ಬ್ರೇಕಿಂಗ್ ನ್ಯೂಸ್
20-08-25 10:54 pm Bangalore Correspondent ಕರ್ನಾಟಕ
ಬೆಂಗಳೂರು, ಆ.20 : ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ದೂರುದಾರ ತೋರಿಸಿರುವ ಜಾಗದಲ್ಲಿ ಶವ ಶೋಧ ನಡೆಸಿದ ಸಂದರ್ಭದಲ್ಲಿ ಆಯಾ ಭಾಗದ ಮಣ್ಣು ಮತ್ತು ಅಸ್ಥಿಗಳನ್ನು ವಶಕ್ಕೆ ಪಡೆದಿದ್ದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದೆ. ಎಸ್ಐಟಿ ಅಧಿಕಾರಿಗಳ ತನಿಖೆ ಎಫ್ಎಸ್ಎಲ್ ಪರೀಕ್ಷೆಯ ವರದಿ ಮೇಲೆ ನಿಂತಿದ್ದು ಹೀಗಾಗಿ ಈ ವರದಿಯೇ ಮಹತ್ವದ್ದೆನಿಸಿದೆ.
1995 ರಿಂದ 2014ರ ನಡುವೆ ಅನೇಕ ಶವಗಳನ್ನು ಧರ್ಮಸ್ಥಳ ಸುತ್ತಮುತ್ತ ಹೂತು ಹಾಕಿದ್ದಾಗಿ ದೂರುದಾರ ಹೇಳಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ಮಾಜಿ ನೈರ್ಮಲ್ಯ ಕಾರ್ಯಕರ್ತನೂ ಆಗಿರುವ ದೂರುದಾರ ಗುರುತಿಸಿದ್ದ 17 ಸ್ಥಳಗಳನ್ನು ಅಗೆಯಲಾಗಿದ್ದು ಎರಡು ಕಡೆ ಮಾತ್ರ ಎಲುಬಿನ ಸಾಕ್ಷ್ಯ ಲಭಿಸಿತ್ತು. ಹೇಳಿಕೊಂಡ ರೀತಿ ಅವಶೇಷ ಪತ್ತೆಯಾಗದ್ದರಿಂದ ಸಿಕ್ಕಿರುವ ಅಲ್ಲಿನ ಮಣ್ಣಿನ ವಿಧಿ ವಿಜ್ಞಾನ ಪರೀಕ್ಷೆಯತ್ತ ಅಧಿಕಾರಿಗಳು ಗಮನಹರಿಸಿದ್ದಾರೆ.


ಲೊಕಾರ್ಡ್ ತತ್ವವನ್ನು ಆಧರಿಸಿದ ಮಣ್ಣಿನ ವಿಜ್ಞಾನವು, ವಿಧಿವಿಜ್ಞಾನ ಪರೀಕ್ಷೆಯಲ್ಲಿ ಪ್ರಮುಖವಾಗಿದ್ದು ಅಸ್ಥಿ ಶೋಧಗಳ ಪ್ರಕರಣಗಳಲ್ಲಿ ಕಡ್ಡಾಯವಾಗಿದೆ. ಮೂಳೆಗಳು ಮತ್ತು ಮಣ್ಣಿನ ವಿಧಿವಿಜ್ಞಾನ ವಿಶ್ಲೇಷಣೆಯು ಇಂತಹ ಪ್ರಕರಣಗಳಲ್ಲಿ ಪ್ರಮುಖ ವೈಜ್ಞಾನಿಕ ಪುರಾವೆಗಳನ್ನು ನೀಡುತ್ತದೆ. ಮೂಳೆಗಳಲ್ಲಿ ವಿಷ ಕಂಡುಬಂದರೆ, ಸಮಾಧಿ ಸ್ಥಳ ಮತ್ತು ಸುತ್ತಮುತ್ತಲಿನ ಮಣ್ಣಿನ ರಾಸಾಯನಿಕ ವಿಶ್ಲೇಷಣೆಯು ವಿಷದಿಂದ ಸಾವು ಸಂಭವಿಸಿದೆಯೇ ಎಂಬುದನ್ನು ಸೂಚಿಸುತ್ತದೆ. ಮಣ್ಣಿನಲ್ಲಿ ಆರ್ಸೆನಿಕ್, ಸೀಸ ಅಥವಾ ಇತರ ರಾಸಾಯನಿಕಗಳ ಉಪಸ್ಥಿತಿ ಕಂಡುಬಂದರೆ ಸಾವಿನ ಕಾರಣವನ್ನು ಸೂಚಿಸಲು ಕಾರಣವಾಗುತ್ತದೆ. ಮಣ್ಣಿನಲ್ಲಿ ಇರಬಹುದಾದ ರಾಸಾಯನಿಕಗಳು ಮೂಳೆಗಳನ್ನು ಕರಗಿಸುತ್ತವೆ ಎಂದು ವಿಧಿವಿಜ್ಞಾನ ತಜ್ಞರು ಹೇಳುತ್ತಾರೆ.
ಮಣ್ಣಿನ ವಿಜ್ಞಾನ ಕ್ರಿಮಿನಲ್ ಪ್ರಕರಣದ ಅಧ್ಯಯನಗಳಲ್ಲಿ ಪ್ರಮುಖವಾಗಿದೆ ಎಂದು ತಜ್ಞರು ಗುರುತಿಸುತ್ತಾರೆ. ಕಡಿಮೆ ಮಳೆ ಮತ್ತು ತೇವಾಂಶವಿರುವ ಒಣ ಪ್ರದೇಶದಲ್ಲಿ ಅಸ್ಥಿಪಂಜರಗಳು ಮಣ್ಣಿನಲ್ಲಿ 30 ರಿಂದ 50 ವರ್ಷಗಳ ವರೆಗೂ ಸಂರಕ್ಷಿಸಲ್ಪಡಬಹುದು. ಆದರೆ ಕರಾವಳಿ ಪ್ರದೇಶಗಳಲ್ಲಿ ಹೆಚ್ಚು ಬೀಳುವ ಮಳೆ ಮತ್ತು ನದಿಗಳ ಸಮೀಪದ ಸ್ಥಳಗಳಲ್ಲಿ ಹೆಚ್ಚಿನ ಮಣ್ಣಿನ ತೇವಾಂಶದ ಕಾರಣ ಮೂಳೆಗಳು 10 ರಿಂದ 15 ವರ್ಷಗಳಲ್ಲಿ ಕರಗಬಹುದಾಗಿದೆ. ಅಂತಹ ಸ್ಥಳಗಳಲ್ಲಿ ದೀರ್ಘ ಕಾಲದ ವರೆಗೆ ಅಸ್ಥಿಪಂಜರದ ಅವಶೇಷ ಪತ್ತೆಯಾಗದೇ ಇರಬಹುದು ಎಂದು ತಜ್ಞರು ಹೇಳುತ್ತಾರೆ.
ಪುರಾತತ್ತ್ವ ಶಾಸ್ತ್ರದ ಅವಶೇಷಗಳ ಚಿಹ್ನೆಗಳನ್ನು ಮತ್ತು ಪ್ರಮುಖ ರಾಸಾಯನಿಕ ಗುರುತುಗಳನ್ನು ಪತ್ತೆಹಚ್ಚಲು ಶೋಧ ಸಮಯದಲ್ಲಿ ವಿಧಿವಿಜ್ಞಾನ ತಜ್ಞರು ರಾಸಾಯನಿಕ ವಿಶ್ಲೇಷಣೆಗಾಗಿ ಅಲ್ಲಿನ 500 ಗ್ರಾಮ್ ಮಣ್ಣಿನ ಮಾದರಿಯನ್ನು ಸಂಗ್ರಹಿಸುತ್ತಾರೆ. ಈ ಮಣ್ಣಿನ ಪರೀಕ್ಷೆ ಮತ್ತು ವಿಶ್ಲೇಷಣೆ ಪ್ರಕ್ರಿಯೆ 45 ರಿಂದ 90 ದಿನಗಳನ್ನು ತೆಗೆದುಕೊಳ್ಳಬಹುದು. ಹೀಗಾಗಿ ಈ ವರದಿ ಬರೋದಕ್ಕಾಗಿ ಎಸ್ಐಟಿ ಅಧಿಕಾರಿಗಳು ಕಾಯಬೇಕು ಮತ್ತು ಅಲ್ಲಿಯ ವರೆಗೆ ಇತರ ವಿಷಯಗಳ ಬಗ್ಗೆ ಗಮನಹರಿಸಬೇಕಾಗುತ್ತದೆ.
In the high-profile Dharmasthala case, the Special Investigation Team (SIT) has collected soil and bone samples from sites identified by the complainant and sent them for forensic examination. The progress of the investigation now largely depends on the Forensic Science Laboratory (FSL) report, which is expected to provide critical scientific insights.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm