ಬ್ರೇಕಿಂಗ್ ನ್ಯೂಸ್
24-07-25 05:01 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 24 : ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆ ಜಿಎಸ್ಟಿ ಬಾಕಿ ಪಾವತಿಗಾಗಿ ನೀಡಿದ್ದ ನೋಟಿಸ್ನಿಂದ ಆತಂಕಗೊಂಡಿದ್ದ ಸಣ್ಣ ವ್ಯಾಪಾರಸ್ಥರ ಮನವಿಗೆ ಸ್ಪಂದಿಸಿರುವ ರಾಜ್ಯ ಸರಕಾರ, ನೋಟಿಸ್ ಹಿಂಪಡೆಯುವ ಜತೆಗೆ ಯುಪಿಐ ಮೂಲಕ ನಡೆದ ವಹಿವಾಟು ಆಧರಿಸಿ ವಿಧಿಸಲಾಗಿದ್ದ ತೆರಿಗೆ ಬಾಕಿ ಮನ್ನಾ ಮಾಡುವ ಮಹತ್ವದ ತೀರ್ಮಾನ ತೀರ್ಮಾನ ತೆಗೆದುಕೊಂಡಿದೆ.
ಆದರೆ ವಾರ್ಷಿಕ 40 ಲಕ್ಷ ರೂ. ಮೀರಿದ ಸರಕು ವಹಿವಾಟು ಹಾಗೂ ವಾರ್ಷಿಕ 20 ಲಕ್ಷ ರೂ. ಮೀರಿದ ಸೇವೆಗಳ ವಹಿವಾಟಿಗೆ ಜಿಎಸ್ಟಿಯಡಿ ಕಡ್ಡಾಯ ನೋಂದಣಿ ಷರತ್ತಿನೊಂದಿಗೆ ಬಾಕಿ ತೆರಿಗೆ ಮನ್ನಾಗೆ ನಿರ್ಧರಿಸಿದೆ. ಸರಕಾರದ ಮನವಿ ಹಿನ್ನೆಲೆಯಲ್ಲಿ ಜು.25ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಣ್ಣ ವ್ಯಾಪಾರಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಪಡೆಯಲು ಒಪ್ಪಿದ್ದಾರೆ. ಈ ಮೂಲಕ 2-3 ವರ್ಷಗಳ ತೆರಿಗೆ ಬಾಕಿ ಪಾವತಿಗಾಗಿ ಸುಮಾರು 18,000 ನೋಟಿಸ್ ಪಡೆದಿದ್ದ 9000 ವ್ಯಾಪಾರಿಗಳು ಬಹುತೇಕ ನಿರಾಳರಾಗಿದ್ದಾರೆ.
ವಾರ್ಷಿಕ ಯುಪಿಐ ವಹಿವಾಟು ಪ್ರಮಾಣ ಆಧರಿಸಿ ವಾಣಿಜ್ಯ ತೆರಿಗೆಗಳ ಇಲಾಖೆ ತೆರಿಗೆ ಬಾಕಿ ಪಾವತಿಗಾಗಿ ಇತ್ತೀಚೆಗೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಕ್ಕೆ ತೀವ್ರ ವಿರೋಧ ಕೇಳಿಬಂದಿತ್ತು. ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು, ತೆರಿಗೆ ವಿನಾಯಿತಿ ವ್ಯಾಪ್ತಿಯಲ್ಲಿರುವ ಸರಕು ಸೇವೆ ವಹಿವಾಟು ಪ್ರಮಾಣ ಆಧರಿಸಿ ನೋಟಿಸ್ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಣ್ಣ ವ್ಯಾಪಾರಿಗಳು ಸರಣಿ ಪ್ರತಿಭಟನೆಗೂ ಮುಂದಾಗಿದ್ದರು.
ನೋಟಿಸ್ ವಿಚಾರ ಗಂಭೀರ ಸ್ವರೂಪ ಪಡೆಯುತ್ತಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಣ್ಣಪುಟ್ಟ ವ್ಯಾಪಾರ- ವಾಣಿಜ್ಯೋದ್ಯಮ, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಪ್ರಮುಖರೊಂದಿಗೆ ಬುಧವಾರ ಸಭೆ ನಡೆಸಿ ಗೊಂದಲ ನಿವಾರಿಸಿ ವಿವಾದ ಇತ್ಯರ್ಥಗೊಳಿಸಲು ನಡೆಸಿದ ಪ್ರಯತ್ನ ಫಲ ನೀಡಿದೆ. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, 'ಸಣ್ಣ ವ್ಯಾಪಾರಿಗಳು, ವ್ಯಾಪಾರ-ವಾಣಿಜ್ಯೋದ್ಯಮ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಹವಾಲು ಆಲಿಸಲಾಗಿದೆ. ವಾರ್ಷಿಕ 40 ಲಕ್ಷ ರೂ. ಮೀರಿದ ಸರಕು ವಹಿವಾಟುದಾರರಿಗೆ ಇಲಾಖೆ ನೋಟಿಸ್ ನೀಡಿದೆ. ಜತೆಗೆ ಸಣ್ಣ ವ್ಯಾಪಾರಿಗಳಷ್ಟೇ ಅಲ್ಲದೇ ಬೇರೆವಯರಿಗೂ ನೋಟಿಸ್ ನೀಡಿ 3 ವರ್ಷದ ತೆರಿಗೆ ಬಾಕಿ ಪಾವತಿಗೆ ಸೂಚಿಸಿದೆ. ಸುಮಾರು 9000 ವ್ಯಾಪಾರಿಗಳಿಗೆ 18000 ನೋಟಿಸ್ ನೀಡಲಾಗಿದೆ. ಆದರೆ ವಿನಾಯಿತಿ ಇರುವ ಸರಕು-ಸೇವೆಗಳಿಂದ ತೆರಿಗೆ ಸಂಗ್ರಹಕ್ಕೆ ನೋಟಿಸ್ ನೀಡಿದ್ದರೂ ವಸೂಲು ಮಾಡುವುದಿಲ್ಲ ಎಂದು ತಿಳಿಸಿದರು.
ಯುಪಿಐ ವಹಿವಾಟು ಆಧರಿಸಿ 2-3 ವರ್ಷಗಳ ಬಾಕಿ ತೆರಿಗೆ ಪಾವತಿಗೆ ನೋಟಿಸ್ ನೀಡಿದ್ದರೂ ಬಾಕಿ ತೆರಿಗೆ ವಸೂಲಿ ಮಾಡದೆ ಮನ್ನಾ ಮಾಡಲಾಗುವುದು. ಆದರೆ ವಾರ್ಷಿಕ ವಹಿವಾಟು ಮೀರಿದವರು ಕಡ್ಡಾಯವಾಗಿ ಜಿಎಸ್ಟಿಯಡಿ ನೋಂದಣಿಗೆ ಸೂಚಿಸಿದ್ದು, ಅದಕ್ಕೆ ಎಲ್ಲ ವ್ಯಾಪಾರಿಗಳು ಒಪ್ಪಿದ್ದಾರೆ ಎಂದು ಹೇಳಿದರು. ಇದಲ್ಲದೆ, ಜು.25ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಹಿಂಪಡೆಯಲು ವ್ಯಾಪಾರಿಗಳು ಒಪ್ಪಿದ್ದಾರೆ. ಈ ವಿಚಾರವಾಗಿ ನಡೆಸಲು ಚಿಂತಿಸಿದ್ದ ಎಲ್ಲ ಹೋರಾಟ ಕೈಬಿಡುವುದಾಗಿ ಹೇಳಿದ್ದಾರೆ ಎಂದರು.
ವ್ಯಾಪಾರ- ವಾಣಿಜ್ಯೋದ್ಯಮಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ವಿನಾಯಿತಿ ಇರುವ ಸರಕು- ಸೇವೆಗಳ ವ್ಯಾಪಾರಿಗಳು ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಯುಪಿಐ ವಹಿವಾಟು ಕೈಬಿಟ್ಟರೆ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ವ್ಯಾಪಾರ ವಹಿವಾಟುಗಳನ್ನು ಕಾನೂನುಬದ್ದವಾಗಿ ನಡೆಸಲು, ತೆರಿಗೆ ಸರಿಯಾಗಿ ಪಾವತಿಸಲು ಸರಕಾರ ಸಂಪೂರ್ಣ ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುದು ಸರಕಾರದ ಉದ್ದೇಶವಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
In a major relief to small traders across Karnataka, the state government has announced the withdrawal of GST dues notices issued recently by the Commercial Taxes Department. The move comes in response to widespread concerns raised by small businesses who were distressed over tax notices based on UPI transactions.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm