ಬ್ರೇಕಿಂಗ್ ನ್ಯೂಸ್
03-09-25 09:00 pm HK News Desk ಕರ್ನಾಟಕ
ಮೈಸೂರು, ಸೆ.3 : ಬಿಜೆಪಿ ನಾಯಿ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎನ್ನುವ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಮನೆಯ ಯಾವ ನಾಯಿ ಹೋರಾಡಿತ್ತು ಎಂದು ಬಹಿರಂಗಪಡಿಸಲಿ ಎಂದು ಬಿ.ಎಲ್. ಸಂತೋಷ್ ಸವಾಲು ಹಾಕಿದ್ದಾರೆ.
ಸಾವರ್ಕರ್ ಪ್ರತಿಷ್ಠಾನ ಮೈಸೂರು ಸಂಘಟನೆಯು ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಸಾವರ್ಕರ್ ಕಲ್ಪನೆಯ ಭಾರತೀಯ ಸೇನೆ ಮತ್ತು ಆಪರೇಷನ್ ಸಿಂಧೂರ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘ ಶುರುವಾಗಿದ್ದು 1951ರಲ್ಲಿ. ಬಿಜೆಪಿ ಹುಟ್ಟಿದ್ದೇ 1980ರ ದಶಕದಲ್ಲಿ. ಹೀಗಿದ್ದಾಗ ನಾವೆಲ್ಲಿ ಹೋರಾಡಲು ಸಾಧ್ಯ? ಆದರೆ ಹೆಡ್ಗೆವಾರ್ ಅಂತಹವರು ಸ್ವಾತಂತ್ರ್ಯ ಹೋರಾಟದ ಹಾದಿಯಿಂದಲೇ ಬಂದವರು. ಅವರಂಥ ಅನೇಕರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಮೂವರು ಬಚ್ಚಲು ಬಾಯಿ ಮಂತ್ರಿಗಳಿದ್ದಾರೆ. ಎಲ್ಲದಕ್ಕೂ ಆರೆಸ್ಸೆಸ್ ಬಗ್ಗೆ ಗೇಲಿ ಮಾಡುತ್ತಾರೆ. ದೇಶದಲ್ಲಿ ಎಲ್ಲಿ ಹೋದರೂ ನೆಹರು, ಇಂದಿರಾ, ರಾಜೀವ್ ಹೆಸರಿದೆ. ಆದರೆ ಬೆಂಗಳೂರಿನಲ್ಲಿ ಒಂದು ಫ್ಲೈ ಓವರ್ ಗೆ ಸಾವರ್ಕರ್ ಹೆಸರು ಇಡಲು ವಿರೋಧ ಮಾಡುತ್ತಾರೆ. ಸಾವರ್ಕರ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದನ್ನು, ದೇಶಕ್ಕಾಗಿ ತಮ್ಮ ಜೀವ ಸವೆಸಿದ್ದನ್ನು ಅಲ್ಲಗಳೆಯುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ತನಗೆ ಅನುಕೂಲಕರವಲ್ಲದ ಸತ್ಯದ ವಿರುದ್ಧ ಅಪಪ್ರಚಾರ ಮಾಡುತ್ತಲೇ ಇದೆ. ಸ್ವಾತಂತ್ರ್ಯ ಗಳಿಸುವಲ್ಲಿ ಅಸಹಕಾರ ಆಂದೋಲನದ ಬಹುದೊಡ್ಡ ಪಾತ್ರ ಇರೋದು ನಿಜ. ಕಾಂಗ್ರೆಸ್ ಹೋರಾಟ ಇರೋದೂ ಅಷ್ಟೇ ನಿಜ. ಆದರೆ ಆಗ ಕಾಂಗ್ರೆಸ್ ಪಕ್ಷವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಜನರನ್ನು ಒಗ್ಗೂಡಿಸಲು ಸ್ಥಾಪಿಸಿದ್ದು. ಇದ್ದದ್ದೇ ಒಂದು ಪಕ್ಷ ಕಾಂಗ್ರೆಸ್ ಕಾರ್ಯವೈಖರಿಯಿಂದ ಭ್ರಮನಿರಸನಗೊಂಡು ಮುಖರ್ಜಿ ಜನಸಂಘವನ್ನು ರಚಿಸಿದರು ಎಂದು ಹೇಳಿದರು.
ವಿನಾಯಕ ದಾಮೋದರ್ ಸಾವರ್ಕರ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವೂ ಇಲ್ಲದ ಕಾರಣ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಅಹಿತಕರ ಸತ್ಯಗಳನ್ನು ಮುಚ್ಚಿಹಾಕಿವೆ. ಆದರೆ, ಕಾಲಕಾಲಕ್ಕೆ ಅಂತಹ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಕಥೆಗಳು ಹೊರಹೊಮ್ಮುತ್ತವೆ, ಏಕೆಂದರೆ ಸತ್ಯವನ್ನು ಶಾಶ್ವತವಾಗಿ ಮರೆಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಗುರುತಿಸುವ ಮತ್ತು ಮೆಚ್ಚುವವರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಕೆಲವು ಜನರ 'ವಿರೋಧ ಭಕ್ತಿ' (ದ್ವೇಷ) ಅವರ ಬಗ್ಗೆ ಕುತೂಹಲವನ್ನು ಮೂಡಿಸಲು ಸಹಾಯ ಮಾಡುತ್ತದೆ, ಇದು ಅಜ್ಞಾನಿಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ಸತ್ಯದ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಾವು ಸಿದ್ದರಾಮಯ್ಯ ಅವರಂತಹ ವಿರೋಧಿಗಳಿಗೂ ಧನ್ಯವಾದ ಹೇಳಬೇಕು" ಎಂದು ಸಂತೋಷ್ ಹೇಳಿದರು
BJP National General Secretary (Organisation) B.L. Santhosh has challenged Congress President Mallikarjun Kharge to reveal “which Congress household dog fought for freedom,” hitting back at Kharge’s jibe that even the BJP’s dogs were not part of the freedom movement.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
03-09-25 10:04 pm
HK News Desk
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
03-09-25 11:03 pm
Mangalore Correspondent
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
Sowjanya Case, SIT, Uday Jain: 13 ವರ್ಷಗಳ ಬಳಿಕ...
03-09-25 03:45 pm
College student Missing, Mangalore: ಮಂಗಳೂರಿನಲ...
03-09-25 11:53 am
03-09-25 05:40 pm
Bangalore Correspondent
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm