ಬ್ರೇಕಿಂಗ್ ನ್ಯೂಸ್
21-07-25 10:38 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 21 : ಧರ್ಮಸ್ಥಳ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ SIT ವಹಿಸಿರುವುದನ್ನು ಸ್ವಾಗತಿಸಿರುವ ರಾಜ್ಯ ಬಿಜೆಪಿ ನಾಯಕರು, ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಇರಬಾರದು ಮತ್ತು ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳಕ್ಕೆ ಅಪಚಾರ ಮಾಡುವುದು ತಪ್ಪು ;
ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಅನಾಮಧೇಯ ವ್ಯಕ್ತಿ ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಈ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾದ ತನಿಖೆಯಾಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
'ಯಾರೋ ಒಬ್ಬನಿಗೆ 20 ವರ್ಷಗಳ ಬಳಿಕ ಜ್ಞಾನೋದಯವಾಗಿದ್ದು ಹೇಗೆ?':
ನೂರಾರು ಶವಗಳು ಸಿಕ್ಕಿದೆ ಎಂದರೆ, ಅವರ ಕುಟುಂಬದವರು ದೂರು ದಾಖಲಿಸುತ್ತಾರೆ. ಅಂತಹ ಪ್ರಕರಣ ಎಷ್ಟಿದೆ ಎಂದು ಸರ್ಕಾರ ತಿಳಿಸಬೇಕು. ದೇವಾಲಯ ಮಾತ್ರವಲ್ಲದೇ ಚರ್ಚ್, ಮಸೀದಿ ಮೊದಲಾದ ಧಾರ್ಮಿಕ ಕೇಂದ್ರಗಳ ಬಳಿ ಅನೇಕರು ಸಾಯುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ತನಿಖೆ ಮಾಡುತ್ತಾರೆ. ಯಾರೋ ಒಬ್ಬರಿಗೆ 20 ವರ್ಷಗಳ ಬಳಿಕ ಜ್ಞಾನೋದಯವಾಗಿದ್ದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ ಎಂದು ಕೇಳಿದರು.
ದಕ್ಷಿಣ ಭಾರತದಲ್ಲಿ ತಿರುಪತಿ ಹಾಗೂ ಧರ್ಮಸ್ಥಳ ಕೋಟ್ಯಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿದೆ. ಒಂದು ಧರ್ಮಕ್ಕೆ ಅಪಮಾನ ಮಾಡಲು ವಿವಾದ ಮಾಡುವುದು ಸರಿಯಲ್ಲ. ಇದರಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ವಿಚಾರವೇ ಬರುವುದಿಲ್ಲ. ಆದರೂ ಪದೇ ಪದೇ ಧಾರ್ಮಿಕ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಪ್ಪು ಮಾಡಿದ ವ್ಯಕ್ತಿಯ ಬಗ್ಗೆ ಆರೋಪ ಮಾಡಲಿ. ಆದರೆ ಇಡೀ ಧಾರ್ಮಿಕ ಸಂಸ್ಥೆಯನ್ನು ಗುರಿ ಮಾಡಿ ಮಾತಾಡುವುದು ಸರಿಯಲ್ಲ. ಎಸ್ಐಟಿ ತಂಡಕ್ಕೆ ಸರ್ಕಾರ ಬೇರಾವುದೇ ಜವಾಬ್ದಾರಿ ವಹಿಸಬಾರದು. ಈ ತಂಡದ ಪೊಲೀಸರು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದರು.
ಸರ್ಕಾರ ತಡವಾಗಿ ಎಸ್ಐಟಿಗೆ ನೀಡಿದೆ-ವಿಜಯೇಂದ್ರ:
ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ತಡವಾಗಿ ಕೊಟ್ಟಿದೆ. ಈ ತನಿಖೆಯಲ್ಲಿ ಯಾವ ಹಸ್ತಕ್ಷೇಪ ಇರಬಾರದು, ಸತ್ಯಾಸತ್ಯತೆ ಬಹಿರಂಗವಾಗಬೇಕೆಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ದಾವಣಗೆರೆಯಲ್ಲಿ ಹೇಳಿದರು.
ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು ಎಂದ ಬೊಮ್ಮಾಯಿ:
ಬೆಂಗಳೂರಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ. ಕಾಲಮಿತಿಯಲ್ಲಿ ಕಾನೂನುಬದ್ದವಾಗಿ ತನಿಖೆಯಾಗಬೇಕು. ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು. ದೂರು ಕೊಟ್ಟವರಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಹೇಳಬೇಕು. ಅಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಪುರಾತನ ಹಾಗೂ ನಂಬಿಕೆಗೆ ಹೆಸರಾಗಿರುವ ದೇವಸ್ಥಾನ. ಆ ದೇವಸ್ಥಾನದ ಮೇಲಿನ ಜನರ ನಂಬಿಕೆ ಕೆಡಿಸುವ ಕೆಲಸ ಮಾಡಬಾರದು ಎಂದು ಹೇಳಿದರು.
ಎಸ್ಐಟಿ ತನಿಖೆ ಅನಗತ್ಯ-ಜನಾರ್ದನ ರೆಡ್ಡಿ:
ಬಹಳ ವರ್ಷಗಳ ನಂತರ ಅನಗತ್ಯವಾಗಿ ಈ ವಿಚಾರವನ್ನು ಹೊರಕ್ಕೆಳೆಯುವ ಕೆಲಸವನ್ನು ಯಾರು ಮಾಡ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣವನ್ನು ವಿಶೇಷ ತನಿಖಾ ತಂಡ ಎಸ್ಐಟಿಗೆ ನೀಡುವ ಅಗತ್ಯ ಇರಲಿಲ್ಲ. ಇದಕ್ಕೆ ಧರ್ಮಸ್ಥಳದ ಮಂಜುನಾಥನೇ ಸೂಕ್ತ ಶಾಸ್ತಿ ಮಾಡಲಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
The Karnataka BJP leadership has welcomed the state government's decision to hand over the controversial Dharmasthala case to a Special Investigation Team (SIT), while simultaneously raising serious concerns about the timing and motives behind reopening the issue after nearly two decades.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm