ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್ನದಲ್ಲಿ 1,800 ಗ್ರಾಂ ಗುಳುಂ ; ಇನ್ಸ್ ಪೆಕ್ಟರ್ ಹಾಗೂ ಸಿಬಂದಿ ವಿರುದ್ಧ ಕಳ್ಳತನ ಆರೋಪ, ಪೊಲೀಸರಿಂದಲ್ಲೇ ಕಳ್ಳ ಪೊಲೀಸ್ ಆಟ!

08-10-25 09:21 am       Bangalore Correspondent   ಕರ್ನಾಟಕ

ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ಚಿನ್ನ ರಿಕವರಿ ಮಾಡಿದ್ದರೂ ಅವನ್ನು ವಾರಸುದಾರರಿಗೆ ಹಿಂದಿರುಗಿಸದ ಆರೋಪದ ಹಿನ್ನಲೆ ಸೂರ್ಯನಗರ ಪೊಲೀಸ್ ಇನ್ಸ್​ಪೆಕ್ಟರ್​ ಮತ್ತು ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿದೆ. 

ಬೆಂಗಳೂರು, ಅ 07 : ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನ ಬಂಧಿಸಿ ಅವರಿಂದ ಚಿನ್ನ ರಿಕವರಿ ಮಾಡಿದ್ದರೂ ಅವನ್ನು ವಾರಸುದಾರರಿಗೆ ಹಿಂದಿರುಗಿಸದ ಆರೋಪದ ಹಿನ್ನಲೆ ಸೂರ್ಯನಗರ ಪೊಲೀಸ್ ಇನ್ಸ್​ಪೆಕ್ಟರ್​ ಮತ್ತು ಸಿಬ್ಬಂದಿ ಮೇಲೆಯೇ ದೂರು ದಾಖಲಾಗಿದೆ. 

ಕೇಂದ್ರ ವಲಯ ಐಜಿ ಲಾಬೂರಾಮ್​ ಅವರಿಗೆ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ವೆಂಕಟಾಚಲಪತಿ ಈ ಬಗ್ಗೆ ದೂರು ನೀಡಿದ್ದು, ಕಂಪ್ಲೇಂಟ್​ ಆಧರಿಸಿ ಇನ್ಸ್​ಪೆಕ್ಟರ್​ ಸಂಜೀವ್ ಕುಮಾರ್ ಮಹಾಜನ್ ವಿರುದ್ಧ ಹೆಚ್ಚುವರಿ ಎಸ್ಪಿ ನೇತೃತ್ವದ ತನಿಖೆಗೆ ಸೂಚಿಸಲಾಗಿದೆ.

10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿದ್ದ ತಮಿಳುನಾಡು ಮೂಲದ ಕುಖ್ಯಾತ ಸುಧಾಕರನ್ ಮತ್ತು ಗ್ಯಾಂಗ್​ ನ ಸಂಜೀವ್ ಕುಮಾರ್ ಬಂಧಿಸಿದ್ದರು. ಕಳ್ಳರ ಜೊತೆ ಚಿನ್ನ ಖರೀದಿಸಿದ್ದ ಆರೋಪಿಗಳೂ ಸಿಕ್ಕಿದ್ದರು. ಆದರೆ ಆರೋಪಿಗಳು ಕದ್ದಿದ್ದ ಸುಮಾರು 2 ಕೆ.ಜಿ. ಚಿನ್ನದ ಪೈಕಿ 200 ಗ್ರಾಂಗಳಷ್ಟನ್ನು ಮಾತ್ರ ಸರ್ಕಾರಕ್ಕೆ ಮತ್ತು ಚಿನ್ನ ಕಳೆದುಕೊಂಡವರಿಗೆ ತೋರಿಸಲಾಗಿದೆ. ಉಳಿದಿದ್ದನ್ನುಇನ್ಸ್​ಪೆಕ್ಟರ್​ ಮತ್ತು ಸಿಬ್ಬಂದಿಯೇ ಹಂಚಿಕೊಂಡಿರೋದಾಗಿ ದೂರಲ್ಲಿ ಆರೋಪಿಸಲಾಗಿದೆ.

In a shocking case of alleged corruption within the police force, a complaint has been filed against Suryanagar Police Inspector Sanjeev Kumar Mahajan and his staff for misappropriating 1.8 kilograms of gold recovered during a theft investigation.