ಬ್ರೇಕಿಂಗ್ ನ್ಯೂಸ್
23-10-25 12:46 pm Bangalore Correspondent ಕರ್ನಾಟಕ
ಬೆಂಗಳೂರು, ಅ 24 : ಬೆಂಗಳೂರಿನ ಪಿಜಿಯೊಂದರಲ್ಲಿ ಆಂಧ್ರ ಮೂಲ ಯುವಕ ತಿಗಣೆ ಔಷಧಿ ದುರ್ವಾಸನೆಯಿಂದಾಗಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಮಾಹಿತಿ ನೀಡದೆ ಔಷಧಿ ಸಿಂಪಡಿಸಿದ ಪಿಜಿ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶದ ತಿರುಪತಿ ಮೂಲದ ಪವನ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಅಶ್ವಥ್ ನಗರದಲ್ಲಿರುವ ಬಿಎಸ್ಆರ್ ಪಿಜಿಯಲ್ಲಿ ತಂಗಿದ್ದ. ಪಿಜಿಯಲ್ಲಿ ತಿಗಣೆ ಹೆಚ್ಚಾಗಿದ್ದ ಕಾರಣ ಔಷಧಿ ಸಿಂಪಡನೆ ಮಾಡಲಾಗಿತ್ತು. ಇದನ್ನು ಪಿಜಿ ವಾಸಿಗಳಿಗೆ ತಿಳಿಸದೆ ನಿರ್ಲಕ್ಷ್ಯಿಸಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ. ಸದ್ಯ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಯುಡಿಆರ್ (ಅಸ್ವಾಭಾವಿಕ ಸಾವು) ಪ್ರಕರಣ ದಾಖಲಾಗಿದೆ.

ಪೋಷಕರ ಅಳಲು;
ಪ್ರಾಣ ಕಳ್ಕೊಳೋದಿಕ್ಕೆ ಆಂಧ್ರದಿಂದ ಬೆಂಗಳೂರಿಗೆ ಬರ್ಬೇಕಾಯಿತಾ? ಮಗನನ್ನು ಕೊಂದೇ ಬಿಟ್ಟರು ಎಂದು ಪೊಲೀಸ್ ಠಾಣೆ ಮುಂದೆ ಪೋಷಕರು ಗೋಳಾಡಿದ್ದಾರೆ. ಘಟನೆ ನಡೆದ ದಿನ ಮಗ ಬೆಳಿಗ್ಗೆ ಕರೆ ಮಾಡಿ, ಅಪ್ಪ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎಂದು ಕೊನೆ ಬಾರಿ ಕರೆ ಮಾಡಿದ. ಅಲ್ಲಿಂದ ನಾವು ಎದ್ನೋ ಬಿದ್ನೋ ಎಂದು ಬರೋ ಹೊತ್ತಿಗೆ ಪ್ರಾಣ ಕಳೆದುಕೊಂಡಿದ್ದಾನೆ ಎಂದರು.
ಪವನ್ಗೆ ತಿಗಣೆ ಔಷಧಿ ಸಿಂಪಡಣೆಯಿಂದ ಉಸಿರಾಟದ ಸಮಸ್ಯೆಯಾಗಿದ್ದ ವೇಳೆ ಪಿಜಿಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಅವನ ಸಹಾಯಕ್ಕೂ ಯಾರು ಬಂದಿಲ್ಲ ಎನ್ನಲಾಗಿದೆ. ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲಾಗಲೇ ನಮ್ಮ ಮಗ ಪ್ರಾಣ ಬಿಟ್ಟಿದ್ದ. ಪಿಜಿ ಆಡಳಿತದ ಸಂಪೂರ್ಣ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದರು.
ಸರ್ಕಾರ ಏನು ನ್ಯಾಯ ಕೊಡುತ್ತೆ?
ಕರ್ನಾಟಕದಲ್ಲಿ ಬೆಂಗಳೂರಲ್ಲಿ ನನ್ನ ಮಗನನ್ನು ಸಾಯಿಸಿಬಿಟ್ಟಿದರು. ಪ್ರಾಣ ಕಳೆದುಕೊಳ್ಳು ನನ್ನ ಮಗ ಆಂಧ್ರದಿಂದ ಬೆಂಗಳೂರಿಗೆ ಬಂದನಾ. ಮಗ ಸತ್ತು ಇಷ್ಟು ದಿನವಾಯಿತು ಪಿಜಿ ಅವರು ನಮ್ಮ ಜೊತೆ ಮಾತನಾಡಿಲ್ಲ. ಮೀಡಿಯೇಟರ್ಗಳು ಬಂದು ಏನೇನೋ ಹೇಳಿ ಹೋಗುತ್ತಿದ್ದಾರೆ. ಕರ್ನಾಟಕ ಸರ್ಕಾರ ಏನು ಮಾಡುತ್ತೋ ಎನೋ ಮಾಡಲಿ. ಈ ಕರ್ನಾಟಕಸರ್ಕಾರ ನನಗೆ ಯಾವುದೇ ನ್ಯಾಯ ದಕ್ಕಿಸಿ ಕೊಡ್ತಿಲ್ಲ ಎಂದು ಪೊಲೀಸ್ ಠಾಣೆ ಮುಂದೆ ತೆಲುಗು ಭಾಷೆಯಲ್ಲಿ ಅಮ್ಮ ಮಾತಾನಾಡಿ ಜೋರಾಗಿ ಅತ್ತು, ಗೋಳಾಡಿದ್ದಾರೆ
A tragic incident occurred in a Bengaluru PG accommodation where a student from Andhra Pradesh reportedly died due to suffocation caused by pesticide fumes. The deceased, identified as Pavan from Tirupati, was staying at a BSR PG in Ashwath Nagar. The PG management had sprayed pesticides to control bedbugs but allegedly failed to inform the residents beforehand.
08-12-25 10:39 pm
Bangalore Correspondent
DK Shivakumar, Yathindras: ಡಿಸಿಎಂ ಡಿಕೆಶಿ ತಮಗೊ...
08-12-25 06:58 pm
ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಕೆಎಸ್ ಸಿಎ ನೂತನ...
08-12-25 11:26 am
Gangavati Accident, Koppal: ಪ್ರಿ ವೆಡ್ಡಿಂಗ್ ಶೂ...
07-12-25 10:21 pm
Dog Attack: ಪಾದಚಾರಿಗಳ ಮೇಲೆ ಹುಚ್ಚುನಾಯಿ ದಾಳಿ ;...
07-12-25 10:17 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
08-12-25 10:11 pm
Mangalore Correspondent
Mangalore, Puttur, Mahesh Shetty Timarodi: ಪ್...
08-12-25 04:52 pm
ಬಂಡವಾಳ ಇಲ್ಲದೆ ಆದಾಯದ ಅವಕಾಶ ; ಎಸ್ಸೆಸ್ಸೆಲ್ಸಿ, ಪಿ...
08-12-25 01:42 pm
ಮುಂದುವರಿದ ಇಂಡಿಗೋ ಬಿಕ್ಕಟ್ಟು ; ಮಂಗಳೂರಿನಲ್ಲಿ ಡಿ....
08-12-25 11:23 am
ಉಡುಪಿ ಶ್ರೀಕೃಷ್ಣ ಮಠಕ್ಕೆ ಆಂಧ್ರಪ್ರದೇಶ ಡಿಸಿಎಂ ಪವನ...
07-12-25 10:45 pm
08-12-25 09:29 pm
Mangalore Correspondent
ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಜಾಲ ; ಸ...
06-12-25 09:52 pm
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm