ಬ್ರೇಕಿಂಗ್ ನ್ಯೂಸ್
10-10-25 12:06 pm Bangalore Correspondent ಕರ್ನಾಟಕ
ಬೆಂಗಳೂರು, ಅ.10 : ನವೆಂಬರ್ ಕ್ರಾಂತಿಯ ಗುಮ್ಮ ಚರ್ಚೆಯಾಗುತ್ತಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಸಂಪುಟ ಸರ್ಜರಿಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಸಂಪರ್ಕಿಸಿದ್ದ ಸಿದ್ದರಾಮಯ್ಯ ಸಂಪುಟ ಸರ್ಜರಿ ಬಗ್ಗೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆ ಬಿರುಸುಗೊಂಡಿದೆ.
ಬಿಹಾರ ಚುನಾವಣೆಗೆ ಮುಗಿದ ಕೂಡಲೇ ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ಸಂಪುಟ ಪುನಾರಚನೆ ಆಗಬಹುದು. ಕನಿಷ್ಠ 12 ಹಾಲಿ ಸಚಿವರನ್ನು ಕೈಬಿಟ್ಟು ಅವರಿಗೆ ಪಕ್ಷದ ಜವಾಬ್ದಾರಿ ನೀಡಲು ಯೋಜನೆ ಹಾಕಲಾಗಿದೆ. ಹೈಕಮಾಂಡ್ ಮಟ್ಟದಲ್ಲೇ ಇಂತಹ ಪ್ರಸ್ತಾಪವಿದ್ದು, ಸಿಎಂ ಸಿದ್ದರಾಮಯ್ಯ ಅವರೂ ಸಂಪುಟ ಪುನಾರಚನೆಯನ್ನು ಎದುರು ನೋಡುತ್ತಿದ್ದಾರೆ. ಸಂಪುಟ ಪುನಾರಚನೆ ಆದಲ್ಲಿ ಸಿಎಂ ಬದಲಾವಣೆ ಎಂಬ ಗುಮ್ಮ ದೂರಕ್ಕೆ ಹೋದೀತು ಎಂಬ ಲೆಕ್ಕಾಚಾರವೂ ಇದೆ.
ಸರಕಾರಕ್ಕೆ ಎರಡೂವರೆ ವರ್ಷ ತುಂಬುವ ಹೊತ್ತಿಗೆ ಸಂಪುಟ ಪುನಾರಚನೆ ಕೈಗೊಳ್ಳಬೇಕು ಎಂಬುದು ಸಿಎಂ ಬೆಂಬಲಿಗರ ಅಹವಾಲು. ಈ ಕುರಿತು ಇತ್ತೀಚೆಗೆ ಒಂದೆರಡು ಬಾರಿ ಹೈಕಮಾಂಡ್ ಜೊತೆಗೆ ಸಮಾಲೋಚಿಸಲು ಸಿಎಂ ಮುಂದಾಗಿದ್ದರೂ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಿಹಾರ ಚುನಾವಣೆ ಸಿದ್ಧತೆಯಲ್ಲಿ ವ್ಯಸ್ತರಾಗಿದ್ದ ಅವರು ಸ್ವಲ್ಪ ಸಮಯ ಕಾಯುವಂತೆ ಸಂದೇಶ ನೀಡಿದ್ದರು. ಈಗ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಿಎಂ ಸಿದ್ದರಾಮಯ್ಯ ಫೋನ್‌ನಲ್ಲಿ ಮಾತನಾಡಿದ್ದು ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿ ಸಮಾಲೋಚಿಸಿದ್ದಾರೆ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ಪುನಾರಚನೆ ಕೈಗೊಳ್ಳಬಹುದು. ಅದಕ್ಕೆ ಮುನ್ನ ದಿಲ್ಲಿಗೆ ಬಂದು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ. ಈ ನಿಟ್ಟಿನಲ್ಲಿ ಸಮಯ ನಿಗದಿ ಪಡಿಸುವುದಾಗಿ ವೇಣುಗೋಪಾಲ್ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪುಟ ಪುನಾರಚನೆಯ ನಿರೀಕ್ಷೆ ಗರಿಗೆದರಿದೆ. ರಾಜ್ಯ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂಬ ವದಂತಿಗಳ ನಡುವೆಯೇ ಸಂಪುಟ ಸರ್ಜರಿಯ ವಿಚಾರ ಮುನ್ನೆಲೆಗೆ ಬಂದಿರುವುದು ವಿಶೇಷ. ಸಂಪುಟ ಪುನಾರಚನೆಯಾಗಲಿದೆ ಎಂಬ ವಿಷಯ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅನೇಕ ಆಕಾಂಕ್ಷಿಗಳು ಚುರುಕಾಗಿದ್ದಾರೆ. ಈ ಬಾರಿ ತಮಗೆ ಸಚಿವ ಸ್ಥಾನ ಖಚಿತವೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿ.ನಾಗೇಂದ್ರ ಹಾಗೂ ಕೆ.ಎನ್. ರಾಜಣ್ಣ ರಾಜಿನಾಮೆ ಬಳಿಕ ಸಂಪುಟದಲ್ಲಿ ಎರಡು ಸ್ಥಾನ ಖಾಲಿಯಿದೆ. ಇನ್ನು 12 ಜನರಿಗೆ ಕೊಕ್ ಕೊಟ್ಟರೆ ಹೊಸದಾಗಿ 14 ಮಂದಿಗೆ ಅವಕಾಶ ನೀಡಬಹುದಾಗಿದೆ.
ಸಂಪುಟ ಸರ್ಜರಿ ಉದ್ದೇಶಕ್ಕಾಗಿ ಹಾಲಿ ಸಚಿವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಅದರ ಆಧಾರದಲ್ಲಿ ಪುನಾರಚನೆ ಕೈಗೊಳ್ಳಲಾಗುತ್ತದೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ. ಪ್ರಾದೇಶಿಕತೆ, ಸಾಮಾಜಿಕ ನ್ಯಾಯದಡಿ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯವೂ ಇದೆ. ಹಾಗಾಗಿ ಕೇವಲ ಮೌಲ್ಯಮಾಪನ ಇದಕ್ಕೆ ಮಾನದಂಡವಲ್ಲ. ಎರಡೂವರೆ ವರ್ಷ ಸಚಿವರಾಗಿ ಕಾರ್ಯ ನಿರ್ವಹಿಸಿದವರಿಗೆ ಪಕ್ಷದಲ್ಲಿ ಪ್ರಮುಖ ಹೊಣೆ ವಹಿಸಲಾಗುತ್ತದೆ ಎಂದು ಸರಕಾರದ ಮೂಲಗಳು ಹೇಳುತ್ತವೆ.
ನವೆಂಬರ್ ಬಳಿಕ ಸಿಎಂ ಸ್ಥಾನಕ್ಕೇರುವ ತವಕದಲ್ಲಿರುವ ಡಿಸಿಎಂ ಡಿಕೆಶಿ ಮಾತ್ರ, ಸಂಪುಟದಲ್ಲಿ ಬದಲಾವಣೆ ನನಗೇನೂ ಗೊತ್ತಿಲ್ಲ. ಸಿಎಂ ಅವರಿಗೆ ಬಿಟ್ಟದ್ದು. ಅವರೇ ತೀರ್ಮಾನಿಸುತ್ತಾರೆ. ಕೇಳದರೆ ಸಲಹೆ ನೀಡುತ್ತೇನೆ ಎಂದಿದ್ದಾರೆ. ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರು ಅ.13ರಂದು ಎಲ್ಲ ಸಚಿವರೊಂದಿಗೆ ಡಿನ್ನರ್ ನಡೆಸಲು ಮುಂದಾಗಿದ್ದಾರೆ. ಕೆಲವರನ್ನು ಸಂಪುಟದಿಂದ ತೆಗೆಯುವುದು ಖಾತ್ರಿಯಾಗಿದ್ದರಿಂದಲೋ ಏನೋ ಸಿಎಂ ದಿಢೀರ್ ಆಗಿ ಡಿನ್ನರ್ ನೆಪದಲ್ಲಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
Even as political circles buzz with talk of a “November Revolution” in Karnataka, Chief Minister Siddaramaiah is reportedly preparing for a major cabinet reshuffle. According to sources, he has discussed the matter with AICC General Secretary K.C. Venugopal, and the Congress high command is expected to finalize the plan after the Bihar elections. At least 12 existing ministers may be dropped and given party responsibilities, making way for new faces in the cabinet.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
06-12-25 04:58 pm
HK News Desk
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
Nationwide Census: ಎರಡು ಹಂತಗಳಲ್ಲಿ ದೇಶಾದ್ಯಂತ ಜ...
03-12-25 07:19 pm
Jawaharlal Nehru, Babri Masjid, Sardar Patel,...
03-12-25 07:14 pm
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm