ಬ್ರೇಕಿಂಗ್ ನ್ಯೂಸ್
07-08-25 10:18 pm Bangalore Correspondent ಕರ್ನಾಟಕ
ಬೆಂಗಳೂರು, ಆ.7 : ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಹೆಸರು ಬರೆದಿಟ್ಟು ಕಾರು ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿನ್ನೆಲೆಯಲ್ಲಿ ಸುಧಾಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಆತ್ಮಹತ್ಯೆ ಸಂಬಂಧಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದೆ.
ಬಿಎನ್ಎಸ್ ಕಾಯ್ದೆಯಡಿ ಸೆಕ್ಷನ್ 108, 352, 351 ಹಾಗೂ ಎಸ್ಸಿ, ಎಸ್ಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಮೃತ ಬಾಬು ಡೆತ್ನೋಟ್ನಲ್ಲಿ ಉಲ್ಲೇಖಿಸಿರುವ ನಾಗೇಶ್ ಮತ್ತು ಮಂಜುನಾಥ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಬಿಜೆಪಿ ಸಂಸದ ಸುಧಾಕರ್ ಎ1 ಆಗಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಬಾಪೂಜಿ ನಗರ ನಿವಾಸಿ ಬಾಬು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಗೆ ಚಾಲಕನಾಗಿದ್ದ. ತಾನು ಕೆಲಸ ಮಾಡ್ತಿದ್ದ ಜಿಲ್ಲಾಡಳಿತ ಭವನದ ಆವರಣದಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಈತ ಆತ್ಮಹತ್ಯೆಗೆ ಶರಣಾಗಿದ್ದು ಡೆತ್ ನೋಟ್ ನಲ್ಲಿ ಮೂವರ ಹೆಸರು ಉಲ್ಲೇಖಿಸಿದ್ದಾನೆ.
ಗುತ್ತಿಗೆ ಆಧಾರದಲ್ಲಿ ಚಾಲಕನಾಗಿದ್ದ ಬಾಬು ಅವರಿಗೆ ಸರ್ಕಾರಿ ಕೆಲಸ ಕೊಡಿಸ್ತೀವಿ ಅಂತ ಮೂವರು ವಂಚಿಸಿದ್ದಾರೆಂದು ಆರೋಪ ಕೇಳಿಬಂದಿದೆ. ಡೆತ್ ನೋಟ್ ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು ನನ್ನ ಸಾವಿಗೆ ಸಂಸದ ಡಾ.ಕೆ.ಸುಧಾಕರ್, ಲೆಕ್ಕ ಪರಿಶೋಧಕ ಮಂಜುನಾಥ್, NNR ಟ್ರಾವೆಲ್ಸ್ ನ ನಾಗೇಶ್ ಈ ಮೂವರೇ ಕಾರಣ ಅಂತ ಬರೆದಿದ್ದಾನೆ. 2021ರಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 40 ಲಕ್ಷ ಡಿಮ್ಯಾಂಡ್ ಮಾಡಿ 25 ಲಕ್ಷ ಪಡೆದು ವಂಚಿಸಿದ್ದಾರೆಂದು ಪತ್ರದಲ್ಲಿ ಬರೆಯಲಾಗಿದೆ.
ಈ ಬಗ್ಗೆ ಬಾಬು ಅವರ ಪತ್ನಿ ಶಿಲ್ಪ ನೀಡಿದ ದೂರಿನ ಮೇರೆಗೆ ಹಣ ವಂಚನೆ, ಬೆದರಿಕೆ, ಮಾನಸಿಕ ಹಿಂಸೆ, ನಿಂದನೆ, ಆತ್ಮಹತ್ಯೆಗೆ ಪ್ರೇರಣೆ, ದಲಿತ ವ್ಯಕ್ತಿ ಮೇಲೆ ದೌರ್ಜನ್ಯ ಪ್ರಕರಣದಡಿ ಪ್ರಕರಣ ದಾಖಲಾಗಿದೆ. ಬಿಎನ್ಎಸ್ ಸೆಕ್ಷನ್ 108 ಆತ್ಮಹತ್ಯೆಗೆ ಪ್ರಚೋದನೆ, 351 - ಅಪರಾಧಿಕ ಭಯೋತ್ಪಾದನೆ, 352 - ಉದ್ದೇಶಪೂರ್ವಕ ಅವಮಾನ ಅಡಿ ಕೇಸ್ ದಾಖಲಾಗಿದೆ.
A Dalit man allegedly took his own life after being defrauded of ₹25 lakh under the pretense of securing a government job, with the name of Chikkaballapur MP Dr. K. Sudhakar mentioned in his suicide note. Following the incident, an FIR has been registered against the MP and two others under the SC/ST (Prevention of Atrocities) Act and relevant sections of the Bharatiya Nyaya Sanhita (BNS).
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm