ಬ್ರೇಕಿಂಗ್ ನ್ಯೂಸ್
10-10-25 07:06 pm HK News Desk ಕರ್ನಾಟಕ
ಹಾಸನ, ಅ.10 : ಮುಂಬರುವ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್ಲ ಎಂದು ಬ್ರಹ್ಮಾಂಡ ಗುರೂಜಿ ಭಯಾನಕ ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಹಾಸನಾಂಬೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಹ್ಮಾಂಡ ಗುರೂಜಿ, 'ಈ ವರ್ಷ ಹಾಸನಾಂಬೆಗೆ ಕೊನೆಯ ವರ್ಷವಾಗಿದ್ದು, ಮುಂದಿನ ವರ್ಷದಿಂದ ಅಮ್ಮನವರ ಸಾನಿಧ್ಯ ಇಲ್ಲಿ ಇರಲ್ಲ' ಎಂದು ಹೇಳಿದ್ದಾರೆ.
'ಹಾಸನಾಂಬೆ ದರ್ಶನಕ್ಕೆ ಮುಂದಿನ ದಿನಗಳಲ್ಲಿ ಅಡಚಣೆಯಾಗುವ ಸಾಧ್ಯತೆಯಿದೆ. 2025 ರಿಂದ 2032ರ ಅವಧಿಯಲ್ಲಿ ಸಿದ್ದೇಶ್ವರನ ಕೃಪೆಯಿಂದ ‘‘ಘಟಪ್ರಭ ಪರಿವರ್ತನೆ’’ ಆಗಲಿದೆ. ಈ ಸಮಯದಲ್ಲಿ ಏಳು ಜನ ಅಕ್ಕ-ತಂಗಿಯರು ಸೇರಲಿದ್ದಾರೆ. ಈ ಕೊನೆಯ ಅವಧಿಯಲ್ಲಿ ದರ್ಶನ ಪಡೆದವರು ಸಂತೋಷ ಪಡುತ್ತಾರೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ.

'ಸಿದ್ದೇಶ್ವರನ ಕೃಪೆಯಿಂದ ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯಲಿವೆ. ರೇವಣ ಸಿದ್ದೇಶ್ವರ, ಹಾಸನದ ಸಿದ್ದೇಶ್ವರ, ಜೇನುಕಲ್ ಸಿದ್ದೇಶ್ವರ ಸೇರಿದಂತೆ ವಿವಿಧ ಸಿದ್ದೇಶ್ವರರ ಶಿವನ ಶಕ್ತಿ ಒಂದು ಕಡೆ ಸೇರಲಿದೆ. ವಿಶೇಷವಾಗಿ 2025 ರಿಂದ 2032ರ ಅವಧಿಯಲ್ಲಿ ಈ ಬದಲಾವಣೆಗಳು ಘಟಿಸಲಿವೆ. ಸಿದ್ದೇಶ್ವರ ಸಾನಿಧ್ಯ ತೆಗೆದಾಗ, ಇಲ್ಲಿ ಸೇರಿರುವ ಏಳು ಜನ ಅಕ್ಕ-ತಂಗಿಯರು ಸೇರಿ ‘‘ಘಟಪ್ರಭ ಪರಿವರ್ತನೆ’’ ಎಂಬ ದೊಡ್ಡ ಬದಲಾವಣೆ ಆಗಲಿದೆ ಎಂದರು.
'ಜಗತ್ಪ್ರಸಿದ್ದ ಹಾಸನಾಂಬೆಯ ವೈಶಿಷ್ಟ್ಯತೆಯನ್ನು ಈ ಕೊನೆಯ ಅವಧಿಯಲ್ಲಿ ನಾವು ದರ್ಶನ ಮಾಡಿದೆವಲ್ಲ ಎಂದು ಸಂತೋಷ ಪಡುತ್ತೇವೆ. ಮುಂದಿನ ಅವಕಾಶಗಳು ನಮಗಲ್ಲ. ಯಾವ ಜನರಿಗೂ ಹಾಸನಾಂಬೆ ದರ್ಶನ ಆಗುವ ಅವಕಾಶಗಳು ಕಡಿಮೆ, ಅಡಚಣೆಗಳು ಎಷ್ಟು ಬರುತ್ತವೆ ಎಂಬುದನ್ನು ನೀವೇ ಮುಂದೆ ನೋಡುತ್ತೀರಿ' ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು.
ಇದೇ ವೇಳೆ ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ ಬ್ರಹ್ಮಾಂಡ ಗುರೂಜಿ, ಜಗತ್ತಿಗೆ ಮತ್ತೊಂದು ಗಂಡಾಂತರ ಕಾದಿದೆ ಎಂದು ಭವಿಷ್ಯ ನುಡಿದರು. 'ಈ ವರ್ಷದಿಂದ ಮಹಿಳೆಯರು ತಮ್ಮ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
Astrologer and spiritual seer Brahmanda Guruji has made a shocking prediction stating that the divine presence of Goddess Hasanamba will cease to exist in the coming years. Speaking to the media after seeking darshan at the Hasanamba Temple in Hassan, Guruji claimed that this year marks the last darshan of the goddess, as her presence will fade away from next year onward.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
14-08-26 09:09 pm
HK News Staffer
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm