Big Boss Kannada, Close, Update: ಬಿಗ್ ಬಾಸ್ ಮನೆ ಖಾಲಿ ಖಾಲಿ ; ಮನೆಯಿಂದ ಎಲ್ಲಾ ಸ್ಪರ್ಧಿಗಳು ಔಟ್, ಎಲ್ಲರನ್ನೂ ಎಲಿಮಿನೇಟ್ ಮಾಡುವ ಬಿಗ್ ಬಾಸ್ ಗೆ ಎಲಿಮಿನೇಷನ್ ಶಿಕ್ಷೆ ! 

07-10-25 10:18 pm       Bangalore Correspondent   ಕರ್ನಾಟಕ

ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಬಿಕ್ ಶಾಕ್ ಎದುರಾಗಿದೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್ ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಬಿಗ್‌ಬಾಸ್‌ ಮನೆಯಿಂದ ಕೂಡ ಸ್ಪರ್ಧಿಗಳು ಹೊರಬಂದಿದ್ದಾರೆ.

ಬೆಂಗಳೂರು, ಅ 07 : ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಬಿಕ್ ಶಾಕ್ ಎದುರಾಗಿದೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಬಿಗ್ ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಲಾಗಿದೆ. ಬಿಗ್‌ಬಾಸ್‌ ಮನೆಯಿಂದ ಕೂಡ ಸ್ಪರ್ಧಿಗಳು ಹೊರಬಂದಿದ್ದಾರೆ. ಜಾಲಿವುಡ್‌ ಸ್ಟುಡಿಯೋದಲ್ಲಿರೋ ಥಿಯೇಟರ್‌ನಲ್ಲಿ ಸದ್ಯಕ್ಕೆ ಬಿಗ್‌ಬಾಸ್‌ ಸ್ಪರ್ಧಿಗಳನ್ನು ಕೂರಿಸಲಾಗಿದೆ.

ಶುರುವಾಗಿ 2ನೇ ವಾರಕ್ಕೆ ಬಿಗ್‌ಬಾಸ್‌ ಬಂದ್‌ !

ಸೆಪ್ಟೆಂಬರ್‌ 28ರಂದು ಆರಂಭವಾದ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಕ್ಕೆ ಇದೀಗ ವಿಘ್ನ ಎದುರಾಗಿದೆ. ಶೋ 2ನೇ ವಾರಕ್ಕೆ ಕಾಲಿಟ್ಟ ಬೆನ್ನಲ್ಲೇ ಅಂತ್ಯವಾಗುವ ಆತಂಕ ಮೂಡಿದೆ. ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಶೋ ನಡೆಯುತ್ತಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋಸ್ & ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ.ಗೆ ಅಧಿಕಾರಿಗಳು ಬೀಗ ಜಡಿದಿದ್ದು, 17 ಸ್ಪರ್ಧಿಗಳನ್ನು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಕರೆ ತರಲಾಗಿದೆ.

ಅಧಿಕಾರಿಗಳು ಮನೆಯೊಳಗೆ ಬರುವ ಮೊದಲೇ ಎಲ್ಲರೂ ಲಿವಿಂಗ್ ಏರಿಯಾಗೆ ಬನ್ನಿ ಎಂದು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಯಾರೂ ಹೆದರುವ ಅವಶ್ಯಕತೆ ಇಲ್ಲ. ಈ‌ ನ್ಯೂಸ್‌ನಿಂದ ನಿಮಗೆ ಬೇಸರ ಕೂಡ ಆಗಬಹುದು. ಆದರೆ ಇದು ಸ್ವಲ್ಪ ದಿನ ಮಾತ್ರ. ಈ ಕೂಡಲೇ ಮನೆ ಖಾಲಿ ಮಾಡಿ ಅಂತ ಹೇಳಿರೋ ಮೆಸೇಜ್ ಇದೆ ಎಂದು ಹೇಳಿದ್ದಾರೆ. ಅದರಂತೆ ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆತಂದು ಥಿಯೇಟರ್‌ನಲ್ಲಿ ಕೂರಿಸಲಾಗಿತ್ತು. ಇದೀಗ ಮತ್ತೆ ಸ್ಪರ್ಧಿಗಳನ್ನು ಖಾಸಗಿ ಹೋಟೆಲ್‌‌ಗೆ ಕರೆದುಕೊಂಡು ಹೋಗಲಾಗಿದೆ.

ಸಮಸ್ಯೆ ಬಗೆ ಹರಿಸುವವರೆಗೂ ಇದೇ ಸ್ಥಿತಿ ?

ಬಿಗ್ ಬಾಸ್ ತಂಡವು ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸುವವರೆಗೂ ಎಲ್ಲಾ ಸ್ಪರ್ಧಿಗಳು ಇದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಒಂದು ವೇಳೆ, ಸಮಸ್ಯೆ ಬಗೆಹರಿಯುವುದು ತಡವಾದರೆ, ಸ್ಪರ್ಧಿಗಳನ್ನು ಅವರವರ ಮನೆಗೆ ಕಳುಹಿಸಿಕೊಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅಲ್ಲಿಯವರೆಗೂ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದಂತೆ ಸ್ಪರ್ಧಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಂಡವೇ ಹೊತ್ತುಕೊಂಡಿದೆ.

ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಇದೇ ಮೊದಲೇನಲ್ಲ. ನಿಮಗೆ ನೆನಪಿರಬಹುದು, ಬಿಗ್ ಬಾಸ್ ಸೀಸನ್ 8 ಕೂಡ ಕರೋನಾ ಮಹಾಮಾರಿಯ ಕಾರಣದಿಂದಾಗಿ 70 ದಿನಗಳ ನಂತರ ಅರ್ಧಕ್ಕೆ ನಿಂತಿತ್ತು. ಆಗಲೂ ಇದೇ ರೀತಿ ಎಲ್ಲಾ ಸ್ಪರ್ಧಿಗಳನ್ನು ಅವರವರ ಮನೆಗಳಿಗೆ ಕಳುಹಿಸಿಕೊಡಲಾಗಿತ್ತು

ಸೀಸನ್‌ 8 ಕೂಡ ಅರ್ಧಕ್ಕೆ ನಿಂತಿತ್ತು !

ಆ ಸಮಯದಲ್ಲಿ ಶೋ ಮುಗಿದೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕೊರೋನಾ ಅಲೆ ಕಡಿಮೆಯಾದ ನಂತರ, ಅದೇ ಸ್ಪರ್ಧಿಗಳನ್ನು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಕರೆಸಲಾಗಿತ್ತು. 'ಸೆಕೆಂಡ್ ಇನ್ನಿಂಗ್ಸ್' ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಪುನರಾರಂಭಿಸಿ, ವಿಜೇತರನ್ನು ಘೋಷಿಸಲಾಗಿತ್ತು.

A major shock has hit Bigg Boss Kannada Season 12, as the reality show has been abruptly halted just two weeks after its launch. Authorities have sealed Jalewood Studios & Entertainment Pvt. Ltd. in Bidadi Industrial Area for alleged rule violations, forcing all 17 contestants out of the Bigg Boss house.