ಬ್ರೇಕಿಂಗ್ ನ್ಯೂಸ್
29-09-25 07:59 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.29 : ಹೈದರಾಬಾದ್‌ನಲ್ಲಿ ನಡೆದ ಕಾಂತಾರ, ಚಾಪ್ಟರ್ 1 ಕಾರ್ಯಕ್ರಮ ವಿವಾದಕ್ಕೆ ಗುರಿಯಾಗಿದೆ. ತೆಲುಗು ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಿನಿಮಾದ ಬಗ್ಗೆ ಸಂಪೂರ್ಣ ಕನ್ನಡದಲ್ಲಿ ಮಾತನಾಡಿದ್ದು, ತೆಲುಗಿನಲ್ಲಿ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂಬುದು ತೆಲುಗು ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ತೆಲುಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೆಆರ್‌ಸಿ ಕನ್ವೆನ್ಷನ್‌ನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ರಿಷಬ್ ಜೊತೆಗೆ ಜೂನಿಯರ್ ಎನ್‌ಟಿಆರ್ ಕೂಡ ಭಾಗವಹಿಸಿದ್ದರು. ರಿಷಭ್ ಶೆಟ್ಟಿ ಪ್ರಚಾರದ ಸಮಯದಲ್ಲಿ ಹಿಂದಿ, ತಮಿಳು ಕಾರ್ಯಕ್ರಮಗಳಲ್ಲಿ ಹಿಂದಿ ಮತ್ತು ತಮಿಳು ಸೇರಿದಂತೆ ಆಯಾ ರಾಜ್ಯದ ಭಾಷೆಗಳಲ್ಲಿ ಮಾತನಾಡಿದ್ದಾರೆ. ಆದರೆ, ಹೈದರಾಬಾದ್‌ನಲ್ಲಿ ಮಾತ್ರ ಅವರು ತೆಲುಗು ಮತ್ತು ಇಂಗ್ಲಿಷ್ ಎರಡನ್ನೂ ಕಡೆಗಣಿಸಿ, ಕನ್ನಡದಲ್ಲೇ ಮಾತನಾಡಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

'ಅದು ರಿಷಬ್ ಶೆಟ್ಟಿಯವರ ದುರಹಂಕಾರ. ಹಿಂದಿಯಲ್ಲಿ ಸಂದರ್ಶನಗಳನ್ನು ನೀಡಲು ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ಅವರು ತೆಲುಗಿನಲ್ಲಿ ಕನಿಷ್ಠ ಕೆಲವು ಪದಗಳನ್ನಾದರೂ ಪ್ರಯತ್ನಿಸಬೇಕಿತ್ತು' ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, 'ರಿಷಬ್ ಶೆಟ್ಟಿ ತೆಲುಗಿನಲ್ಲಿ ಒಂದು ವಾಕ್ಯವನ್ನು ಸಹ ಪ್ರಯತ್ನಿಸದಿರುವುದನ್ನು ನೋಡಿ ನಿರಾಸೆ ಎನಿಸಿದೆ. ತೆಲುಗು ಪ್ರೇಕ್ಷಕರು ಮೊದಲ ಭಾಗವನ್ನು ದೊಡ್ಡ ಪ್ಯಾನ್-ಇಂಡಿಯಾ ಹಿಟ್ ಮಾಡಿದ್ದಾರೆ. ಹೀಗಾಗಿ, ನಾವು ಆ ಮೂಲಭೂತ ಗೌರವಕ್ಕೆ ಅರ್ಹರು' ಎಂದು ಬರೆದಿದ್ದಾರೆ.
ತೆಲುಗು ಡಬ್ಬಿಂಗ್ ಆವೃತ್ತಿಯ ಟಿಕೆಟ್ ಬೆಲೆ ಏರಿಕೆಯ ವಿವಾದವು ಕಾವು ಪಡೆದಿರುವಾಗಲೇ ಭಾಷೆಯ ವಿಚಾರದಲ್ಲಿ ವಿವಾದ ಎಬ್ಬಿಸಲಾಗಿದೆ. 'ತೆಲುಗು ರಾಜ್ಯಗಳಲ್ಲಿ, ನೀವು ಜನರನ್ನು ಗೌರವಿಸಬೇಕು ಮತ್ತು ಟಿಕೆಟ್ ಹೆಚ್ಚಳ ಬಯಸಿದಾಗಲೆಲ್ಲ ಕನಿಷ್ಠ ತೆಲುಗು ಮಾತನಾಡಬೇಕು' ಒಬ್ಬ ಬಳಕೆದಾರ ಒತ್ತಾಯಿಸಿದ್ದಾರೆ.
The pre-release event of Kantara: Chapter 1 in Hyderabad has sparked controversy after actor-director Rishab Shetty spoke entirely in Kannada, without attempting even a few words in Telugu. Fans expressed disappointment on social media, noting that Rishab had spoken in Hindi and Tamil at other promotional events but ignored Telugu in Hyderabad, despite the first film’s massive success in the Telugu states.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm