ಬ್ರೇಕಿಂಗ್ ನ್ಯೂಸ್
09-10-25 12:57 pm Bangalore Correspondent ಕರ್ನಾಟಕ
ಬೆಂಗಳೂರು, ಅ.9 : ಬಿಗ್ ಬಾಸ್ ನಿಲ್ಲಿಸಿದ ಸರ್ಕಾರದ ನಡೆಗೆ ವ್ಯಾಪಕ ಟೀಕೆ, ಡಿಸಿಎಂ ಡಿಕೆಶಿಯಿಂದಾಗಿ ನಿಲ್ಲಿಸಿದ್ದೆಂಬ ಟಾಂಗ್ ಬೆನ್ನಲ್ಲೇ ರಾಜ್ಯ ಸರ್ಕಾರ ಬಿಡದಿಯ ಜಾಲಿವುಡ್ ಸ್ಟುಡಿಯೋಕ್ಕೆ ಹಾಕಿದ್ದ ಬೀಗವನ್ನು ತೆರೆಸಿದೆ. ಅಧಿಕಾರಿಗಳು ಬೀಗ ತೆರೆದಿದ್ದು, ಬಿಗ್‌ಬಾಸ್ ಶೂಟಿಂಗ್ ಮುಂದುವರಿಸಲು ಅನುಮತಿ ನೀಡಿದ್ದಾರೆ.
ಅಧಿಕಾರಿಗಳು ಬೀಗ ತೆರೆಯುತ್ತಲೇ ಅಲ್ಲಿಯೇ ಪಕ್ಕದಲ್ಲಿ ಇರಿಸಲಾಗಿದ್ದ ಎಲ್ಲ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಮರಳಿದ್ದು, ಆಟವನ್ನು ಮತ್ತೆ ಆರಂಭಿಸಿದ್ದಾರೆ. ಇದೇ ವೇಳೆ ಕಲರ್ಸ್ ಕನ್ನಡ ವಾಹಿನಿಯು ಬಿಗ್‌ಬಾಸ್ ಎಪಿಸೋಡ್ ಬಗ್ಗೆ ಪ್ರೋಮೊ ಬಿಡುಗಡೆ ಮಾಡಿದ್ದು, ಬಿಗ್‌ಬಾಸ್ ಶೋ ಎಂದಿನಂತೆ ಮುಂದುವರಿಯುತ್ತದೆ ಎಂದು ಹೇಳಿದೆ. ಪ್ರೋಮೋದಲ್ಲಿ ಖಾಲಿ ಇರುವ ಬೆಡ್ ರೂಂ, ಕಿಚನ್, ಲಿವಿಂಗ್ ರೂಂ, ಹೊರಗಡೆಯ ಏರಿಯಾಗಳನ್ನು ತೋರಿಸಲಾಗಿದ್ದು, ಕೊನೆಯಲ್ಲಿ ‘ಎಂದಿನಂತೆ ಅದೇ ಸಮಯದಲ್ಲಿ, ಬಿಗ್‌ಬಾಸ್ ಕನ್ನಡ ರಾತ್ರಿ 9:30ಕ್ಕೆ ಪ್ರಸಾರ ಎಂದು ಖಡಕ್ ಧ್ವನಿಯಲ್ಲಿ ತಿಳಿಸಲಾಗಿದೆ.
ನಟ್, ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದ ಡಿಕೆಶಿ
ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಇಂಡಸ್ಟ್ರಿಯ ನಟ್, ಬೋಲ್ಟ್ ಟೈಟ್ ಮಾಡಿಸ್ತೀನಿ ಎಂದು ಹೇಳಿದ್ದು ಚರ್ಚೆಗೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿ ನಾವೂ ನಟ್, ಬೋಲ್ಟ್ ನೋಡಿಕೊಳ್ತೀವಿ ಎಂದು ಟಾಂಗ್ ನೀಡಿದ್ದರು. ನಿನ್ನೆ ಬಿಗ್ ಬಾಸ್ ಮನೆಯ ತ್ಯಾಜ್ಯವನ್ನು ಹಾಗೇ ಹೊರಕ್ಕೆ ಬಿಡಲಾಗುತ್ತಿದೆ ಎಂಬ ಕ್ಷುಲ್ಲಕ ವಿಚಾರ ಮುಂದಿಟ್ಟು ಶೋ ನಡೆಯುತ್ತಿದ್ದ ಸ್ಟುಡಿಯೋಗೆ ಬೀಗ ಹಾಕಲಾಗಿತ್ತು. ಈ ಬಗ್ಗೆ ಜೆಡಿಎಸ್, ಬಿಜೆಪಿ ನಾಯಕರು, ಇದಕ್ಕೆ ಡಿಕೆಶಿ ಅವರೇ ಕಾರಣ ಎಂದು ಟೀಕೆ ಮಾಡಿದ್ದರು. ಸುದೀಪ್ ಮೇಲಿನ ಕೋಪದಲ್ಲಿ ಬಿಗ್ ಬಾಸ್ ನಿಲ್ಲಿಸಿದ್ದಾರೆಂದು ಹೇಳಿದ್ದರು.
ಬೀಗ ಓಪನ್ ಮಾಡಲು ಡಿಸಿಗೆ ಸೂಚಿಸಿದ ಡಿಕೆಶಿ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿ, ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಗ್‌ಬಾಸ್ ನಡೆಯುವ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿದೆ. ಆದರೆ ಇಲ್ಲಿ ಖಾಸಗಿಯವರು ಹೂಡಿಕೆ ಮಾಡಿರುತ್ತಾರೆ, ಉದ್ಯೋಗ ನಡೆಯುವುದು ಮುಖ್ಯ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು. ಇದಾಗುತ್ತಲೇ
ನಿನ್ನೆ ರಾತ್ರಿ ಜಾಲಿವುಡ್ ಸ್ಟುಡಿಯೋ ಪ್ರತಿನಿಧಿಗಳು ಡಿಕೆಶಿಯನ್ನು ಭೇಟಿಯಾಗಿದ್ದು ಓಪನ್ ಮಾಡಲು ಮನವಿ ನೀಡಿದ್ದಾರೆ. ಈ ವೇಳೆ ಪಿಸಿಬಿ ಅಧ್ಯಕ್ಷ ನರೇಂದ್ರಸ್ವಾಮಿ ಜೊತೆಯೂ ಡಿಕೆಶಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೋರ್ಟ್ ವಿಚಾರ ಕೋರ್ಟ್‌ನಲ್ಲೇ ನಡೆಯಲಿ. ಆದರೆ ಜಾಲಿವುಡ್ ಸಿಬ್ಬಂದಿಗೆ ನೋಟಿಸ್ ನೀಡಿದರೂ ಪ್ರತಿಕ್ರಿಯೆ ಕೊಡದಷ್ಟು ಉದ್ದಟತನ ತೋರಿದ್ದಾರೆ ಎಂದು ನರೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ, ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತಾರೆ. ಬಿಗ್‌ಬಾಸ್‌ನಂತಹ ದೊಡ್ಡ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಬೇಡ ಎಂದು ಡಿಕೆಶಿ ಮನವೊಲಿಕೆ ಮಾಡಿದ್ದಾರೆ. ಮನವೊಲಿಕೆಯ ಬೆನ್ನಲ್ಲೇ ನೀವೇ ತೀರ್ಮಾನ ಮಾಡಿ ಎಂದು ಡಿಕೆಶಿಗೆ ನರೇಂದ್ರ ಸ್ವಾಮಿ ಹೇಳಿದ್ದು ಕೊನೆಗೆ ಡಿಕೆಶಿ, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಕರೆ ಮಾಡಿ ಜಾಲಿವುಡ್ ಸ್ಟುಡಿಯೋದಲ್ಲಿರುವ ಬಿಗ್ ಬಾಸ್ ಮನೆಯನ್ನು ಓಪನ್ ಮಾಡಲು ಸೂಚನೆ ನೀಡಿದ್ದಾರೆ.
Following widespread criticism over the suspension of the Bigg Boss Kannada show, the Karnataka government has reopened the Jalewood Studio in Bidadi, allowing the shooting to resume. Authorities unlocked the premises on Wednesday, enabling all 17 contestants to return to the Bigg Boss house and restart the game.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am