ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು ದಸರಾಗೆ ಚಾಲನೆಯಿತ್ತ ಲೇಖಕಿ ಬಾನು ಮುಷ್ತಾಕ್, ಪುಷ್ಪಾರ್ಚನೆ ಮಾಡಿ ಮಂಗಳಾರತಿ ಸ್ವೀಕರಿಸಿ ಸಡ್ಡು ; ಸಾಂಪ್ರದಾಯಿಕ ಶೈಲಿಯಲ್ಲಿ ದಸರಾ ವೇದಿಕೆಗೆ ಬಂದ ಬಾನು ಕುಟುಂಬಸ್ಥರು 

22-09-25 10:54 am       HK News Desk   ಕರ್ನಾಟಕ

ಬಿಜೆಪಿ ನಾಯಕರ ವಿರೋಧ, ಬಲಪಂಥೀಯರ ಆಕ್ಷೇಪ ಮಧ್ಯೆಯೂ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರು ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. 

ಮೈಸೂರು, ಸೆ.22 : ಬಿಜೆಪಿ ನಾಯಕರ ವಿರೋಧ, ಬಲಪಂಥೀಯರ ಆಕ್ಷೇಪ ಮಧ್ಯೆಯೂ ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ ಬಾನು ಮುಷ್ತಾಕ್ ಅವರು ಮೈಸೂರು ದಸರಾಕ್ಕೆ ಚಾಲನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. 

ಬೆಳ್ಳಿ ರಥದಲ್ಲಿ ವಿರಾಜಮಾನಳಾಗಿ ಬಂದ ಚಾಮುಂಡೇಶ್ವರಿ ತಾಯಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಕೈಮುಗಿದು ಆರತಿ ಸ್ವೀಕರಿಸಿ ವಿರೋಧ ಮಾಡಿದವರಿಗೆ ಬಾನು ಮುಷ್ತಾಕ್ ಸಡ್ಡು ಹೊಡೆದಿದ್ದಾರೆ. ಬಿಜೆಪಿ ನಾಯಕರ ವಿರೋಧದ ನಡುವೆಯೂ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಪಡೆದು ಕೈಮುಗಿದು, ಮಂಗಳಾರತಿ ತೆಗೆದುಕೊಂಡಿದ್ದು ವಿಶೇಷವಾಗಿತ್ತು. ನಾಡಹಬ್ಬ ದಸರಾವನ್ನು ಉದ್ಘಾಟಿಸಿದ ಬಾನು ಮುಷ್ತಾಕ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಆನೆ ಅಂಬಾರಿ ಇರುವ ವಿಗ್ರಹ ಕೊಟ್ಟು ಅಭಿನಂದಿಸಿ ಸನ್ಮಾನಿಸಿದರು. 

ಇದಕ್ಕೂ ಮುನ್ನ ವಿಶ್ವವಿಖ್ಯಾತ ನಾಡಹಬ್ಬ ದಸರಾ ವೇದಿಕೆಗೆ ಭಾನು ಮುಸ್ತಾಕ್ ಕುಟುಂಬಸ್ಥರು ಆಗಮಿಸಿದರು. ಕುಟುಂಬದವರಿಗೆ ಉಳಿಯಲು ಜಿಲ್ಲಾಡಳಿತ ಪ್ರತ್ಯೇಕ ವ್ಯವಸ್ಥೆ ಮಾಡಿತ್ತು. ಬಾನು ಮತ್ತು ಅವರ ಕುಟುಂಬ ಸದಸ್ಯರು ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಸೀರೆಯುಟ್ಟು ಹೂವು ಮುಡಿದು ದಸರಾ ಉದ್ಘಾಟನೆಗೆ ಬಂದಿದ್ದರು. 

ಬಿಜೆಪಿ ನಾಯಕರು ಬಾನು ಅವರು ಏನು ಮಾಡುತ್ತಾರೆ, ಚಾಮುಂಡಿ ತಾಯಿಗೆ ಕೈಮುಗಿತಾರಾ, ಅಪಮಾನ ಮಾಡುತ್ತಾರೆಯೇ ನೋಡುತ್ತೇವೆ, ಅಪಚಾರ ಆದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದಿದ್ದರು‌. ಆದರೆ ಬಾನು ಅವರು ತಮ್ಮ ಮತ ಧರ್ಮದ ಭಾವನೆ ಬದಿಗಿಟ್ಟು ಚಾಮುಂಡೇಶ್ವರಿಗೆ ಕೈಮುಗಿದು ಮಂಗಳಾರತಿ ತೆಗೆದುಕೊಂಡು ಭಾವುಕರಾಗಿದ್ದ ಕಂಡುಬಂತು. ಹಿಂದು ಸಂಸ್ಕೃತಿ ಬಗ್ಗೆ ದುರಭಿಮಾನ ಹೊಂದಿರುವ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು, ಅವರಿಗೆ ಅವಕಾಶ ನೀಡಬಾರದು ಎಂದು ಬಿಜೆಪಿ ನಾಯಕರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ಮಾನ್ಯ ಮಾಡಲು ಕೋರ್ಟ್ ನಿರಾಕರಿಸಿತ್ತು. ಸಂವಿಧಾನದ ಪೀಠಿಕೆಯಲ್ಲೇ ಸರ್ವ ಸಮಾನತೆ, ಸಮಭಾವದ ಉಲ್ಲೇಖ ಇದೆಯಲ್ವಾ ಎಂದು ಹೇಳಿ ಅರ್ಜಿ ವಜಾಗೊಳಿಸಿತ್ತು.‌

Despite opposition from BJP leaders and right-wing groups, Booker Prize-winning author Banu Mushtaq inaugurated the world-famous Mysuru Dasara celebrations on Friday. In the presence of Chief Minister Siddaramaiah and Deputy CM D.K. Shivakumar, Mushtaq formally launched the festivities by offering floral tributes to the idol of Goddess Chamundeshwari atop Chamundi Hills.