ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲು ಮತಾಂತರ ಆಗಬೇಕೆಂದು ಒತ್ತಡ, ಬೆಂಗಳೂರಿನಲ್ಲಿ ಮುಸ್ಲಿಂ ಯುವಕನ ಲವ್ ಜಿಹಾದ್ 

25-10-25 09:33 pm       Bangalore Correspondent   ಕರ್ನಾಟಕ

ಪ್ರೀತಿಸುವ ನೆಪದಲ್ಲಿ ಹಿಂದೂ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗಬೇಕಿದ್ದರೆ ಮತಾಂತರ ಆಗಬೇಕೆಂದು ಮುಸ್ಲಿಂ ಯುವಕನೊಬ್ಬ ಒತ್ತಡ ಹೇರಿದ ಬಗ್ಗೆ ಎಚ್ ಎಸ್ ಆರ್ ಲೇಔಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿ ಪೊಲೀಸ್​ ದೂರು ನೀಡಿದ್ದು, ಮಹಮ್ಮದ್ ಇಶಾಕ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಬೆಂಗಳೂರು, ಅ.25 : ಪ್ರೀತಿಸುವ ನೆಪದಲ್ಲಿ ಹಿಂದೂ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗಬೇಕಿದ್ದರೆ ಮತಾಂತರ ಆಗಬೇಕೆಂದು ಮುಸ್ಲಿಂ ಯುವಕನೊಬ್ಬ ಒತ್ತಡ ಹೇರಿದ ಬಗ್ಗೆ ಎಚ್ ಎಸ್ ಆರ್ ಲೇಔಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಯುವತಿ ಪೊಲೀಸ್​ ದೂರು ನೀಡಿದ್ದು, ಮಹಮ್ಮದ್ ಇಶಾಕ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಇನ್ಸ್ಟಾಗ್ರಾಂ ಮೂಲಕ ಮೊಹಮ್ಮದ್ ಇಶಾಕ್ ಬಿನ್ ಅಬ್ದುಲ್ ರಸೂಲ್ ಎಂಬಾತ ಯುವತಿಗೆ ಪರಿಚಯವಾಗಿದ್ದು, ಬಳಿಕ ಪ್ರೀತಿಯಾಗಿ ಮಾರ್ಪಟ್ಟಿತ್ತು. 2024ರ ಅಕ್ಟೋಬರ್​ 30ರಂದು ಬೆಂಗಳೂರಿನ ಧಣಿಸಂದ್ರದಲ್ಲಿರುವ ಎಲಿಮೆಂಟ್ಸ್ ಮಾಲ್ ಹತ್ತಿರ ಇಬ್ಬರೂ ಭೇಟಿಯಾಗಿದ್ದು, ಮದುವೆ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲಿಂದ ಆತ ಯುವತಿಯನ್ನ ಖಾಸಗಿ ಲಾಡ್ಜ್​ ಗೆ ಕರೆದೊಯ್ದಿದ್ದು, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಇದೇ ರೀತಿ ಇಬ್ಬರೂ ಹಲವು ಬಾರಿ ಪರಸ್ಪರ ಲೈಂಗಿಕ ಕ್ರಿಯೆ ನಡೆಸಿದ್ದಾರೆ. 

ಆದರೆ ಮೊಹಮ್ಮದ್‌ ಇಶಾಕ್ ಹಲವು ಹುಡುಗಿಯರ ಜೊತೆಗೆ ಸಂಪರ್ಕದಲ್ಲಿ ಇರೋದು 2025ರ ಸೆಪ್ಟಂಬರ್​ ವೇಳೆಗೆ ಯುವತಿಗೆ ಗೊತ್ತಾಗಿದೆ. ಹೀಗಾಗಿ ತನ್ನನ್ನು ಕೂಡಲೇ ಮದುವೆಯಾಗುವಂತೆ ಬೇಡಿಕೆ ಇಟ್ಟಿದ್ದಾಳೆ. ಆದರೆ ಯುವಕ ಬೇರೆ ಬೇರೆ ನೆಪ ಹೇಳಿಕೊಂಡು ದಿನಗಳನ್ನು ದೂಡುತ್ತಿದ್ದ. ಇದೇ ವೇಳೆ, ಇಶಾಕ್ ಗೆ ಬೇರೆ ಮುಸ್ಲಿಂ ಹುಡುಗಿ ಜೊತೆ ನಿಶ್ಚಿತಾರ್ಥ ನಡೆದಿದೆ. ಇದನ್ನು ಪ್ರಶ್ನಿಸಿದಾಗ ನಿನ್ನ ದಾರಿ ನೀನು ನೋಡಿಕೋ.. ನನ್ನ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಲ್ಲಿ ತಿಳಿಸಲಾಗಿದೆ. 

ಇದೇ ವಿಚಾರವಾಗಿ ಸಂತ್ರಸ್ತ ಯುವತಿ ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದು, ಈ ವೇಳೆ ಇಶಾಕ್​ ಕುಟುಂಬದವರು ಕರೆ ಮಾಡಿದ್ದರು ಎನ್ನಲಾಗಿದೆ. ಸೂಸೈಡ್​ ಅಥವಾ ಕೇಸು ಮಾಡುವಂತಹ ದುಡುಕುತನ ಬೇಡ. ಪರಸ್ಪರ ಮಾತನಾಡಿ ಬಗೆಹರಿಸೋಣ ಎಂದಿದ್ದರು. ಆನಂತರ ಇಶಾಕ್ ಅಣ್ಣ ಮತ್ತು ಭಾವ ಬಂದು ಮದುವೆ ಆಗಬೇಕಂದರೆ ನೀನು ಇಸ್ಲಾಮಿಗೆ ಮತಾಂತರ ಆಗಬೇಕು. 40 ದಿನ ಸಮಯಾವಕಾಶ ಇರಲಿದ್ದು, ನಮಾಜ್​ ಮಾಡಲು ಕಲಿಯಬೇಕು. ಮೊದಲು ಮತಾಂತರ ಆಗು, ಆ ಬಳಿಕ ಮದುವೆ ಬಗ್ಗೆ ಮಾತಾಡೋಣ ಎಂದಿದ್ದರು. ಘಟನೆಯಿಂದ ನೊಂದಿರುವ ಯುವತಿ ಪೊಲೀಸ್ ದೂರು ನೀಡಿದ್ದು ಲವ್ ಜಿಹಾದ್ ನಡೆಸಿರುವ ಆರೋಪ ಕೇಳಿಬಂದಿದೆ.

A Muslim youth has been booked in Bengaluru on charges of cheating and religious coercion after allegedly pressuring a Hindu woman to convert to Islam to marry him. The incident came to light when the victim lodged a complaint at the HSR Layout Police Station against the accused, identified as Mohammed Ishaq Bin Abdul Rasool.