Dharmasthala Case on Social Media: ಧರ್ಮಸ್ಥಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ ಕಠಿಣ ಕ್ರಮ ಗ್ಯಾರೆಂಟಿ ; ಯೂಟ್ಯೂಬರ್ಸ್ ಗೆ ಕಡಿವಾಣ ಹಾಕ್ತಿವಿ ! 

19-08-25 10:39 am       Bangalore Correspondent   ಕರ್ನಾಟಕ

ಧರ್ಮಸ್ಥಳ ಪ್ರಕರಣ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು  ನಿಲ್ಲಿಸಿ. ಇದನ್ನು ಮುಂದುವರಿಸಿದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, ಆ 19 : ಧರ್ಮಸ್ಥಳ ಪ್ರಕರಣ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದನ್ನು  ನಿಲ್ಲಿಸಿ. ಇದನ್ನು ಮುಂದುವರಿಸಿದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

ವಿಧಾಸನಭೆಯಲ್ಲಿ ಸೋಮವಾರ ಧರ್ಮಸ್ಥಳ ಪ್ರಕರಣ ಸಂಬಂಧ ನಡೆದ ಚರ್ಚೆ ವೇಳೆ ಉತ್ತರಿಸಿದ ಅವರು, ವಿಪಕ್ಷಗಳು ಯೂಟ್ಯೂಬರ್ಸ್ ಬಗ್ಗೆ ಪ್ರಸ್ತಾಪ ಮಾಡಿದರು. ಕೆಲವರು ಸರ್ಕಾರದ ಬಗ್ಗೆ ಆರೋಪ ಮಾಡಿ ಪೋಸ್ಟ್ ಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದೇ ಹೋದರೇ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂಬ ಬಗ್ಗೆ ಅರಿವಿದೆ.‌ ನಿಮ್ಮ ಪೋಸ್ಟ್ ನಿಂದ ಲಕ್ಷಾಂತರ ಜನರಿಗೆ ಘಾಸಿಯಾಗುತ್ತದೆ. ನಿಮ್ಮ ಪೋಸ್ಟ್ ಗಳಿಗೆ ನೀವೇ ನಿಯಂತ್ರಣ ಹಾಕಿದರೆ ಉತ್ತಮ. ಇಲ್ಲವಾದರೆ ಸರ್ಕಾರವೇ ಕಡಿವಾಣ ಹಾಕಬೇಕಾಗುತ್ತದೆ. ಫೇಕ್ ನ್ಯೂಸ್ ಬಗ್ಗೆ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತೇವೆ ಎಂದರು.

ತನಿಖೆಯಾದ ಬಳಿಕವೇ ನಾವು ಉತ್ತರ ಕೊಡಲು ಸಾಧ್ಯವಾಗುತ್ತದೆ. ನಾವೆಲ್ಲ ಹಿಂದೂಗಳೇ. ನಮ್ಮ ಮುಂದೆ ಎರಡು ಹಾದಿಗಳು ಇವೆ. ಒಂದು ಸಂಘರ್ಷದ ಹಾದಿ ಇನ್ನೊಂದು ಸಂಯಮದ ಹಾದಿ. ನಾನು ಎರಡನೇ ಹಾದಿಯಲ್ಲಿದ್ದೇನೆ. ಆತ್ಮಸಾಕ್ಷಿಯಿಂದ ಕೆಲಸ ಮಾಡಿದ್ದೇನೆ. ಆತ್ಮಸಾಕ್ಷಿಯಿಂದ ಎಸ್ ಐಟಿ ಮಾಡಿದ್ದೇವೆ. ಆತ್ಮಸಾಕ್ಷಿಯಿಂದ ಸತ್ಯವನ್ನು ಹೊರ ತರುತ್ತೇವೆ. ನನ್ನ ಈ ಹೇಳಿಕೆಯನ್ನು ನೆನಪಿನಲ್ಲಿಡಿ ಎಂದು ಹೇಳಿದರು.

Karnataka Home Minister Dr. G. Parameshwara issued a stern warning on Monday, urging people—especially YouTubers—to refrain from posting content related to the Dharmasthala case on social media. He cautioned that failing to comply would lead to strict action by the government.