DK Shivakumar: ಪವರ್ ಷೇರಿಂಗ್ ಬಗ್ಗೆ ಮಾತಾಡಿದ್ರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ, ಯಾರೂ ಯಾರ ಪರವಾಗಿಯೂ ಮಾತಾಡಬಾರ್ದು ; ಕಾಂಗ್ರೆಸ್ ನಾಯಕರಿಗೆ ಡಿಕೆಶಿ ವಾರ್ನ್  

02-10-25 03:50 pm       Bangalore Correspondent   ಕರ್ನಾಟಕ

ಕಾಂಗ್ರೆಸ್ ನಲ್ಲಿ ದಸರಾ ಹಬ್ಬದ ಮಧ್ಯೆ ಮತ್ತೆ ಪವರ್ ಶೇರಿಂಗ್​​​ ಚರ್ಚೆ ಮುನ್ನಲೆಗೆ ಬಂದಿದೆ. ನವೆಂಬರ್ ನಲ್ಲಿ ಕ್ರಾಂತಿ ಆಗುತ್ತದೆ ಎಂಬ ಮಾತುಗಳನ್ನು ರಾಜಕೀಯ ನಾಯಕರು ಹೇಳುತ್ತ ಬಂದಿದ್ದಾರೆ.

ಬೆಂಗಳೂರು, ಅ.2: ಕಾಂಗ್ರೆಸ್ ನಲ್ಲಿ ದಸರಾ ಹಬ್ಬದ ಮಧ್ಯೆ ಮತ್ತೆ ಪವರ್ ಶೇರಿಂಗ್​​​ ಚರ್ಚೆ ಮುನ್ನಲೆಗೆ ಬಂದಿದೆ. ನವೆಂಬರ್ ನಲ್ಲಿ ಕ್ರಾಂತಿ ಆಗುತ್ತದೆ ಎಂಬ ಮಾತುಗಳನ್ನು ರಾಜಕೀಯ ನಾಯಕರು ಹೇಳುತ್ತ ಬಂದಿದ್ದಾರೆ. ಕೆಲವು ಕಾಂಗ್ರೆಸ್​​ ನಾಯಕರು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಮೈಸೂರಿಗೆ ತೆರಳಿದ ವಿಪಕ್ಷ ನಾಯಕರು ಹೇಳಿದ್ದು ಯಾವುದೂ ಆಗಲ್ಲ, ಮುಂದೆಯೂ ದಸರಾ ಉದ್ಘಾಟನೆ ನಾನೇ ಮಾಡುತ್ತೇನೆ ಎಂದಿದ್ದಾರೆ. ಇಷ್ಟಾಗುತ್ತಲೇ ಮತ್ತೆ ಅಧಿಕಾರ ಹಂಚಿಕೆ ವಿಚಾರ ಮುನ್ನೆಲೆಗೆ ಬಂದಿದೆ. 

ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್, ಕಾಂಗ್ರೆಸ್​ನಲ್ಲಿ ಯಾರೂ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬೇಡಿ, ಅದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿ, ಯಾರಿಗೂ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದಕ್ಕೆ ಹಕ್ಕಿಲ್ಲ. ಕುಣಿಗಲ್ ಶಾಸಕ ರಂಗನಾಥ್ ಸೇರಿದಂತೆ ಯಾರು ಸಹ ಮಾತನಾಡಬಾರದು. ಅವರಿಗೆ ನೋಟಿಸ್ ಕೊಡಲು ಹೇಳಿದ್ದೇನೆ ಎಂದರು. 

ಪವರ್ ಶೇರಿಂಗ್ ಬಗ್ಗೆ ಎಲ್ಲಿ ಚರ್ಚೆ ಇದೆ? ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದಾರೆ, ಯಾರೂ ಚರ್ಚೆ ಮಾಡಬಾರದು. ಇದರ ಬಗ್ಗೆ ಮಾತನಾಡುವವರು ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರವಾಗಿ ಮಾತಾಡಿದರೂ, ನನ್ನ ಪರವಾಗಿ ಮಾತಾಡಿದರೂ ಅದು ಡ್ಯಾಮೇಜ್ ಆಗುತ್ತೆ. ಇದರ ಬಗ್ಗೆ ಚರ್ಚೆ ಮಾಡಿದರೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದಂತೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಬೇರೆ ರೀತಿ ಹೇಳಿದ್ದಾರೆ, ಅವರು ಹೇಳಿದಂತೆ ಹೈಕಮಾಂಡ್ ಮಾತೇ ಅಂತಿಮ. ಹೈಕಮಾಂಡ್​ ಹೇಳಿದಂತೆ ನಾವು ನಡೆದುಕೊಳ್ಳುತ್ತೇವೆ. ನಮಗೆ ಪಕ್ಷ ಮುಖ್ಯ, ವ್ಯಕ್ತಿಯಲ್ಲ. ಪಕ್ಷ ಹೇಳಿದಂತೆ ಕೇಳಿಕೊಂಡು ಹೋಗುತ್ತೇವೆ ಎಂದರು.

ಬಿಜೆಪಿ ಪಕ್ಷದವರು ಅವರ ಪಾರ್ಟಿಯ ಕ್ರಾಂತಿಯ ಬಗ್ಗೆ ಚರ್ಚೆ ಮಾಡಿಕೊಂಡು ಹೋಗಲಿ. ನಾನು ಸೂಜಿ, ದಾರ ಬೇಕಾದರೆ ಕಳಿಸಿಕೊಡುತ್ತೇನೆ. ಅವರೇ ಹೊಲಿದುಕೊಂಡು ತಮ್ಮ ಪಕ್ಷವನ್ನು ರೆಡಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

Amid Dasara festivities, rumours of power-sharing within the Congress and talk of leadership change resurfaced. Deputy Chief Minister D.K. Shivakumar strongly warned party leaders not to discuss power-sharing publicly, saying such talk harms the party and amounts to anti-party activity.