇದು ಖಾನ್ ಗ್ರೇಸ್ ಸರ್ಕಾರ. ಪೊಲೀಸರಿಗೆ ದೂರು ಕೊಡಲು ಹೋದರೆ ರೇಪ್ ಮಾಡಿದ್ದೀರಿ ಎಂದು ಧಮಕಿ ಹಾಕಿದ್ದಾರೆ. ಕಾನೂನು ರೀತಿಯಲ್ಲಿ ಥಳಿಸಿದವರಿಗೆ ಶಿಕ್ಷೆಯಾಗಬೇಕು. ಸರಿಯಾಗಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, ಹೊಡೆತ ತಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆಯೂ ಯಮಕನಮರಡಿ ಪೊಲೀಸರು ಎಫ್ ಐ ಅರ್ ದಾಖಲಿಸಿದ್ದಾರೆ. ಬಿಎನ್ಎಸ್ ಕಾಯ್ದೆ 189(2), 192(2), 115(2), 352(2), 126(2) 190 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಹಾವೀರ ಸೊಲ್ಲಾಪುರೆ ಎಂಬವರ ದೂರಿನಂತೆ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಎಫ್ ಐ ಆರ್ ನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪ ಹೊರಿಸಲಾಗಿದೆ.
ಇತ್ತ ಹಲ್ಲೆ ಮಾಡಿದವರ ಮೇಲೆ ಯಮಕನಮರಡಿ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿದ್ದು ಬಿಎನ್ಎಸ್ 102/2025 ಕಲಂ 126(2), 127(2), 115(2), 118(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿವಪುತ್ರ ಸನದಿ, ಬಾಬುಸಾಬ್ ಮುಲ್ತಾನಿ ಮತ್ತು ಇಂಗಳಿ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿದೆ. ಎರಡೂ ಕಡೆ ದೂರುಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
In Karnataka's Belagavi, villagers brutally beat up Hindutva men for stopping transportation of cows and extorting money from cattle traders. Hindutva men had barged into house of a cattle trader and created ruckus for transporting cows in Belagavi district on Saturday. pic.twitter.com/2v2QoOuqLx
— Waquar Hasan (@WaqarHasan1231) June 29, 2025
In a shocking incident in Ingali village of Hukkeri taluk, Belagavi district, a group of villagers and alleged cattle traders tied Sri Rama Sene activists to a tree and assaulted them, accusing them of interfering in cow transportation. A video of the incident has gone viral on social media, prompting swift police action.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm