ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದು ಕಳಿಸಿದರೆ ಕಿಡ್ನಾಪ್, ಈ ಗ್ಯಾಂಗ್ ಬಗ್ಗೆ ವಿವರಿಸಿದ್ದಾರೆ ನಟ ಮಾಸ್ಟರ್ ಆನಂದ್ 

02-09-25 08:00 pm       Bangalore Correspondent   ಕರ್ನಾಟಕ

ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಶಾಲೆಗಳಿಗೆ ಮಕ್ಕಳನ್ನು ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ.

ಬೆಂಗಳೂರು, ಸೆ.2: ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲದೇ ಪಟ್ಟಣ ಪ್ರದೇಶಗಳಲ್ಲಿಯೂ ಶಾಲೆಗಳಿಗೆ ಮಕ್ಕಳನ್ನು ಶಾಲಾ ವಾಹನ ಇಲ್ಲವೇ ಖಾಸಗಿ ವಾಹನಗಳಲ್ಲಿ ಕಳುಹಿಸುತ್ತಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮಕ್ಕಳ ಕಳ್ಳರ ಗ್ಯಾಂಗ್​, ಶಾಲಾ ವಾಹನದ ನೆಪದಲ್ಲಿ ಮಕ್ಕಳನ್ನು ಕಿಡ್ನಾಪ್​ ಮಾಡುತ್ತಿರುವ ವಿಚಾರ ಉತ್ತರ ಭಾರತದಲ್ಲಿ ಬೆಳಕಿಗೆ ಬಂದಿದೆ. ಇದರ ಬಗ್ಗೆ ನಟ ಮಾಸ್ಟರ್​ ಆನಂದ್ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಹಿಂದಿಯಲ್ಲಿ ಬಂದಿರುವ ಸುದ್ದಿಯೊಂದನ್ನು ಉಲ್ಲೇಖಿಸಿರುವ ಮಾಸ್ಟರ್​ ಆನಂದ್, ಸಾಮಾನ್ಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಧಾವಂತದಲ್ಲಿ ಇರುತ್ತಾರೆ. ಇದನ್ನೇ ಲಕ್ನೋದಲ್ಲಿ ಕಳ್ಳರ ಗ್ಯಾಂಗ್ ಬಂಡವಾಳ ಮಾಡಿಕೊಂಡು ಅದೇ ರೀತಿಯ ವಾಹನ ತಂದು ಮಕ್ಕಳನ್ನು ಕದಿಯೋಕೆ ನೋಡಿದ್ದಾರೆ ಎಂದು ವಿವರಿಸಿದ್ದಾರೆ. 

ಸಾಮಾನ್ಯವಾಗಿ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವ್ಯಾನ್​ಗಳು ನಿಗದಿತ ಸಮಯಕ್ಕಿಂತ ಸ್ವಲ್ಪ ಹೆಚ್ಚೂ ಕಡಿಮೆ ಬರುವುದು ಸಾಮಾನ್ಯ. ನಿಗದಿತ ವಾಹನ ಬರುವುದಕ್ಕಿಂತ ಸ್ವಲ್ಪ ಮುಂಚೆಯೇ ಕಳ್ಳರ ಗ್ಯಾಂಗ್ ಬಂದು ಹಾರ್ನ್ ಮಾಡುತ್ತದೆ. ಶಾಲಾ ವಾಹನ ಬಂತೆಂದು ಅದನ್ನು ನೋಡದೆ ಮಕ್ಕಳನ್ನು ಕಳಿಸಿಕೊಡುತ್ತಾರೆ. ಎಂದಿನ ಡ್ರೈವರ್​ ಬಂದಿಲ್ಲ, ಅವರಿಗೆ ಉಷಾರಿಲ್ಲ ಅಂತ ನೆಪ ಹೇಳಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. 

ಇಂಥದ್ದೇ ಘಟನೆ ಲಕ್ನೋದಲ್ಲಿ ನಡೆದಿರುವ ಬಗ್ಗೆ ಮಾಸ್ಟರ್​ ಆನಂದ್​ ಹೇಳಿದ್ದಾರೆ. ಮಕ್ಕಳನ್ನು ತುಂಬಿಸಿಕೊಂಡು ಶಾಲೆಯ ವಾಹನ ಬಂದ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಡೌಟ್ ಬಂದು ನಿಜವಾದ ಡ್ರೈವರ್​ಗೆ ಕರೆ ಮಾಡಿದಾಗ, ಆತ ತಾನು ತಡವಾಗಿ ಬರುತ್ತಿರುವುದಾಗಿ ಹೇಳಿದ್ದರಿಂದ ಮೋಸದಾಟ ಬಯಲಾಗಿದೆ. ಆದರೆ ಈ ರೀತಿ ನಿಮ್ಮ ಮಕ್ಕಳಿಗೂ ಆಗಬಹುದು. ಆದ್ದರಿಂದ ಚಾಲಕರು ಬೇರೆ ಬಂದಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಸಂದೇಹ ಬಂದರೆ ಚೆಕ್ ಮಾಡಿ. ಮಕ್ಕಳನ್ನು ಬೇರೆ ವಾಹನಗಳಿಗೆ ಕಳುಹಿಸುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಮಾಸ್ಟರ್​ ಆನಂದ್​  ಸಲಹೆ ಮಾಡಿದ್ದಾರೆ.

In a disturbing new trend, child kidnappers are reportedly disguising themselves as school van drivers to abduct children, a modus operandi that recently surfaced in North India. Actor Master Anand has issued a public warning about such incidents via his Instagram account.