Big Boss, Prashanth Sambargi, Dk Shivakumar, Sudeep: ಬಿಗ್ ಬಾಸ್‌ ಗೆ ಬೀಗ ; ಸುದೀಪ್ ನ ಟಾರ್ಗೆಟ್ ಮಾಡಿ ಈ ರೀತಿ ಮಾಡ್ತಿದ್ದಾರೆ, ಇದು ನಟ್ಟು ಬೋಲ್ಟ್‌ನ ಪ್ರತಿಫಲ, ಡಿಕೆ ವಿರುದ್ಧ ಬೊಟ್ಟು ಮಾಡಿದ ಪ್ರಶಾಂತ್‌ ಸಂಬರಗಿ

07-10-25 10:49 pm       Bangalore Correspondent   ಕರ್ನಾಟಕ

ಬಿಗ್ ಬಾಸ್‌ ಕನ್ನಡ ರಿಯಾಲಿಟಿ ಶೋ ನಡೆಯುತ್ತಿರುವ ಸ್ಟೂಡಿಯೋಗೆ ರಾಮನಗರ ಜಿಲ್ಲಾಡಳಿತದಿಂದ ದಾಳಿ ನಡೆಸಿ ಶೋ ಸ್ಥಗಿತಗೊಳಿದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಇದು ನಟ್ಟು ಬೋಲ್ಟ್‌ನ ಪ್ರತಿಫಲ ಎಂದು ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಶಾಂತ್‌ ಸಂಬರಗಿ ಆರೋಪ ಮಾಡಿದ್ದಾರೆ.

ಬೆಂಗಳೂರು, ಅ.07: ಬಿಗ್ ಬಾಸ್‌ ಕನ್ನಡ ರಿಯಾಲಿಟಿ ಶೋ ನಡೆಯುತ್ತಿರುವ ಸ್ಟೂಡಿಯೋಗೆ ರಾಮನಗರ ಜಿಲ್ಲಾಡಳಿತದಿಂದ ದಾಳಿ ನಡೆಸಿ ಶೋ ಸ್ಥಗಿತಗೊಳಿದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ಇದು ನಟ್ಟು ಬೋಲ್ಟ್‌ನ ಪ್ರತಿಫಲ ಎಂದು ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಶಾಂತ್‌ ಸಂಬರಗಿ ಆರೋಪ ಮಾಡಿದ್ದಾರೆ.

ಬಿಗ್‌ ಬಾಸ್‌ ಮನೆ ಬಂದ್‌ ಮಾಡಿಸಿದ ಹಿನ್ನೆಲೆ ಮಂಗಳವಾರ ಸಂಜೆ ಫೇಸ್‌ಬುಕ್‌ ಲೈವ್‌ ಬಂದ ಪ್ರಶಾಂತ್ ಸಂಬರಗಿಯವರು ಕಾಂಗ್ರೆಸ್‌ ಸರ್ಕಾರ ಹಾಗೂ ಡಿಸಿಎಂ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇದು ನಟ ಸುದೀಪ್‌ ಹಾಗೂ ಕರ್ನಾಟಕದ ಜೆಡಿಎಸ್‌ ಪಕ್ಷದ ಕೇಂದ್ರ ಸಚಿವರನ್ನು ಗುರಿಯಾಗಿಸಿಕೊಂಡು ಸರ್ಕಾರ ಆಡಿದ ಆಟ ಎಂದು ದೂರಿದ್ದಾರೆ.

ಕಳೆದ ವರ್ಷ ಬಿಗ್ ಬಾಸ್‌ ಸೀಜನ್‌ ನಡೆಯುವಾಗಲೂ ಹುಲಿ ಉಗರು ಕೇಸ್‌ ನಡೆಸಿ ದೊಡ್ಡ ರಂಪ ಮಾಡಲಾಗಿತ್ತು. ಇದು ಕಾಂಗ್ರೆಸ್‌ ಸರ್ಕಾರ ಯಾರನ್ನೋ ಒಬ್ಬರನ್ನು ಗುರಿಯಾಗಿಸಿಕೊಂಡು ಈ ರೀತಿ ಮಾಡುತ್ತಿದೆ. ಸ್ಟೂಡಿಯೋ ಇರುವ ಜಾಗ ಮಾಲೀಕರು ಜೆಡಿಎಸ್‌ ಕೇಂದ್ರ ಸಚಿವರೊಬ್ಬರಿಗೆ ಹತ್ತಿರದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಬರಗಿ ಹೇಳಿದರು.

ನಟ ಸುದೀಪ್‌ ಬಿಗ್‌ ಬಾಸ್‌ ಕಾರ್ಯಕ್ರಮದ ನಿರೂಪಕರು. ಅವರು ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು. ಜತೆಗೆ ಅವರು ಡಿಸಿಎಂ ಈ ಹಿಂದೆ ಹೇಳಿದ್ದ ನಟ್ಟು ಬೋಲ್ಟ್‌ ಟೈಟ್‌ ಮಾಡ್ತೇನೆ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗ ಬಿಗ್‌ ಬಾಸ್‌ ಶೋ ಆರಂಭವಾಗಿದ್ದು, ಅವರನ್ನು ಗುರಿಯಾಗಿಸಿಕೊಂಡು ಈ ರಾಜಕೀಯ ಆಟ ಆಡಿದ್ದಾರೆ. ನಟ್ಟು ಬೋಲ್ಟು ಟೈಟ್‌ ಮಾಡುತ್ತೇನೆ ಎಂದು ಈ ಹಿಂದೆ ರಾಜಕಾರಣಿ ಹೇಳಿದಂತೆ ನಡೆದುಕೊಂಡಿದ್ದಾರೆ ಎಂದು ಸಂಬರಗಿ ಕಿಡಿಕಾರಿದ್ದಾರೆ. 

ಕ್ಷುಲ್ಲಕ ಕಾರಣ ನೀಡಿ ಬಿಗ್‌ ಬಾಸ್‌ ವಿರುದ್ಧ ಕ್ರಮ

ಸರ್ಕಾರವು ಕ್ಷುಲ್ಲಕ ಕಾರಣ ನೀಡಿ ಬಿಗ್‌ ಬಾಸ್‌ ವಿರುದ್ಧ ಕ್ರಮಕೈಗೊಂಡಿದೆ. ಇದು ಕನ್ನಡ ಮನೋರಂಜನಾ ವಲಯವು ತಲೆ ತಗ್ಗಿಸಬೇಕಾದ ಸಂಗತಿ. ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ಕೊಟ್ಟ 30 ದಿನಗಳವರೆಗೂ ಅವಕಾಶ ನೀಡಲಾಗುತ್ತದೆ. ಆದರೆ, ಸರ್ಕಾರವು ದೆಹಲಿಯಲ್ಲಿರುವ ಕರ್ನಾಟಕ ಮೂಲದ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗೆ ಸಂದೇಶ ನೀಡುವ ಉದ್ದೇಶದಿಂದ ಈ ಕೃತ್ಯ ಮಾಡಿದೆ ಎಂದು ಹೇಳಿದ್ದಾರೆ.

The sudden halt of Bigg Boss Kannada Season 12 after the Ramnagara district administration sealed Jalewood Studios has now taken a political turn. Former contestant Prashanth Sambargi has alleged that the action was a politically motivated move targeting actor Sudeep and certain JDS leaders close to the studio owners.