ಬ್ರೇಕಿಂಗ್ ನ್ಯೂಸ್
19-09-25 02:16 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.19 : ಜಾತಿ ಗಣತಿ ವಿಚಾರದಲ್ಲಿ ರಾಜ್ಯದ ಪ್ರಮುಖ ಸಚಿವರೇ ಅಸಮಾಧಾನ ಹೇಳಿಕೊಂಡಿದ್ದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬಿರುಸಿನ ಚರ್ಚೆಯಾಗಿದೆ. ಕೆಲವು ಲಿಂಗಾಯತ ಸಚಿವರು ಸಿಟ್ಟಿಗೆದ್ದು ಮಾತನಾಡಿದ್ದು ಈ ರೀತಿ ಗೊಂದಲ ಮಾಡಿಕೊಂಡು ಸಮೀಕ್ಷೆ ನಡೆಸುವುದೇ ಬೇಡ. ಗೊಂದಲ ಬಗೆಹರಿಯೋ ವರೆಗೂ ಮುಂದೂಡಿ ಎಂದು ಒತ್ತಡ ಹೇರಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ ಸಿಟ್ಟಿಗೆದ್ದ ಸಚಿವ ಎಂ.ಬಿ.ಪಾಟೀಲ್, ಜಾತಿ ಗಣತಿ ಮೂಲಕ ಲಿಂಗಾಯತರನ್ನು ತುಂಡು ತುಂಡು ಮಾಡುತ್ತಿದ್ದೀರಿ. ಕುಲಶಾಸ್ತ್ರೀಯ ಅಧ್ಯಯನವನ್ನು ಯಾರು ಮಾಡೋದು. ಇದರಿಂದ ಪಕ್ಷ ಮತ್ತು ಸರ್ಕಾರದ ಇಮೇಜಿಗೆ ಧಕ್ಕೆಯಾಗುತ್ತಿದೆ ಎಂದು ಹೇಳಿ ಟೇಬಲ್ ಗುದ್ದಿ ಧ್ವನಿ ಏರಿಸಿದ್ದಾರೆ. ಈ ವೇಳೆ, ಲಿಂಗಾಯತ ಸಮುದಾಯದ ಈಶ್ವರ್ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ಅವರೂ ತಮ್ಮ ಆಸನಗಳಿಂದ ಎದ್ದು ನಿಂತು ದನಿಗೂಡಿಸಿದ್ದಲ್ಲದೆ, ಏರಿದ ಧ್ವನಿಯಲ್ಲಿ ಮಾತನಾಡಿದ್ದಾರೆ. ''ಯಾವ ಆಧಾರದ ಮೇಲೆ ಈ ಸಮೀಕ್ಷೆ ಆಗುತ್ತಿದೆ? ಹೊಸ ಜಾತಿಗಳನ್ನು ಏಕೆ ಸೇರಿಸಿದ್ದೀರಿ? ಎಂದು ಖಂಡ್ರೆ ಪ್ರಶ್ನಿಸಿದರೆ, ''ನಮ್ಮ ಜಾತಿ ಯಾವುದು ಗೊತ್ತಾ?,'' ಎಂದು ಮಲ್ಲಿಕಾರ್ಜುನ್ ಕೋಪದಿಂದ ಪ್ರಶ್ನಿಸಿದ್ದಾರೆ. ಈ ಮೂವರು ಸಚಿವರ ವಾದವನ್ನು ಎಚ್.ಕೆ ಪಾಟೀಲ್ ಅವರೂ ಸಮರ್ಥಿಸಿ ಸಮೀಕ್ಷೆಯ ರೂಪುರೇಷೆ ಮತ್ತು ಮಾನದಂಡ ಒಪ್ಪುವಂತದ್ದಲ್ಲ ಎಂದು ಹೇಳಿದರು ಎನ್ನಲಾಗಿದೆ.
ಸಮೀಕ್ಷೆಗೆ 331 ಹೊಸ ಜಾತಿಗಳನ್ನು ಸೃಷ್ಟಿಸಿದ್ದು ಯಾರು? ಏಕೆ? ಹೊಸ ಜಾತಿಗಳನ್ನು ಸೃಷ್ಟಿಸಲು ಅಧಿಕಾರ ಇದೆಯೇ? ಇದರಿಂದ ಲಿಂಗಾಯತ ಮಾತ್ರವಲ್ಲ. ಬೇರೆ ಬೇರೆ ಜಾತಿಗಳಲ್ಲೂ ಗೊಂದಲ ಸೃಷ್ಟಿಯಾಗಿವೆ. ಇದರಿಂದ ಪಕ್ಷ ಮತ್ತು ಸರಕಾರಕ್ಕೆ ತೊಂದರೆಯಾಗಲಿದೆ ಎಂದು ಕೆಲವು ಸಚಿವರು ವಾದಿಸಿದ್ದು, ಈ ಸಮೀಕ್ಷೆಯ ಉಸಾಬರಿಯೇ ಬೇಡ. ಮುಂದೂಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರೂ ಇದೇ ರೀತಿ ಮಾತನಾಡಿದ್ದು ಗೊಂದಲ ಸೃಷ್ಟಿಸಿದರೆ ಅದರಿಂದ ಸರ್ಕಾರಕ್ಕೆ ತೊಂದರೆಯಾಗುತ್ತದೆ. ಜನರಲ್ಲಿ ಅಪನಂಬಿಕೆ ಬರುವಂತೆ ಆಗಬಾರದು ಎಂದು ಹೇಳಿದ್ದಾರೆ. ಕೊನೆಗೆ, ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಮೇಲ್ಜಾತಿ ವಿರೋಧಿ ಎಂದು ಹಣೆಪಟ್ಟಿ ಕಟ್ಟುವಂತೆ ಆಗಿದೆ. ಎಲ್ಲ ಹಿಂದುಳಿದ ಸಮುದಾಯಗಳಿಗೆ ನ್ಯಾಯ ದೊರಕಿಸಲು ಈ ಸಮೀಕ್ಷೆ ಮಾಡಲಾಗುತ್ತಿದೆ. ಸರ್ಕಾರದ ನಡೆಯನ್ನು ಸಚಿವರು ಸಮರ್ಥನೆ ಮಾಡಬೇಕು ಎಂದು ಹೇಳಿದರು. ಕೊನೆಗೆ, ಈ ಕುರಿತ ನಿರ್ಧಾರವನ್ನು ಸಿದ್ದರಾಮಯ್ಯ ತೀರ್ಮಾನಕ್ಕೆ ಬಿಡಲಾಯಿತು.
ಈ ಹಿಂದೆ ಕಾಂತರಾಜ್ ಅಧ್ಯಕ್ಷತೆಯ ಆಯೋಗದ 2015ರ ಸಮೀಕ್ಷಾ ವರದಿ ಮತ್ತು ಈ ವರದಿಯ ದತ್ತಾಂಶ ಆಧರಿಸಿದ ಜಯಪ್ರಕಾಶ್ ಹೆಗ್ಡೆ ವರದಿ ಅಂಗೀಕಾರ ಹಾಗೂ ಜಾರಿ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ಸಚಿವರಿಂದಲೇ ಅಪಸ್ವರ ಬಂದು ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಹೊಸ ಸಮೀಕ್ಷೆ ವಿಚಾರದಲ್ಲೂ ಇದೇ ಸ್ಥಿತಿ ಪುನಾವರ್ತನೆಯಾಗಿದೆ.
The proposed caste census in Karnataka has triggered strong discontent within the state cabinet, with some senior ministers openly questioning the methodology and demanding its postponement. Heated exchanges marked Thursday’s cabinet meeting, as several Lingayat ministers strongly opposed the inclusion of new caste categories.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 03:02 pm
Mangalore Correspondent
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm