ಬ್ರೇಕಿಂಗ್ ನ್ಯೂಸ್
24-07-25 07:29 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 23 : ಕೆ-ರೈಡ್ ವಿಶೇಷ ಉಪ ಆಯುಕ್ತ, ಐಎಎಸ್ ಅಧಿಕಾರಿ ವಾಸಂತಿ ಅಮರ್ ಮನೆಯಲ್ಲಿ ಶೋಧ ನಡೆಸಿರುವ ಲೋಕಾಯುಕ್ತ ಪೊಲೀಸರು ₹9.02 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿ ಬಿಚ್ಚಿ ಬಿದ್ದಿದ್ದಾರೆ.
ವಾಸಂತಿ ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 8 ಅಧಿಕಾರಿಗಳ ಮನೆಗಳಲ್ಲಿ ಬುಧವಾರ ಶೋಧ ನಡೆಸಿ, ಒಟ್ಟು ₹37.41 ಕೋಟಿಯಷ್ಟು ಮೌಲ್ಯದ ಸಂಪತ್ತನ್ನು ಪತ್ತೆ ಮಾಡಲಾಗಿದೆ. ಎಂಟೂ ಅಧಿಕಾರಿಗಳ ಪೈಕಿ ವಾಸಂತಿ ಅವರು ಹೊಂದಿರುವ ಆಸ್ತಿಯ ಮೌಲ್ಯವೇ ಅತಿಹೆಚ್ಚು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ನಗರದ ಆರ್.ಟಿ.ನಗರದಲ್ಲಿ ವಾಸಂತಿ ವಾಸವಿರುವ ಮನೆ, ರಾಜ್ಯದ ವಿವಿಧೆಡೆ ಆಕೆಯ ಆಪ್ತರ ಮನೆಗಳು ಸೇರಿ ಒಟ್ಟು ಐದು ಕಡೆ ದಾಳಿ ನಡೆಸಲಾಗಿದೆ. ವಾಸಂತಿ ಹೆಸರಿನಲ್ಲಿ ₹7.40 ಕೋಟಿ ಮೌಲ್ಯದ 4 ಮನೆಗಳು, ಮೂರು ನಿವೇಶನಗಳು ಮತ್ತು 3 ಎಕರೆ ಕೃಷಿ ಭೂಮಿ ಹೊಂದಿರುವುದು ಪತ್ತೆಯಾಗಿದೆ.
ವಾಸಂತಿ ಮತ್ತು ಆಕೆಯ ಕುಟುಂಬದವರ ಹೆಸರಿನಲ್ಲಿ ಮೂರು ಕಾರುಗಳಿದ್ದು, ಅವುಗಳ ಈಗಿನ ಮೌಲ್ಯ ₹90 ಲಕ್ಷ. ಜತೆಗೆ ಮನೆಯಲ್ಲಿ ಒಟ್ಟು ₹12 ಲಕ್ಷ ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ.
ಬೆಂಗಳೂರು ಉತ್ತರ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಆಗಿದ್ದಾಗ ಸರ್ಕಾರಿ ಜಮೀನೊಂದನ್ನು ಅಕ್ರಮವಾಗಿ ಪರಭಾರೆ ಮಾಡಿದ ಆರೋಪದಲ್ಲಿ ವಾಸಂತಿ ವಿರುದ್ಧ ಕಂದಾಯ ಇಲಾಖೆ ನೀಡಿದ್ದ ದೂರನ್ನು ಆಧರಿಸಿ, ಜುಲೈ 16ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಶೇಕು ಚೌವ್ಹಾಣ್ ಮನೆ ಮೇಲೆ ದಾಳಿ ;
ಕೊಪ್ಪಳ ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕರಾದ ಶೇಕು ಚೌವ್ಹಾಣ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದು, ಅಧಿಕಾರಿಗಳನ್ನು ಬೆಚ್ಚಿಬೀಳುವಂತೆ ಮಾಡಿದೆ.
ಲೋಕಾಯುಕ್ತ ಇನ್ಸ್ಪೆಕ್ಟರ್ ಸುನೀಲ್ ಮೇಗಳಮನಿ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ 54 ಲಕ್ಷ ರೂ. ನಗದು, ಬ್ಯಾಂಕ್ ಖಾತೆಗಳಲ್ಲಿ 26 ಲಕ್ಷ ರೂ. ಬ್ಯಾಲೆನ್ಸ್, 750 ಗ್ರಾಂ ಬಂಗಾರ, 4 ಕೆ.ಜಿ ಬೆಳ್ಳಿ, 13 ಸೈಟ್, 7 ಎಕರೆ ಜಮೀನು ಹಾಗೂ ಕೊಪ್ಪಳ ಮತ್ತು ಹುಬ್ಬಳ್ಳಿಯಲ್ಲಿರುವ ಮನೆಗಳ ದಾಖಲೆಗಳು ಸಿಕ್ಕಿವೆ.
ಇದು ಅಷ್ಟೇ ಅಲ್ಲದೆ, ದಾಳಿಯಲ್ಲಿ ಚೌವ್ಹಾಣ್ ಅವರ ಹೆಸರಿನಲ್ಲಿ ನೊಂದಾಯಿತ ಕಾರು, ಬೈಕ್ ಸೇರಿ ಒಟ್ಟು ₹2.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಎಲ್ಲವೂ ಕಾನೂನುಬಾಹಿರವಾಗಿ ಗಳಿಸಲಾಗಿದೆ ಎಂಬ ಶಂಕೆಯ ಮೇಲೆ ತನಿಖೆ ಮುಂದುವರೆಯುತ್ತಿದೆ.
ಈ ದಾಳಿ ರಾಜ್ಯದ ಬೃಹತ್ ಮಟ್ಟದ ಭ್ರಷ್ಟಾಚಾರದ ಮತ್ತೊಂದು ಉದಾಹರಣೆ ಎಂಬಂತೆ ಹೊರಹೊಮ್ಮಿದ್ದು, ಶೇಖು ಚೌವ್ಹಾಣ್ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಿಮಿನಲ್ ಪ್ರಕರಣದ ದಾಖಲಾತಿ ಸಾಧ್ಯತೆ ಇದೆ.
In a major crackdown on corruption, the Karnataka Lokayukta conducted raids across multiple locations on Wednesday, targeting eight government officials from various departments. The most significant revelation came from the residence of IAS officer Vasanthi Amar, where unaccounted assets worth ₹9.02 crore were uncovered.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm