ಬ್ರೇಕಿಂಗ್ ನ್ಯೂಸ್
17-07-25 01:26 pm Mangalore Correspondent ಕರಾವಳಿ
ಮಂಗಳೂರು, ಜುಲೈ 15 : ಮಂಗಳೂರಿನ ವಿಸ್ಡಮ್ ಎಜುಕೇಶನ್ ಫೌಂಡೇಶನ್ ವತಿಯಿಂದ ಗುರುವಂದನಾ ಕಾರ್ಯಕ್ರಮದ ಪ್ರಯುಕ್ತ 37 ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಮಾಜದ ನಡುವೆ ಎಲೆಮರೆಯ ಕಾಯಿಗಳಂತೆ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಒಂದೇ ಕಡೆ ಸೇರಿಸಿ ಗುರುವಂದನೆಯ ರೂಪದಲ್ಲಿ ಗೌರವಿಸಲಾಯಿತು.
ವಿಸ್ಡಮ್ ಎಜುಕೇಶನ್ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಫ್ರಾನ್ಸಿಸ್ಕ ತೇಜ್ ಮತ್ತು ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಗುರುತೇಜ್ ಅವರು ಒಟ್ಟು ಕಾರ್ಯಕ್ರಮವನ್ನು ರೂಪಿಸಿದ್ದು, ಗುರುಗಳನ್ನು ನಮಿಸುವುದಕ್ಕಾಗಿ ಶಾಲೆ, ಕಾಲೇಜು, ಪೊಲೀಸ್, ಸಾಮಾಜಿಕ, ಶೈಕ್ಷಣಿಕ, ಭಾಷೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಂಗಳೂರು ಸಿಸಿಆರ್ ಬಿ ಎಸಿಪಿ ಗೀತಾ ಕುಲಕರ್ಣಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಸಿಓಓ ಮೈತ್ರೇಯ, ದಿಶಾ ರಿಹಾಬಿಲಿಟೇಶನ್ ಸೆಂಟರ್ ಸ್ಥಾಪಕಿ ಡಾ.ರುಕ್ಸಾನಾ ಹಸನ್, ಸ್ವಸ್ತಿಕಾ ನೇಶನಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ಡಾ.ರಾಘವೇಂದ್ರ ಹೊಳ್ಳ ಮುಖ್ಯ ಅತಿಥಿಗಳಾಗಿದ್ದರು.
ಐದು ವಿಭಾಗದಲ್ಲಿ ಸಾಧಕರನ್ನು ಗುರುತಿಸಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವಮಾನ ಸಾಧಕರ ಸಾಲಿನಲ್ಲಿ ಕನ್ನಡ ಮತ್ತು ಹಿಂದಿ ಸಾಹಿತ್ಯದಲ್ಲಿ ಸಾಧನೆ ಮಾಡಿರುವ ಡಾ.ಕೆಎಸ್ ಎನ್ ಉಡುಪ, ಸೈಂಟ್ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ.ಆಲ್ವಿನ್ ವಿನ್ಸೆಂಟ್ ಡೇಸಾ, 8 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸಂಸ್ಕೃತ ಕಲಿಸುತ್ತಿರುವ ಟಿವಿ ನರಸಿಂಹ ಮೂರ್ತಿ, ಆದಿಚುಂಚನಗಿರಿ ವಿವಿಯ ಡೀನ್ ಡಾ.ಎಟಿ ಶಿವರಾಮು, ಫೀಲ್ಡ್ ಮಾರ್ಷಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ.ಬಿ.ರಾಘವ, ಜಗತ್ತಿನ ಮೊದಲ ಕೈಬರಹದ ಮ್ಯೂಸಿಯಂ ಮಾಡಿರುವ ಕೆ.ಸಿ.ಜನಾರ್ದನ್ ಅವರನ್ನು ಗುರುತಿಸಿ ಜೀವಮಾನ ಸಾಧನೆಗಾಗಿ ಗೌರವಿಸಲಾಯಿತು.
ಅತ್ಯುತ್ತಮ ಆಡಳಿತಾಧಿಕಾರಿ ಪ್ರಶಸ್ತಿಯನ್ನು ಕೆಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ಮಂಗಳೂರು, ಸೆಕ್ರಟರಿ ಮತ್ತು ಮ್ಯೂಸಿಕ್, ನೈತಿಕ ಮೌಲ್ಯಗಳ ತರಬೇತುಗಾರ ಫಾದರ್ ಪ್ರವೀಣ್ ಲಿಯೋ ಲಸ್ರಾಡೋ, ಕೆಥೋಲಿಕ್ ಎಜುಕೇಶನಲ್ ಸೊಸೈಟಿ ಆಫ್ ಉಡುಪಿ ಇದರ ಸೆಕ್ರಟರಿ ಫಾ.ವಿನ್ಸೆಂಟ್ ರಾಬರ್ಟ್ ಕ್ರಾಸ್ತಾ, ಆದಿಚುಂಚನಗಿರಿ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ, ಹಾಸನದ ಟೈಮ್ಸ್ ಗುರುಕುಲ ಸಿಬಿಎಸ್ಇ ಸ್ಕೂಲ್ ಇದರ ಸ್ಥಾಪಕ ಎ.ಬಿ ಸುರೇಂದ್ರ ಕುಮಾರ್, ಗಣಿತ ಅಧ್ಯಾಪಕ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಅಶ್ವಥ್ ಎಸ್.ಎಲ್, ಬಿಜಿಎಸ್ ಮಾಡೆಲ್ ಸ್ಕೂಲಿನ ಪ್ರಿನ್ಸಿಪಾಲ್ ಡಾ.ವಿ.ಪುಟ್ಟಸ್ವಾಮಿ, ಕುಕ್ಕೆ ಸುಬ್ರಹ್ಮಣ್ಯ ಕಾಲೇಜು ಪ್ರಿನ್ಸಿಪಾಲ್ ಡಾ.ದಿನೇಶ ಪಿಟಿ, ಮೈಸೂರಿನ ಡಿ ಪೌಲ್ ಕಾಲೇಜಿನ ಆಡಳಿತಾಧಿಕಾರಿ ರಿಚರ್ಡ್ ರೂಬನ್, ಕುವೆಂಪು ವಿವಿಯ ಪ್ರಾಧ್ಯಾಪಕ ಡಾ.ಬಿ.ಎಚ್ ಸತ್ಯನಾರಾಯಣ ಇವರನ್ನು ಗೌರವಿಸಲಾಯಿತು.
ಸಮಾಜಕ್ಕೆ ಮಾದರಿ ವ್ಯಕ್ತಿತ್ವದ ಪ್ರಶಸ್ತಿಯನ್ನು ಪೊಲೀಸ್ ಇನ್ಸ್ ಪೆಕ್ಟರ್ ಅದಿವೇಶ್ ಗುಡಿಕೊಪ್ಪ, ಲ್ಯೂಗಿನಾ ಮಿರಾಂಡ, ಪತ್ರಕರ್ತ ಎಂ.ಸಿ ಕುಮಾರ್ ಹಳೆಬೀಡು, ಬಾಣಾವರ ಕಾಲೇಜಿನ ಡಾ.ದೊರೇಶ, ನಾಟಕಕಾರ ಡಾ.ಸಾಸಿವೆಹಳ್ಳಿ ಸತೀಶ, ಉದ್ಯಮಿ ಜೋಚಿಂ ಪಿರೇರಾ, ಡಾ.ಚೇತನ್ ಬಾಲಾಜಿ, ಸಫ್ವಾನ್ ಅಹ್ಮದ್ ಅವರಿಗೆ ನೀಡಿ ಗೌರವಿಸಲಾಯಿತು. ಮಹಿಳಾ ಸಾಧಕಿ ಪ್ರಶಸ್ತಿಯನ್ನು ಉದ್ಯಮಿ ಡಾ.ಬಿ.ವಿ ಲಕ್ಷ್ಮೀದೇವಿ ಗೋಪಿನಾಥ್, ಮೈಸೂರಿನ ಪ್ರೊಫೆಸರ್ ವಿನಂತಿ ಎಸ್., ವಿವೇಕಾನಂದ ಕಾಲೇಜಿನ ಡಾ.ರವಿಕಾ, ಕಲಾ ಶಿಕ್ಷಕಿ ಲಲಿತಮ್ಮ ಎಂ.ಪಿ, ಸಂತ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಡಾ.ಜೀನಾ ಫ್ಲಾವಿಯಾ ಡಿಸೋಜ, ಯೋನಪೋಯ ವಿವಿಯ ಡಾ.ರೀನಾ ಜಾರ್ಜ್, ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ.ವಹೀದಾ ಬಾನು ಅವರನ್ನು ಗುರುತಿಸಿ ಗೌರವಿಸಿದರು.
ಡೈನಾಮಿಕ್ ಪರ್ಸನಾಲಿಟಿ ವಿಭಾಗದಲ್ಲಿ ಡಾ.ಕೃಷ್ಣಮೂರ್ತಿ, ಪ್ರಸಾದ್ ಎಚ್.ಬಿ, ಡಾ.ರಾಘವೇಂದ್ರ ಎಂ.ಪಿ, ಗ್ಲಾಡಿಸ್ ಲಸ್ರಾಡೋ, ಪ್ರವೀಣ್ ಕುಮಾರ್ ವೈಜಿ, ಸೆಲ್ಮಾ ಎಲಿಜಬೆತ್ ಮಾಲತಿ ಡಿಸೋಜ, ಕೃಷ್ಣರಾಜ್ ಎಂ.ವಿ ಅವರನ್ನು ಗುರುತಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವಿಸ್ಡಮ್ ತಂಡದಿಂದ ಮಾಡಲ್ಪಟ್ಟ InternX ಹೆಸರಿನ ವೆಬ್ ಸೈಟ್ ಅನಾವರಣ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಈ ವೆಬ್ ಸೈಟ್ ಮೂಲಕ ವಿವಿಧ ಕಂಪನಿಗಳ ಸಂಪರ್ಕ ಮತ್ತು ಇಂಟರ್ನ್ ಶಿಪ್ ಪಡೆಯುವ ಅವಕಾಶಗಳಿದ್ದು, ಈ ಸೈಟನ್ನು ವಿಸ್ಡಂ ತಂಡದ ಅಭಿ ರೇಗೊ ಅಭಿವೃದ್ಧಿ ಪಡಿಸಿದ್ದಾರೆ.
The Wisdom Education Foundation, Mangaluru, organized a grand ‘Guruvandana’ ceremony to honor 37 distinguished individuals from diverse fields who have rendered selfless service to society. These unsung heroes, often working behind the scenes like the “leaves behind the branches,” were brought together and celebrated in a spirit of gratitude and recognition.
18-07-25 10:59 pm
Bangalore Correspondent
ರಾಜ್ಯದಲ್ಲಿ ಪರಮಾಣು ಸ್ಥಾವರಕ್ಕೆ ಒಪ್ಪಿಗೆ ; ಮತ್ತೆ...
18-07-25 10:31 pm
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
19-07-25 12:26 pm
Mangalore Correspondent
Thokottu, Mangalore: ತೊಕ್ಕೊಟ್ಟು ನಾಗರಿಕರ ಎಪ್ಪತ...
18-07-25 10:11 pm
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm