ಬ್ರೇಕಿಂಗ್ ನ್ಯೂಸ್
29-08-25 10:51 pm HK News Desk ಕರ್ನಾಟಕ
ಕಲಬುರಗಿ/ಶಿವಮೊಗ್ಗ, ಆ.29 : ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕಲಬುರಗಿಯಲ್ಲಿ ಎಸಿಪಿ ಮತ್ತು ತಂಡ ಬಲೆಗೆ
ಕಲಬುರಗಿ ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಶರಣಬಸಪ್ಪ ಸುಬೇದಾರ್, ರೈಟರ್ ಚಂದ್ರಕಾಂತ್, ಕಾನ್ಸ್ಟೇಬಲ್ ರಾಘವೇಂದ್ರ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸೈಟ್ ವಿವಾದವೊಂದನ್ನು ಬಗೆಹರಿಸಲು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಂದ ಬರೋಬ್ಬರಿ 40 ಲಕ್ಷಕ್ಕೆ ರೂ. ಬೇಡಿಕೆ ಇಟ್ಟು, 10 ಲಕ್ಷ ಅಡ್ವಾನ್ಸ್ ಪಡೆದಿದ್ದರು.
ನಂತರ ಉಳಿದ 30 ಲಕ್ಷಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದರು. ಈ ಕುರಿತು ರೇವಣಸಿದ್ದಯ್ಯ ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, 30 ಲಕ್ಷ ರೂ. ಪಡೆಯುವಾಗಲೇ ಎಸಿಪಿ ಸುಬೇದಾರ್ ಮತ್ತು ತಂಡವನ್ನು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಘಟನೆಯ ಸಂಬಂಧ ಐವರನ್ನೂ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ
ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಬಂಧನ:
ಇದೇ ರೀತಿ, ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯ ಆಶ್ರಯ ವಿಭಾಗದ ಸಮುದಾಯ ಸಂಘಟನಾಧಿಕಾರಿ ಶಶಿಧರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಮೊಹಮ್ಮದ್ ಆಸಿಫ್ ಉಲ್ಲಾ ಎಂಬುವವರು ಅಮ್ಯಾದ್ ಅಲಿ ಅವರಿಂದ ಖರೀದಿಸಿದ ಮನೆಯ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಕಾರ್ಯಕ್ಕಾಗಿ ಶಶಿಧರ 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ದೂರು ಸ್ವೀಕರಿಸಿದ ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ರುದ್ರೇಶ್ ಅವರ ತಂಡ ಶಿವಮೊಗ್ಗದ ನೆಹರು ರಸ್ತೆಯಲ್ಲಿರುವ ಆಶ್ರಯ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿ ಶಶಿಧರ ನನ್ನ ಬಂಧಿಸಿದೆ.
In a major crackdown on corruption, Lokayukta police in Karnataka conducted separate operations in Kalaburagi and Shivamogga, nabbing two government officials red-handed while accepting bribes. Kalaburagi ACP and Team Caught in ₹40 Lakh Bribe Case In Kalaburagi, Assistant Commissioner of Police (ACP) Sharanabasappa Subedar of the South Division, along with writer Chandrakant, constable
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
24-10-25 05:43 pm
HK News Desk
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
ಜೈಶ್ ಮಹಿಳಾ ಉಗ್ರರಿಂದ ಆನ್ಲೈನ್ ತರಬೇತಿ ಕೋರ್ಸ್ ; ಜ...
22-10-25 05:45 pm
24-10-25 07:57 pm
Mangalore Correspondent
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾ...
23-10-25 07:35 pm
24-10-25 08:20 pm
Mangalore Correspondent
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm
Puttur, Illegal cattle transport, Arrest: ಗೋಪ...
22-10-25 11:51 am