ಅಪ್ರಾಪ್ತ ಬಾಲಕಿಯರ ಮೇಲೆ ರೇಪ್ ಕೇಸ್ ; ಮುರುಘಾ ಶ್ರೀ ನಿರ್ದೋಷಿ ಎಂದ ಕೋರ್ಟ್, ನ್ಯಾಯಕ್ಕೆ ಜಯ ಸಿಕ್ಕಿದೆ ಎಂದ ಸ್ವಾಮೀಜಿ, ಬೇಸರ ವ್ಯಕ್ತಪಡಿಸಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ

26-11-25 05:53 pm       HK News Desk   ಕರ್ನಾಟಕ

ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದ ಮುರುಘಾ ಸ್ವಾಮೀಜಿ ಮೇಲಿನ ಆರೋಪವನ್ನು ಕೋರ್ಟ್ ನಿರಾಕರಿಸಿದೆ. 

ಚಿತ್ರದುರ್ಗ, ನ 26 : ಕೋಟೆನಾಡು ಚಿತ್ರದುರ್ಗದ ಮುರುಘಾ ಮಠದ ಮುರುಘಾ ಸ್ವಾಮೀಜಿ ಮೇಲಿನ ಆರೋಪವನ್ನು ಕೋರ್ಟ್ ನಿರಾಕರಿಸಿದೆ. 

ಪೋಕ್ಸೋ ಕೇಸ್‌ ಎದುರಿಸುತ್ತಿದ್ದ ಮುರುಘಾ ಸ್ವಾಮೀಜಿಗೆ ಚಿತ್ರದುರ್ಗ ಕೋರ್ಟ್ ರಿಲೀಫ್ ನೀಡಿದೆ. ಪ್ರಕರಣದಲ್ಲಿ ಮುರುಘಾಶ್ರೀ ನಿರ್ದೋಷಿ ಎಂದು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ಇದರೊಂದಿಗೆ ಸ್ವಾಮೀಜಿಗಷ್ಟೇ ಅಲ್ಲ, ಮಠದ ಭಕ್ತರಿಗೂ ಆತಂಕ ದೂರವಾಗಿದ್ದು, ಮಠದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಹಾಗಾದರೆ ಏನಿದು ಆರೋಪ? ಮುರುಘಾ ಮಠದ ಸ್ವಾಮೀಜಿ ಮೇಲೆ ಆರೋಪ ಮಾಡಿದ್ದು ಯಾರು? ಅಂದಿನಿಂದ ಇಂದಿನವರೆಗೆ ಏನೆಲ್ಲಾ ಆಯ್ತು? 

ಸ್ವಾಮೀಜಿ ಪರವಾಗಿ ಮೈಸೂರಿನ ಒಡನಾಡಿ ಸಂಸ್ಥೆ ಕೇಸ್ ದಾಖಲಿಸಿತ್ತು. ಇಬ್ಬರು ಹುಡುಗಿಯರ ಪರವಾಗಿ ಸಲ್ಲಿಸಲಾದ ಎಫ್‌ಐಆರ್‌ನಲ್ಲಿ ಶ್ರೀಗಳು ಒಂದೆರಡು ವರ್ಷಗಳ ಕಾಲ ತಮ್ಮ ಮೇಲೆ 'ಲೈಂಗಿಕ ದೌರ್ಜನ್ಯ' ಎಸಗಿದ್ದಾರೆ ಎಂದು ಆರೋಪಿಸಿದ್ದರು. ಶ್ರೀಗಳ ನಾಲ್ವರು ಸಹಚರರನ್ನು ಸಹ ಪ್ರಚೋದಿಸಿದ ಮತ್ತು ಪಿತೂರಿ ನಡೆಸಿದ ಆರೋಪ ಹೊರಿಸಲಾಯಿತು. ಈ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು.

ಶ್ರೀಗಳನ್ನು ಬಂಕಾಪುರ ಪಟ್ಟಣದಿಂದ ಗೃಹಬಂಧನಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಮಠದ ಆವರಣದಲ್ಲಿ ಕರೆತರಲಾಯಿತು. ಹುಡುಗಿಯರು ಸುಳ್ಳು ಆರೋಪವನ್ನು ಒಪ್ಪಿಕೊಂಡರೆ ಅಥವಾ ಪ್ರಕರಣದ ವಿರುದ್ಧ ಕಾನೂನುಬದ್ಧವಾಗಿ ಹೋರಾಡಿದರೆ ತಾವು ಇತ್ಯರ್ಥಪಡಿಸುವುದಾಗಿ ಶ್ರೀಗಳು ಘೋಷಿಸಿದರು. ಶ್ರೀಗಳು ಈ ವಿಷಯವನ್ನು "ತಮ್ಮ ವಿರುದ್ಧದ ದೊಡ್ಡ ಪಿತೂರಿ" ಎಂದು ಕರೆದರು ಮತ್ತು ಸತ್ಯವು ಶೀಘ್ರದಲ್ಲೇ ಬಹಿರಂಗಗೊಳ್ಳುತ್ತದೆ" ಎಂದು ಹೇಳಿದರು. ಸೆಪ್ಟೆಂಬರ್ ಆರಂಭದಲ್ಲಿ, ಶ್ರೀಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಧಿಕೃತವಾಗಿ ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ಇನ್ನು ತನಿಖಾಧಿಕಾರಿಗಳು ಸಾಕ್ಷಿಯನ್ನು ಕೊಡುವಲ್ಲಿ ಬಹಳಷ್ಟು ಎಡವಿದ್ದರು. ಆರೋಪಿಗಳನ್ನು ರಕ್ಷಿಸಲು ಸರಿಯಾದ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ನಾವು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆಯೇ ಷಡ್ಯಂತ್ರದ ಕೇಸ್‌ ಹಾಕಿದ್ದರು ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದ್ದಾರೆ.

ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಮಕ್ಕಳ ಧ್ವನಿಯನ್ನು ಸರ್ಕಾರ ಕೇಳಬೇಕಿತ್ತು. ಆದರೆ ಈ ಪ್ರಕರಣವನ್ನು ದುರ್ಬಲ ಮಾಡುತ್ತಲೇ ಬಂದಿದ್ದರು. ವಿಚಾರಣಾ ಹಂತದಲ್ಲೇ ಈ ಪ್ರಕರಣವನ್ನು ದುರ್ಬಲ ಮಾಡಿದ್ದು ಗೊತ್ತಾಗಿತ್ತು. ಹಲವಾರು ಲೋಪಲೋಷವನ್ನು ಎತ್ತಿದ ನಮ್ಮ ಮೇಲೆಯೇ ಷಡ್ಯಂತ್ರ ಕೇಸ್‌ ಹಾಕಲಾಗಿತ್ತು ಎಂದು ಹೇಳಿದರು.

ಈಗ ನಾನು ಯಾರನ್ನು ದೂಷಿಸಲು ಹೋಗುವುದಿಲ್ಲ. ನ್ಯಾಯಾಲಯ ಏನು ಹೇಳಿದೆಯೋ ಆ ತೀರ್ಪನ್ನು ಓದಬೇಕು. ವಕೀಲರ ಜೊತೆ ಸೇರಿ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ತಿಳಿಸಿದರು.

ಮುರಘಾ ಶ್ರೀ ಖುಲಾಸೆಯಾದ ಪ್ರಕರಣದ ತೀರ್ಪು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಬೇಕು. ಸರ್ಕಾರದ ಮೇಲ್ಮನವಿ ಹಾಕದೇ ಇದ್ದರೆ ನಾವೇ ಸಂತ್ರಸ್ತ ಬಾಲಕಿಯರ ಪರ ನಿಂತು ಅರ್ಜಿ ಹಾಕುತ್ತೇನೆ. ಇಡೀ ವ್ಯವಸ್ಥೆಯೆ ಆರೋಪಿಗಳ ಪರ ನಿಂತಿತು. ಸಂತ್ರಸ್ತ ಮಕ್ಕಳ ಪರ ಯಾರು ನಿಲ್ಲಲಿಲ್ಲ. ತನಿಖೆಯಲ್ಲಿ ನೂರಾರು ತಪ್ಪು ಮಾಡಲಾಗಿದೆ ಎಂದು ಸ್ಟ್ಯಾನ್ಲಿ ಹೇಳಿದರು.

The Chitradurga court has acquitted Murugha Math’s seer, Murugha Shree, in the POCSO case filed against him. The Second Additional District and Sessions Court declared that the seer is not guilty, bringing relief to the Math and its followers.