ಬ್ರೇಕಿಂಗ್ ನ್ಯೂಸ್
01-11-25 09:33 pm HK News Desk ಕರ್ನಾಟಕ
ಕಲಬುರಗಿ, ನ.1 : ಆರೆಸ್ಸೆಸ್ ನವರಷ್ಟು ಹೇಡಿಗಳು ಯಾರೂ ಇಲ್ಲ. ಅವರು ಯಾಕೆ ಇನ್ನೂ ರಿಜಿಸ್ಟ್ರೇಷನ್ ಮಾಡುತ್ತಿಲ್ಲ? ನೂರು ವರ್ಷ ಹೀಗೆ ಮುಂದುವರೆಸಿದ್ದಾರೆ ಅಂತ 101ನೇ ವರ್ಷವೂ ಹಾಗೆ ಬಿಡಲು ಆಗುತ್ತಾ ? ಪ್ರಧಾನಿ ಮೋದಿ ಆರೆಸ್ಸೆಸ್ ಅತಿದೊಡ್ಡ ಎನ್ ಜಿಓ ಅಂತ ಹೇಳುತ್ತಾರೆ, ಹಾಗಾದ್ರೆ ಅದರ ಬಗ್ಗೆ ಲೆಕ್ಕಪತ್ರ ಕೇಳಬಾರದಾ ಎಂದು ಸಚಿವ ಪ್ರಿಯಾಂಕ ಖರ್ಗೆ ಮತ್ತೆ ಪ್ರಶ್ನೆ ಮಾಡಿದ್ದಾರೆ.
ಅಂಬೇಡ್ಕರ್ ತಮ್ಮ ಕೊನೆಯ ಭಾಷಣದಲ್ಲಿ ಯಾರ್ಯಾರು ದೇಶದ್ರೋಹಿಗಳು ಎನ್ನುವ ಬಗ್ಗೆ
ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಜಾತಿ ಜಾತಿಗಳ ನಡುವೆ ಜಗಳ ಹಚ್ಚುವವರು, ಕೋಮುವಾದಿಗಳು, ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ದೂರ ಇಡ್ತಾರೆ. ಅಂತಹ ತತ್ವ ಸಿದ್ಧಾಂತಗಳು, ಸಂಘಟನೆಗಳು ದೇಶದ್ರೋಹಿಗಳು ಎಂದಿದ್ದಾರೆ. ಈಗಿನ ಸಂದರ್ಭದಲ್ಲಿ ಕೋಮು ವಿಷ ಬಿತ್ತುತ್ತಿರುವುದು ಯಾರು? ಅದು ಯಾರೇ ಇರಲಿ, ಯಾವುದೇ ಸಂಘಟನೆಗಳಿರಲಿ, ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಎಲ್ಲರನ್ನು ನಿಷೇಧ ಮಾಡಬೇಕು. ಜನರ ಆರ್ಥಿಕ ಸಾಮಾಜಿಕ ಅಭಿವೃದ್ಧಿಗೆ ಹಿನ್ನಡೆ ಆಗುವಂತಹ ತತ್ವಗಳು ಇರಬಾರದು.
ಸರ್ದಾರ್ ವಲ್ಲಭಭಾಯಿ ಪಟೇಲರು ಗೃಹ ಸಚಿವರಾಗಿದ್ದಾಗ ಆರೆಸ್ಸೆಸ್ ಬ್ಯಾನ್ ಮಾಡಿದ್ದರು. ನಂತರ ಅವರ ಕಾಲಿಗೆ ಬಿದ್ದು ನಾವು ರಾಷ್ಟ್ರಧ್ವಜಕ್ಕೆ ತಲೆಬಾಗ್ತೀವಿ ಅಂತ ಹೇಳಿ ನಿಷೇಧ ಹಿಂಪಡೆದುಕೊಂಡರು. ಈ ವಿಚಾರದಲ್ಲಿ ನಮ್ಮ ಪಕ್ಷದ ಸಿದ್ಧಾಂತ ಬಹಳ ಸ್ಪಷ್ಟವಾಗಿದೆ. ಮನುಸ್ಮೃತಿ ನಮ್ಮ ಸಂವಿಧಾನ ಆಗಬೇಕು ಎನ್ನುವುದು ಅವರ ಗುರಿ. ಹಾಗಾದ್ರೆ ಅದನ್ನು ಒಬ್ಬರಾದ್ರೂ ತಮ್ಮ ಮನೆಗಳಲ್ಲಿ ಏಕೆ ಪಾಲನೆ ಮಾಡುತ್ತಿಲ್ಲ ಹೇಳಲಿ. ಪ್ರಶ್ನೆ ಇರುವುದು ಬರೀ ಪಥ ಸಂಚಲನ ವಿಚಾರದ್ದು ಅಲ್ಲ. ಆರೆಸ್ಸೆಸ್ ಕಚೇರಿಗಳಿವೆ, ವಾಹನಗಳಿವೆ, ಮೋಹನ್ ಭಾಗ್ವತ್ ಅವರಿಗೆ ಸೆಕ್ಯೂರಿಟಿ ಕೊಟ್ಟಿದ್ದೀರಿ. ನಮ್ಮ ನಾಗರಿಕರ ತೆರಿಗೆ ಅವರ ಸೆಕ್ಯೂರಿಟಿಗೆ ಖರ್ಚು ಮಾಡುತ್ತಿದ್ದೀರಿ, ಯಾಕೆ ಖರ್ಚು ಮಾಡುತ್ತಿದ್ದೀರಿ ಅಂತ ಕೇಳಬಾರದಾ?
ನಾವು ನಮ್ಮ ಆಸ್ತಿ ವಿವರದ ಅಫಿಡವಿಟ್ ಸಲ್ಲಿಸದಿದ್ದರೆ ನೀವೇ ಪ್ರಶ್ನೆ ಮಾಡುತ್ತೀರಿ. ಯಾವುದೇ ರಿಜಿಸ್ಟರ್ ಏನ್ ಜಿಓಗೆ ದೇಣಿಗೆ ಎಲ್ಲಿಂದ ಬರುತ್ತೆ ಅಂತ ಕೇಳಲಾಗುತ್ತದೆ. ಆರ್ ಎಸ್ ಎಸ್ ನವರಿಗೆ ಯಾಕೆ ಈ ಮಾನದಂಡ ಇಲ್ಲ. ವಿದೇಶದಿಂದ ಸ್ವಯಂಸೇವಕರಿಗೆ ದುಡ್ಡು ಬರುತ್ತೆ ಅಂತಿದಾರೆ. ಹಾಗಾದ್ರೆ ಯಾರ್ ಕೊಡ್ತಾ ಇದ್ದಾರೆ ? ಯಾರ್ ತಗೋತಾ ಇದ್ದಾರೆ ? ಯಾವುದಕ್ಕೆ ಖರ್ಚು ಮಾಡ್ತಾ ಇದ್ದಾರೆ ? ಯಾರಿಗೂ ಗೊತ್ತಿಲ್ಲ. ಪ್ರಧಾನಿ ಮೋದಿ ಇದು ವಿಶ್ವದ ದೊಡ್ಡ ಎನ್ ಜಿಓ ಎಂದು ಕೆಂಪುಕೋಟೆಯಲ್ಲಿ ಹೇಳುತ್ತಾರೆ. ವಿಶ್ವದ ದೊಡ್ಡ ಸಂಘಟನೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಗೊತ್ತಾಗುವುದು ಬೇಡವಾ? ಇದನ್ನು ಕೇಳುವುದು ನಮ್ಮ ನಿಮ್ಮ ಹಕ್ಕಲ್ಲವಾ ? ಎಂದು ಪ್ರಶ್ನಿಸಿದ್ದಾರೆ.
Minister Priyank Kharge has once again launched a sharp attack on the Rashtriya Swayamsevak Sangh (RSS), questioning why the organization has not been registered even after a century of existence.
25-12-25 12:12 pm
HK News Desk
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
MLA Byrathi Basavaraj, Bikklu Shiva Murder Ca...
24-12-25 04:07 pm
ಗಾಳಿಯಲ್ಲಿ ಗುಂಡು ಹಾರಿಸಿ ಉಡಚಣ ಸ್ವಾಮೀಜಿ ರಂಪಾಟ ;...
22-12-25 11:09 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm