ಬ್ರೇಕಿಂಗ್ ನ್ಯೂಸ್
12-08-25 07:43 pm HK News Desk ಕರ್ನಾಟಕ
ಗದಗ, ಆ.12 : ಧರ್ಮಸ್ಥಳದಲ್ಲಿ ಈಗೇನು ನಡೆಯುತ್ತಿದೆಯೋ ಅದನ್ನೆಲ್ಲಾ ಮಂಜುನಾಥ ಸ್ವಾಮಿಯೇ ಮಾಡಿಸುತ್ತಿರಬೇಕು. ಅಲ್ಲಿ ನಡೆಯುತ್ತಿರುವ ಘಟನೆ ಸತ್ಯವೋ ಸುಳ್ಳೋ ಅದು ಇಂದಲ್ಲ ನಾಳೆ ಹೊರಗೆ ಬರುತ್ತದೆ. ರಾಜಾಜ್ಞೆ ಆಗಿದೆ ಸತ್ಯ ಹೊರಬರಲು ಸಮಯಾವಕಾಶ ಬೇಕಿದೆ ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಪ್ರಸಕ್ತ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿಯುವುದರಲ್ಲಿ ಪ್ರಸಿದ್ದಿ ಹೊಂದಿರುವ ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಗದಗದಲ್ಲಿ ಮಾತನಾಡಿದ್ದಾರೆ. "ಸೀತೆಗೆ ರಾಮಾಯಣದಲ್ಲಿ ಆದಂತೆ, ಇಲ್ಲಿ ಅಪಪ್ರಚಾರ ಮೊದಲು ಬಂದಿದೆ, ಇದೇ ಪ್ರಬಲವಾಗಿದೆ. ಪ್ರಚಾರ, ವಿಚಾರ, ಸಮಾಚಾರ, ಅಪಪ್ರಚಾರ. ಅಪಪ್ರಚಾರ ಮಾಡಿದವನು ಕೊನೆಗೆ ಸತ್ತೇ ಹೋಗುತ್ತಾನೆ" ಎಂದು ಕೋಡಿಶ್ರೀಗಳು ಹೇಳಿದ್ದಾರೆ.
ಸತ್ಯ ಹೊರ ಬರುತ್ತದೆ, ಬೆಳಕು ಇದ್ದಲ್ಲಿ ಕತ್ತಲು ಇರುತ್ತದೆ, ಬೆಳಕು ಬಂದಾಗ ಕತ್ತಲು ಹೋಗುತ್ತದೆ, ನಾನು ಯಾರನ್ನೂ ದೂಷಣೆ ಮಾಡಲು ಹೋಗುವುದಿಲ್ಲ. ಒಳ್ಳೊಳ್ಳೆ ಗುಡಿಗಳ ಪೂಜೆಗಳು ನಿಲ್ಲುತ್ತಾ ಬರುತ್ತವೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ. ಎಲ್ಲಿ ನಿಧಿ ಇರುತ್ತೋ, ಅಲ್ಲಿ ವಿಧಿ ಇರುತ್ತದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.
ಊರಲ್ಲಿ ಇರುವ ಸಣ್ಣ ದೇವಸ್ಥಾನಕ್ಕೆ ಯಾರೂ ಹೋಗುವುದಿಲ್ಲ, ಪೂಜಾರಿಗೆ ಸಂಬಳ ಕೊಡಲೇ ದುಡ್ಡು ಇರುವುದಿಲ್ಲ. ದುಡ್ಡು ಬೆಳೆಯುತ್ತಿದ್ದಂತೆಯೇ, ವಿಧಿಯು ಕಾಡಿಕೊಂಡು ಬರುತ್ತದೆ. ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣ ಕಟ್ ಮಾಡುತ್ತಾನೆ. ಅಭಿಮನ್ಯುವಿನ ಹೆಂಡತಿ ರಂಗಪ್ರವೇಶ ಮಾಡುತ್ತಾಳೆ, ಮಹಾಪಾರ್ಥ, ಭೀಮಸೇನ ಗೆದ್ದ. ಮುಡಾ ಕೇಸ್ ಮುನ್ನಲೆಗೆ ಬಂತು, ಸಿಎಂ ಹೆಂಡತಿ, ಸೈಟ್ ಅನ್ನು ವಾಪಸ್ ಕೊಟ್ಟು ಬಂದರು, ಸಿದ್ದರಾಮಯ್ಯ ಗೆದ್ದರು. ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಕೇಂದ್ರ ಮತ್ತು ರಾಜ್ಯದಲ್ಲಿ ಇಂತಹ ಕೆಲಸಗಳು ನಡೆಯುತ್ತಿದೆ. ಅಲ್ಲಿ, ಉಪ ರಾಷ್ಟ್ರಪತಿ ರಾಜೀನಾಮೆ ನೀಡಿದರು. ಈ ರೀತಿಯ ಸಮಸ್ಯೆಗಳು ಮುಂದಿನ ಸಂಕ್ರಾಂತಿಯ ವರೆಗೆ ಮುಂದುವರಿಯಲಿದೆ. ಜಲ, ವಾಯು, ಅಗ್ನಿ ಸುನಾಮಿ ನಡೆಯಲಿದೆ" ಎನ್ನುವ ಮಾತನ್ನು ಕೋಡಿಶ್ರೀಗಳು ಪುನರುಚ್ಚಿಸಿದ್ದಾರೆ.
ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ. ಕರಾಳ ಭವಿಷ್ಯ ನಮ್ಮ ಮುಂದಿದೆ, ಸತ್ಯವನ್ನು ಇನ್ನಷ್ಟು ಬಿಚ್ಚಿಟ್ಟರೆ ನಮಗೆ ಸಮಸ್ಯೆ ಆಗಬಹುದು. ದ್ವೇಷ, ಅಸೂಯೆ, ಮತ್ಸರದ ಜಗತ್ತಿನಲ್ಲಿ ನಾವಿದ್ದೇವೆ. ನೀಚನಿಗೆ ದೊರೆತನವು, ಹೇಡಿಗೆ ಹಿರಿತನವು, ಮೂಢನಿಗೆ ಗುರುತನವು ಸಿಕ್ಕರೆ ದೇಶಕ್ಕೆ ಕಷ್ಟ ಎಂದು ಕೋಡಿಶ್ರೀಗಳು ನುಡಿದಿದ್ದಾರೆ.
ಹಿಂದೆಲ್ಲಾ ರಾಜಮಹಾರಾಜರು ಇದ್ದರು, ಅವರ ಪಕ್ಕದಲ್ಲಿ ಗುರುಗಳು ಕೂರುತ್ತಾ ಇದ್ದರು. ಗುರು ಜೊತೆಗಿದ್ದ, ಇದಲ್ಲದೇ ಗುರಿಯೂ ಇತ್ತು, ಹಾಗಾಗಿ ಸಮೃದ್ದವಾಗಿ ರಾಜ್ಯವನ್ನು ಆಳುತ್ತಿದ್ದರು. ಈಗಿನವರಿಗೆ ಗುರುಗಳೂ ಇಲ್ಲ, ಗುರಿಯೂ ಇಲ್ಲ ಎಂದು ರಾಜಕಾರಣಿಗಳನ್ನು ಉದ್ದೇಶಿಸಿ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ.
Commenting on the ongoing developments in Dharmasthala, Sri Shivananda Shivayogi Rajendra Swamiji of Kodimath in Arasikere, Hassan district, said that whatever is happening there must be by the will of Lord Manjunatha himself. Speaking in Gadag, the seer predicted that whether the events are true or false, the truth will come out sooner or later, adding that divine will takes its own time to reveal itself.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm